
ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ ||ಪ|| ನೆನ್ನೆ ಮೊನ್ನೆಯೆಂದು ತನ್ನೊಳಗೆ ತಾ ತಿಳಿದು ತನ್ನೇಸ್ಹುಣ್ಣಿವಿ ದಿನಾ ಕನ್ನೆಯಮಾಸಿ ಕೂಡಿ ಬಂದು ||ಅ.ಪ.|| ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ ಜೀವ ಹೋದಿತು ಸತ್ತಾ ಮೋಹ ಮದಗ...
ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ ||ಪ|| ಪದುಮ ದಳದ ಮದವು ಬೆಳೆದು ಸದಮಲಾತ್ಮಯೋಗ ತುದಿಯ- ಲದನುಯೇರಿ ಮೆರೀದು ಬೆರಿದು ಕದಲದಂತೆ ಕರುಣ ರಸದ ||೧|| ಚಂದ್ರ ಸೂರ್ಯರೊಂದುಗೂಡಿದಾ ಅಲ್ಲೆ ಮೂಡಿದಾ ರಂಧ್ರದೂಳಗ...
ಶಿವಲೋಕದಿಂದ ಒಬ್ಬ ಸಾಧು ಬಂದಾನು ಶಿವನಾಮವನ್ನು ಕೇಳಿ ಅಲ್ಲಿ ನಿಂತಾನು ||ಪ|| ಮೈತುಂಬ ಬೂದಿಯನ್ನು ಧರಿಸಿಕೊಂಡಾನು ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||೧|| ಮೈಯಲ್ಲಿ ಕಪನಿಯ ತೊಟ್ಟುಕೊಂಡಾನು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು ||೨|| ಊರ ...
ಬಾ ನೋಡುನು ಭಾಮಿನಿ ಈ ನಗರದಿ ಆ ಮಹಾಮಹಿಮನು ಬಂದಿಹನಮ್ಮಾ ಮೀನಾಕ್ಷಿಯನುಭವಮಂಟಪ ಮಧ್ಯದಿ ತಾನೇತಾನಾಗಿ ಕುಳಿತಿಹನಮ್ಮಾ || ೧ || ಎಡ್ಡಿಸುತಲಿ ಮನಿ ಮನಿ ತಿರುಗುತ ಘನ ಕಡ್ಡಿ ಕಸರು ಕಳೆದಿಹನಮ್ಮಾ ದುಡ್ಡು ಕಾಸಿಗೆ ಕೈಯೊಡ್ಡದೆ ಕಲಿಯೊಳು ಗುಡ್ಡನೇರಿ ...
ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ ಸಾಧುರಿಗೊಂದಿಸುವೇ ||ಪ|| ಬೇಧವನಳಿದಾತ್ಮ ಭೋಧವ ತಿಳಿಯುತಾ ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ ||೧|| ಕಾಲಕರ್ಮವ ತುಳಿದು ಕಾಲಿಲೆ ಒದ್ದು ...
ಸಾಧು ನೋಡಲೋ ಇವನು ಸಾಧು ನೋಡಲೋ ಭೋಧಾನಂದದಿ ಮೆರೆವ ಮಹಾತ್ಮರು ||ಪ|| ಎಂಟು ಗುಣಗಳ ಅಳಿದು ಕುಂಟನಾದನೋ ಸೊಂಟರಗಾಳಿಗೆ ಶಿಲ್ಕಿದೀಲೋಕದಿ ಕಂಠದಲಿ ಕಪ್ಪವನು ಧರಿಸಿದವ ||೧|| ಆಸೆ ಅಳಿದನು ಕರ್ಮ ಪಾಶ ಕಳೆದನು ವಸುಮತಿಗೆ ನೆಲಗುಡ್ಡದಿ ನೆಲಸಿಹ ಭಾಸುರ ...
ಓಂ ದೇವದೇವರ ದೇವರ ಮಗನ ದೇವಲೋಕದ ಬುಡುಬುಡಿಕ್ಯಾ ನಾ ಭಾವಶುದ್ಧವಾಗಿ ಕೇಳಿರಿ ಸುಮ್ಮನ ದೇವಲೋಕದ ಸತ್ವಾಧೀನ ||೧|| ಪಡುವಣ ದಿಕ್ಕಿನ ಬುಡುಬುಡಿಕ್ಯಾ ನಾ ಮೂಡಣ ದೇಶವ ನೋಡುತ ಬಂದೆ ಬೇಡಿ ಬೇಡಿದ್ದನು ಹೇಳುವ ಕೇಳೆ ರೂಢಿಯೊಳಗೆ ನಾ ನುಡಿಯುಪವೆ ತಾಯಿ |...
ಸಾಧುವಿಗೊಂದಿಸುವೆ ಸತ್ಯದಿ ||ಪ|| ಬೇಧ ಕ್ರೋಧ ಭೇದಿಸಿ ಮೋದದಿ ಸದ್ಗುರುಪದಕ್ಹೊಂದಿದಾ ||೧|| ಆಲಿಗಳ ಬಲದಲ್ಲಿ ಬ್ರಹ್ಮದ ಸಾಲು ಜ್ಯೋತಿಯ ಮಾಲಿನೊಳಗಿರುವ ||೨|| ದೋಷಭವದುರಿತನಾಶ ಶಿಶುನಾಳಧೀಶನೊಳು ಮಹೇಶನೊಲಿಸಿದಂಥಾ ||೩|| ****...
ಸಾಧುಗಳಿಗೆ ಶಿವನ ಚಿಂತೆಯು ಅನಂತವು ||ಪ|| ಬೇಧಭಾವವಳಿದು ಮಾಯಾ ಭ್ರಾಂತಿ ಕಳೆದು ಭವನ ತುಳಿದು ಶಾಂತರೂಪದಿಂದ ಮೆರೆಯುವ ||ಅ.ಪ.|| ದುಡ್ಡು ಹಣವು ಹೆಡ್ಡತನವನು ಜಡದೊತ್ತೆ ಗುಡ್ಡನೇರಿ ತೋರ್ಪ ಫನವನು ಅಡ್ಡಬರುವ ಅಖಿಲ ವಿಷಯ ಜಡ್ಡುಗಳಿದು ಜನನ ಮರಣ ಕ...
ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೇ ನೀವು ಒಲ್ಲದಿದ್ದರೆ ಇಲ್ಲೆ ಇರತೀರೇನ್ರೇ ||ಪ|| ಕಲ್ಲೌ ಮಲ್ಲೌ ಕೂಡಿಕೊಂಡು ದೀವಳಿಗೆ ಹಬ್ಬದಲ್ಲಿ ಉಲ್ಲಾಸದಿಂದ ಅಲ್ಲಮಪ್ರಭುವಿನ ಮರೆತೀರೇನ್ರೇ ಇಲ್ಲೇ ಇರತೀರೇನ್ರೇ ||ಅ.ಪ.|| ಮಡಿಯನುಟ್ಟು ಮೀಸಲದಡಗಿ ಮಾಡಬೇಕ...













