
ಮುಗಿಲ ಲೋಕಕೆ ಮೌನ ಲೋಕಕೆ ಲಿಂಗ ತತ್ವಕೆ ಸ್ವಾಗತಂ ಶೂನ್ಯದಾಚೆಯ ಮಹಾ ಮೌನಕೆ ಜ್ಯೋತಿ ಲಿಂಗಕೆ ಸ್ವಾಗತಂ ಜಡವು ಜ೦ಗಮವಾಗಿ ಅರಳಿತು ಪರಮ ಗುರುವಿಗೆ ಸ್ವಾಗತಂ ತಪವು ತು೦ಬಿತು ತಂಪು ತೂರಿತು ಜ್ಞಾನ ಪೀಠಕೆ ಸ್ವಾಗತಂ ಉಸಿರು ಉಸಿರಿಗೆ ಲಿಂಗ ಪೂಜೆಯು ಪ್...
(ಮಂಗಳಾರತಿ) ಸೂರ್ಯ ಪಾದಾ ಚ೦ದ್ರ ಪಾದಾ ಕಡಲ ನಾದಾ ಮಂಗಳಾ ಆದಿ ರೇಣುಕ ವೇದ ಘೋಷಾ ಭುವನ ಭಾಸ್ಕರ ಮ೦ಗಳಾ ಅತ್ತ ಅಗೋ ವೀರಭದ್ರಾ ರುದ್ರ ತಾಂಡವ ಮಂಗಳಾ ಇತ್ತ ಇಗೋ ಢಮರು ಢಮರುಗ ಭುವನ ಭೈರವ ಮಂಗಳಾ ಜ್ಞಾನ ಯೋಗಿಯೆ ಪ್ರೇಮ ರಾಜ್ಯವೆ ನಾದ ಬಿಂದುವೆ ಮಂಗಳ...
ಗುರುವೆ ನಿಮ್ಮ ಚರಣ ತುಂಬಿ ತುಂಬಿ ಹೂವು ಅರಳಿತು ನಿಮ್ಮ ಸ್ಮರಣ ಸವಿವ ದುಂಬಿ ಜೀವ ಸ್ಫೂರಣ ಪಡೆಯಿತು ಕಲ್ಲು ಕೊರಡು ಕಮಲವಾಯ್ತು ಮನೆಯು ಮಂದಿರವಾಯಿತು ಆತ್ಮದೀಪ ದೇವ ದೀಪ ಜ್ಯೋತಿ ರೂಪ ಪಡೆಯಿತು ಮನದ ಮಾನಸ ಸರೋವರದಲಿ ರಾಜ ಹಂಸೆಯು ತೇಲಿತು ಮಳಲು ಹ...
ಬಾಳೆಹೊನ್ನೂರಿನಲಿ ತಾಯಿ ಪ್ರೀತಿಯ ಕಂಡೆ ಮಾವು ಮಲ್ಲಿಗಿ ಜಾಜಿ ಬಕುಲ ಕಂಡ ಬೆಟ್ಟ ಬೆಟ್ಟದ ಮ್ಯಾಲ ಮುಗಿಲ ಅಟ್ಟವ ಕಂಡೆ ಪಂಚಪೀಠದ ಚಲುವ ತೇರು ಕಂಡೆ ವೇದಶಾಸ್ತ್ರದ ಮಣಿಯ ಸಕಲ ಆಗಮ ಗಣಿಯ ಪಂಚ ಪಂಚಾಕ್ಷರಿಯ ಗಿಣಿಯ ಕಂಡೆ ಚಿ೦ತೆ ಹೋಯಿತು ಇಲ್ಲಿ ಚಿತೆಯ...
ಬಾರ ಗೆಳತಿ ಬಾರೆ ಗುಣವತಿ ಬಾಳೆಹಳ್ಳಿಗೆ ಹೋಗುವಾ ಗುಟ್ಟಬೆಟ್ಟದ ಗಂಧ ಗಿರಿಗಳ ಸ್ವಾಮಿ ಪಾದವ ಸೇರುವಾ ಎಲ್ಲಿ ಕೋಗಿಲೆ ಶಿವನ ಪೂಜೆಗೆ ಗೀತ ಮಂತ್ರವ ಹಾಡಿವೆ ಎಲ್ಲಿ ಕಾನನ ಹಸಿರು ಮರಗಳು ಹೂವು ಹಣ್ಣನು ನೀಡಿವೆ ಸುತ್ತ ಮುತ್ತಾ ಬೀಸುಗಾಳಿಯು ಮಹಾಮಂತ್ರ...
