
ಕವಿಯುತಿದೆ ಮೋಡ ಸುಳಿಗಾಳಿ ಕಂಪ ಹೀರಿ ನನ್ನೆದೆಯ ಭಾವ ತುಂಬಿ ಚದುರಿದೆ ಮೋಡ ಬಾನಲಿ || ಕರಗುತಿದೆ ಮೋಡ ಸುಳಿಗಾಳಿ ತಂಪಲೆರೆದು ನನ್ನದೆಯ ಕಾಮನೆ ಹೊರಹೊಮ್ಮಿ ಚಿಮ್ಮಿ || ಹಸಿರಾಗುತಿದೆ ನೆಲವು ಬಣ್ಣಗಳ ತುಂಬಿ ಚೆಲ್ಲಿ ಭಾವ ಸಂಗಮದಿ ನಿಶೆಯಿಂದ ಹಸಿರ...
ಅವ್ವನ ಹಸಿರ ರೇಶಿಮೆ ಸೀರೆ ನೆರಿಗೆಯ ನಕ್ಷತ್ರಗಳು ನಾವು || ಮೇಘವರ್‍ಣಗಳ ನಡುವೆ ಹೂವು ಗೊಂಚಲುಗಳಾಗೆ ಅವಳ ಸೆರಗ ಬಳ್ಳಿಗಳು ನಾವು || ಅವಳ ತನುಮನದ ಹೊಲಗದ್ದೆ ಗಳ ಉಳುಮೆ ಗರಿಯಲಿ ಗರಿಗೆದರಿದ ನವಿಲುಗಳು ನಾವು || ಸಾವಿರದ ಸಹಸ್ರ ಕಣ್ಣುಗಳ ಸಹಸ್ರ ...
ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹಾರಾಡ್ಕೊಂಡ್ ಹೋಯ್ತೋ || ಆ ಮರ ಈ ಮರ ನೆಲ ಮರ ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ || ಯಾವ ಜೀವ ಜೀವಿಗಳ ದಾಹದಲ್ಲಿ ಮಾಡಿದ ಕರ್‍ಮ ಅಂಗಸಂಗಗಳ ಬೆಸೆದ...
ಎಲ್ಲಿ ಅಡಗಿರುವೆ ಹೇಳೆ ಕೋಗಿಲೆ ನಿನ್ನ ದನಿಯು ಕೇಳಿ ಬರುತಿದೆ || ಯಾವ ರಾಗದ ಭಾವವೂ ಯಾವ ತಾಳದ ವೇಗವೂ ಯಾರ ಪ್ರೇಮದ ಪಲ್ಲವಿಯು ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ || ಎಷ್ಟು ದೂರವಿರುವೇ ನೀನು ಯಾವ ಮರದಲ್ಲಡಗಿರುವೇ ನಿನ್ನ ಪ್ರೇಮ ಪಲ್ಲವಿಗೆ ಚರಣಗಳ...
ಮುಗಿದ ಕತೆಗೆ ತೆರೆಯ ಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು ||ಇದು|| ಭಾವಲತೆಯ ದಳವ ಬಿಡಿಸಿ ಅರಳಿ ಚಂದ ಹೂವ ಮುಡಿಸಿ ಮುಡಿಯ ಏರಿ ಒಲವ ತೋರಿ ಮನವ ಸೆಳೆಯಿತು ಚಂಚಲ ಮನಸು || ಕತ್ತಲೆಯ ನೀಗಿಸ...
ನಮ್ಮ ಊರು ಕನ್ನಡ ನಮ್ಮ ನೆಲವು ಕನ್ನಡ ನಾವೇ ನಾವು ಕನ್ನಡಿಗರು|| ಹಚ್ಚಿರಿ ಹಣತೆಯ ಹಣತೆಯಿಂದ ಹಣತೆಗೆ ಸಾಲು ಸಾಲು ಬೆಳಗಿರಿ ನಾವೆ ನಾವು ಆಶಾಕಿರಣಗಳು|| ಸ್ವಾಭಿಮಾನದ ನೆಲವು ಆತ್ಮಾಭಿಮಾನದ ಬೀಡು ಕೆಚ್ಚೆದೆಯ ಮಣ್ಣಿನ ಮಕ್ಕಳು ಕನ್ನಡಾಂಬೆಯ ಕುಲಜರು...
ಒಂದೇ ಒಂದು ಮನದಾಳದ ಮಾತೊಂದು ಪ್ರೀತಿಯೊಂದು ಪ್ರೇಮ ಪರಾಗಸ್ಪರ್‍ಶ ಒಂದು|| ಮಾತು ಒಂದು ಜೀವ ಒಂದು ಸ್ನೇಹ ಸೆರೆಯ ಬಯಕೆ ನೂರೊಂದು|| ಭಾವನೆಗಳೆಂಬ ಹೂವು ಒಂದು ಅರಳಿ ಸೆಳೆವ ನೋಟ ಒಂದು ಮೌನ ತಾಳಿದ ವಿರಹ ನೂರೆಂಟು|| ಜಗವನು ಮಣಿಸುವ ಮನುಜನ ಸೆಳೆಯುವ...
ಹೊಸತು ಹೊಸತು ಬರಲಿ ಹೊಸತಾದ ಚಿಗುರು ಬರಲಿ|| ಹೊಸತಾದ ಬಂಧ ಇರಲಿ ಹೊಸತಾಗಿ ನಾಳೆಯು ಬರಲಿ|| ನೆನ್ನೆಯ ಚಿಂತೆ ನೆನ್ನೆಗೆ ಕಳೆಯಲಿ ಇಂದಿನ ಚಿಂತೆ ಇಂದಿಗೆ ಕರಗಲಿ|| ಮನಸ್ಸು ಮನಸ್ಸು ಹೊಸತಾದ ಕನಸು ನನಸಾದ ಬಾಳು ಸೋಲೆಂದು ಗೆಲುವ ಕಾಣಲಿ|| ಮನದ ಮಾತಿ...








