ನಮ್ಮ ಊರು ಕನ್ನಡ
ನಮ್ಮ ನೆಲವು ಕನ್ನಡ
ನಾವೇ ನಾವು ಕನ್ನಡಿಗರು||

ಹಚ್ಚಿರಿ ಹಣತೆಯ
ಹಣತೆಯಿಂದ ಹಣತೆಗೆ
ಸಾಲು ಸಾಲು ಬೆಳಗಿರಿ
ನಾವೆ ನಾವು ಆಶಾಕಿರಣಗಳು||

ಸ್ವಾಭಿಮಾನದ ನೆಲವು
ಆತ್ಮಾಭಿಮಾನದ ಬೀಡು
ಕೆಚ್ಚೆದೆಯ ಮಣ್ಣಿನ ಮಕ್ಕಳು
ಕನ್ನಡಾಂಬೆಯ ಕುಲಜರು||

ಸಾವಿರಾರು ಭಾಷೆ ಇರಲಿ
ಯಾರ ತಾಯಿ ಯಾವ ಮಡಿಲು
ಭಾಷೆ ರೀತಿ ನೀತಿ ಇರಲಿ
ಕತ್ತಲು ಬೆಳಕು ಒಂದೇ
ಜಗದಿ ಬೆಳಗುವುದೊಂದೆ ಜ್ಯೋತಿಯು||

ಸುಪ್ರಭಾತ ರವಿಯ ಕಿರಣ
ಕನ್ನಡಮ್ಮ ನೆಲದ ಕರುಣ
ಅನಂತ ದಿಗಂತದಿಂ ಸಾರುತ
ಸಾಗುವ ಕನ್ನಡ ಕನ್ನಡ
ನಾವು ಕನ್ನಡಿಗರೆಂದು
ಕನ್ನಡವು ನಮ್ಮ ಉಸಿರೆಂದೂ ಬಾಳಲಿ||
*****

Latest posts by ಹಂಸಾ ಆರ್‍ (see all)