ಅರಿಯಬಹುದು ಕುರುಹಿಡಬಾರದು ಭಾವಿಸಬಹುದು ಬೆರೆಸಬಾರದು ಕಾಣಬಹುದು ಕೈಗೆ ಸಿಲುಕದು ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ಶರಣರು ಬಲ್ಲರು [ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ] ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-...

ಜೀವನದ ಹಲವಾರು ಘಟ್ಟಗಳಲ್ಲಿ ಬಾಲ್ಯ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಕುವ ಕಾಲ. ಆಗ ಮೈಗೂಡಿಸಿಕೊಳ್ಳುವ ಉತ್ತಮ ಗುಣಗಳು ಅವನ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಸುಂದರ ಒಡವೆಗಳಾಗುತ್ತವೆ. ಜೀವನವಿಡೀ ಅವನ ಜೊತೆಗಿರುತ್ತವೆ. ಬೆಳೆಯುವ ಮಕ...

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿ...

(ಸಿರಾದಲ್ಲಿ ನಡೆದ ತುಮಕೂರು ಜಿಲ್ಲೆಯ ಎಂಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ) ಎಲ್ಲರಿಗೂ ನಮಸ್ಕಾರಗಳು ನನ್ನನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಸಮಸ್ತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸ...

ಅರಸಿ ಅರಸಿ ಹಾ ಹಾ ಎನುತಿದ್ದೆನು ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನ...

ವರ್‍ಷದಲ್ಲಿ ಲೆಕ್ಕಹಾಕಿ ನೋಡಿದರೆ ಕವನ ಸಂಕಲನಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಅಂದರೆ ಕಾವ್ಯ ಕಟ್ಟುವವರ ಸಂಖ್ಯೆ ಹೆಚ್ಚಾಗಿಯೇ ಕಾಣಿಸುತ್ತದೆ. ಚಳವಳಿಯ ಹಿನ್ನೆಲೆಯಿಂದ, ತಾತ್ವಿಕ ಹಿನ್ನೆಲೆಯಿಂದ ವಿಪುಲವಾಗಿ ಸೃಷ್ಟಿಯಾದ ಕಾವ್ಯದ ಹುಲುಸಾದ ಬೆಳೆ...

ಇದುವರೆಗೆ ದರೋಡೆ, ಕೊಲೆಗಡುತನ, ಅತ್ಯಾಚಾರಗಳನ್ನೆಸಗಿದ ಧೂರ್ತರು ಸುಳ್ಳು ಸಾಕ್ಷಿ ಮತ್ತು ಹಣಬಲಗಳಿಂದ ಸತ್ಯ ಸಂದರೆಂದು ತೀರ್ಮಾನವಾಗಿ ಮತ್ತೆ ರಾಜಾರೋಷವಾಗಿ ತಿರುಗಾಡುತ್ತಿದ್ದರು. ಅಪರಾಧಿ ಎಂದು ತಿಳಿದರೂ ಒಪ್ಪಿಕೊಳ್ಳದ ವ್ಯಕ್ತಿಗಳು ಇಂದು ನೂತನ ...

ಕೆಲವೊಮ್ಮೆ ಕವಿತೆ, ಕತೆ, ಕಾದಂಬರಿ ಅಥವಾ ಪ್ರಬಂಧಗಳಂಥ ‘ಪಠ್ಯ’ಗಳಲ್ಲಿನ ಶಬ್ದಗಳನ್ನೋ ಸಂದರ್ಭ ಸೂಚನೆಗಳನ್ನೋ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಅಡಿಟಿಪ್ಪಣಿಗಳ ಅಥವಾ ಕೊನೆಟಿಪ್ಪಣಿಗಳ ಸಹಾಯ ಬೇಕಾಗುತ್ತದೆ; ಆಯಾಪುಟಗಳ ಅಡಿಯಲ್ಲೇ ಮುದ್ರಿತವಾದುವು ಅಡ...

ದಡೂತಿ ಮನುಷ್ಯನೊಬ್ಬ ವೈದ್ಯರೊಬ್ಬರ ಬಳಿ ಬಂದು ಕೇಳಿದ- “ಡಾಕ್ಟ್ರೆ ಕೂಡಲೇ ನಾನು ಇಪ್ಪತ್ತು ಪೌಂಡ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು” ಡಾ|| ಶೀಲಾ: “ನಿಮ್ಮ ಎರಡು ಕಾಲು ಕತ್ತರಿಸಿಕೊಳ್ಳಿರಿ…” *...

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ [ಅರಲುಗೊಂಡ ಬತ್ತಿದ ಬರ...

1...4849505152...189

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...