
ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು; ಆಯುವೆಂಬಾ ಪಕ್ಕಿ ಪಾರ್ವ ದೂರವು ಕಿರಿದು; ಪಾರುತಿಹುದದು ನೋಡು; ಬಾ, ಮನಸುಮಾಡು. *****...
ನೀ ಎದುರು ಸಿಕ್ಕಾಗ ಸುಮ್ಮನೆ ನಕ್ಕಾಗ ಏರಿದ ಎದೆಬಡಿತ ಬೋಧಿಸಿತು ಪ್ರೀತಿಯ ರೇಖಾಗಣಿತ *****...
ಮಾಂದಳಿರ ಸವಿಯುಂಡು ಮೈಮರೆತ ಬುಲ್ಬುಲನು ಚೆಲು ಗುಲಾಬಿಯ ನನೆಯನರಳಿಸಲೆಂದು ನಗು ನಗುತೆ ಕುಣಿದಾಡಿ ಪಾಡುತಿಹನಾಲೈಸು: ಕಳ್ಲು ಚೆಂಗಳ್ಲು, ಸವಿಗಳ್ಲು ಕಳ್ಳೆನುತೆ. *****...
ಜಗದ ಪಾಲಿನ ಜಾಣ ನಿನ್ನ ಎದುರು ಕೋಣನಾಗಿ ತಲೆ ಬಾಗಿಸಿದ್ದು ನಟನೆ ಅಲ್ಲವೆಂಬ ಸತ್ಯ ನಿನಗೆ ಅರಿವಾಗಿದ್ದಿದ್ದರೆ ದಡ್ಡತನದ ಮೂಲ ತಲುಪಬಹುದಿತ್ತು *****...
ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ; ಜಾನಿಗಳ ಜೀವವೇಕಾಂತವೆಳಸುತಿದೆ; ಕೊಳದ ಕೆಲದಲಿ ತಳಿರ ಮರಲ ಸೊಂಪನರುತಿದೆ; ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ. *****...
ನನ್ನವೇ ಆದ ತಿಕ್ಕಲು ಕನವರಿಕೆಗಳು ಈಗ ನನಗೂ ಬೇಡವಾಗಿವೆ ಅವಳಿಗೆ ನಾನು ಬೇಡವಾದಂತೆ *****...
ಕನಸೊಂದ ಮುಂಜಾವದಲಿ ಕಂಡೆನೇನೆಂಬೆ ನರವಟಿಗೆಯಿಂದ ಸದ್ದೊಂದಾದುದಿಂತು : “ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ ನಿಮ್ಮೊಡಲ ಜೀವರಸವಿಮರದೀಮುನ್ನ.” *****...
ನನ್ನ ಅಳುವ ಪರವಾನಗಿ ಕಸಿದುಕೊಂಡು ಹೋದ ಅವಳ ನಗೆಗೆ ಕಣ್ಣೀರು ಹಿಡಿಶಾಪ ಹಾಕುತ್ತಿದೆ *****...
ಮೂಡಲತ್ತಣ ಬೇಡನಿದೊ! ಸಾರಿ ಬಂದೀಗ, ನೋಡು, ಸುಲ್ತಾನನರಮನೆಯ ಗೋಪುರಕೆ ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ; ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ. *****...













