ಸಾಧು ನೋಡಲೋ ಇವನು ಸಾಧು ನೋಡಲೋ
ಭೋಧಾನಂದದಿ ಮೆರೆವ ಮಹಾತ್ಮರು ||ಪ||

ಎಂಟು ಗುಣಗಳ ಅಳಿದು ಕುಂಟನಾದನೋ
ಸೊಂಟರಗಾಳಿಗೆ ಶಿಲ್ಕಿದೀಲೋಕದಿ
ಕಂಠದಲಿ ಕಪ್ಪವನು ಧರಿಸಿದವ ||೧||

ಆಸೆ ಅಳಿದನು ಕರ್ಮ ಪಾಶ ಕಳೆದನು
ವಸುಮತಿಗೆ ನೆಲಗುಡ್ಡದಿ ನೆಲಸಿಹ
ಭಾಸುರ ಶಿಶುನಾಳಧೀಶಗೊಲಿದು ||೨||

****