ಚಿಂತಿ ಯಾತಕ ಸಂತಿ ಯಾತಕ ಚಿತ್ತ ಚಿನುಮಯ ಓಂ ಓಂ ಬಾಳೆಹಳ್ಳಿಯ ಲಿಂಗಬಳ್ಳಿಗೆ ಲಿಂಗಗೊಂಚಲು ಓಂ ಓಂ ಮಾತು ಮುಗಿಯದು ಶಬ್ದ ಸಾಲದು ನೋಡು ಜ್ಞಾನದ ಎತ್ತರಾ ಸತ್ಯ ಶ್ರೇಷ್ಠರು ಸಾರುತಿರುವಾ ಲಿಂಗತತ್ವವೆ ಉತ್ತರಾ ವೇದ ಆಗಮ ಗೀತ ಶಾಸ್ತ್ರದ ಗಂಟು ಗದಡಿಯ ಒ...
ಅರುಹೆ ಗುರುವು ಕುರುಹೆ ಲಿಂಗ ಯಾಕೆ ಅಂತರಾ ಆದಿ ಗುರುವು ನಾದ ಜ೦ಗಮ ಬೇಡ ಬೆಂತರಾ ಕನಸು ನೀನೆ ಮನಸು ನೀನೆ ಚೈತ್ರ ಚಂದ್ರಮಾ ಯೋಗ ಭೋಗ ಜೀವ ರಾಗ ವಿಶ್ವ ಸ೦ಗಮಾ ಸೋಲು ಗೆಲುವು ನೋವು ನಲಿವು ಲಿಂಗ ಲೀಲೆಯು ಜನನ ಮರಣ ಬಾಳ ಪಯಣ ಹರನ ಕರುಣೆಯು ಒಡಲ ಕಡಲ ...
ಸರಸ ಮುಖಿಯರೆ ಬಾರೆ ಸಖಿಯರೆ ಚಂದ ಚಲುವಿನ ತೋಟಕೆ ಕಮಲ ಮಲ್ಲಿಗಿ ಜಾಜಿ ಸಂಪಿಗಿ ಹೂವು ಎತ್ತಿರೆ ಗುರುವಿಗೆ|| ರಾಜ ರಂಭಾಪುರಿಯ ಗುರುಗಳು ಇಕೋ ಗುರುಕೇದಾರರು ಶ್ರೀಶೈಲದ ಉಜ್ಜಯಿನಿಯ ಕಾಶಿ ಕ್ಷೇತ್ರದ ಶ್ರೇಷ್ಠರು ಕಡಲು ಉಡುಗೆಯ ಮಾಡಿ ತೊಟ್ಟರು ಭುವನ ...
ಎಲ್ಲಿ ಮನುಕುಲ ಕೆರಳಿ ನಿಂತಿದೆ ಅಲ್ಲಿ ಗುರುಕುಲ ಅರಳಿದೆ ಎಲ್ಲಿ ಜನಮನ ಜಾರಿ ಬಿದ್ದಿದೆ ಅಲ್ಲಿ ಜಂಗಮ ಬೆಳಗಿದೆ ಐದು ನಡೆಮಡಿ ಎಂಟು ಉಡುಗೊರೆ ಆರು ಅಟ್ಟದ ಗುಡಿಯಿದು ಗುರುವು ಮುಟ್ಟಿದ ಮಂತ್ರ ಪೀಠದ ನೂರ ಒಂದರ ಮಠವಿದು ಯಾಕೆ ತಳಮಳ ಸಾಕು ಕಳವಳ ಕೇಳ...
ದೀಪ ಸಖಿಯರೆ ದೀಪ ಮುಖಿಯರೆ ದೀಪದಾರತಿ ಎತ್ತಿರೆ ಪರಮ ಪ೦ಚಾಕ್ಷರಿಯ ರತಿಯರೆ ಪಂಚ ಪೀಠಕೆ ಬೆಳಗಿರೆ ತನುವೆ ಹಣತೆಯು ಮನವೆ ತೈಲವು ಜ್ಞಾನದಾರತಿ ಎತ್ತಿರೆ ಕಾಯ ಕಾ೦ಚನ ಪ್ರೇಮ ಸಿಂಚನ ಚಂದ್ರ ಮುಖಿಯರು ಬೆಳಗಿರೆ ತಾಯಿ ಗುರುವಿಗೆ ತಂದೆ ಗುರುವಿಗೆ ಪ್ರೇಮ...







