ಸಾಲಾರ್‌ಜಂಗ್ ಮ್ಯೂಸಿಯಂನಿಂದ

ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು. ನಮಗೆ ಬರೇ ಕನ್ನಡಿ ಸಾಕು-ಅದನ್ನು...

ಅವರು

ಅವನ ಅನೇಕ ಹೆಂಡಂದಿರಿದ್ದರಲ್ಲ ಅವರೇನಾದರು? ಅವರೆ?  ಕೆಲವರು ಅವರವರ ಹುಟ್ಟೂರಿಗೆ ಹೊರಟುಹೋದರು.  ಇನ್ನು ಯಾರನ್ನೋ ಆಶ್ರಯಿಸಿದರು.  ಕೆಲವರು ಚಾರ್‌ಮಿನಾರಿನ ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು. ಹಳೆ ನಗರದ ಧೂಳು ಎಲ್ಲಾ ಹೂವುಗಳ ಮೇಲೂ ಕುಳಿತಿದೆ....

ಹವೇಲಿ

೧ ಈಗ ಈ ಹವೇಲಿಯಲ್ಲಿ ಯಾರೂ ಇಲ್ಲ.  ಇದು ಯಾರಿಗೆ ಸೇರಿದ್ದೊ ಯಾರಿಗೂ ತಿಳಿಯದು.  ಹೊರಗೆ ಬೀದಿಯಲ್ಲಿರುವ ಪಾನ್‌ವಾಲ ಮುದುಕನ ಕಣ್ಣುಗಳಲ್ಲಿ ಇದರ ಚರಿತ್ರೆ ಇಳಿದುಹೋಗಿರುವಂತಿದೆ.  ಆದರೆ ಅವನೇನೂ ಹೇಳಲೊಲ್ಲ.  ವೀಳ್ಯದೆಲೆ ಹೊಸೆಯುವ ಅವನ...

ರಾಮುಲುವೂ ಸೋಮುಲುವೂ

೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾನಿಸುತ್ತ ಅನುಮಾನಿಸುತ್ತ...

ಹೈದರಾಬಾದಿನಲ್ಲಿ

ಮೊದಲು ಹವೆಯ ಬಗ್ಗೆ ಮಾತಾಡಿದೆವು ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ ಪಕೋಡಾ ಮಸಾಲೆ ಮೆಣಸು ಕಾಯಿಸುವ ಹೊಗೆ ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ ಎಮ್ಮೆಗಳ ಅಸಾಂಗತ್ಯ ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು ವಾಸ್ತುಶಿಲ್ಪದ ಪ್ರಕಾರ ಇದಕ್ಕೆ...

ಅವರವರ ಚಾಳಿ

ಎಲ್ಲರಿಗೂ ಒಂದೊಂದು ಚಾಳಿ ಇರುವುದಿಲ್ಲವೆ, ಹೇಳಿ. ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ ಅಮವಾಸ್ಯೆಯ ರಾತ್ರಿಗಳಲ್ಲಿ ಸುಮ್ಮನೇ ಅವನ ಮೌನಮುರಿಯುವ ಕಥಾವಳಿ. ಪ್ರಶ್ನೆಗಳನ್ನು ಹಾಕುತ್ತಲೇ ಸಂದೇಹಗಳನ್ನು ಎತ್ತುತ್ತಲೇ...

ಪ್ರಿಯದರ್ಶಿಯಾದ ಅಶೋಕನು

ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು. ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾಕರ ಭಯವಿರಲಿಲ್ಲ ಪೇಟೆಗಳಲ್ಲಿ ಜನರು ಮನೆಬಾಗಿಲುಗಳನ್ನು ತೆರೆದಿಟ್ಟು ಮಲಗುತ್ತಿದ್ದರು...

ಒಂದು ಆಲದ ಮರ

೧ ಈ ಆಲದ ಮರವನ್ನು ನೋಡಿ: ಇದರ ಕೆಳಗೆ ಯಾವ ಮಕ್ಕಳೂ ಆಡಲಿಲ್ಲ, ಇದರ ಎಲೆಗಳು ಗಾಳಿಯ ಓಟಕ್ಕೆ ಗಲಗಲಿಸಲಿಲ್ಲ, ಇದರ ಕೊಂಬೆಗಳಿಂದ ಯಾರೂ ನೇಣುಹಾಕಿಕೊಳ್ಳಲಿಲ್ಲ- ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ? ಅತ್ಯಂತ ನೀರಸವಾದ ಈ...

ಕಾಪಿ ಹಿತ್ತಿಲ ಮನೆ (ಈಚೆಗೆ ಹೋದಾಗ)

ಇಲ್ಲಿ ಹಿಂದೊಮ್ಮೆ ಕೋಣೆಗಳ ತುಂಬ ಸಿಗರೇಟು ತುಂಡುಗಳಿದ್ದವು.  ಹರಿದ ಕಾಗದಗಳಲ್ಲಿ ಅಕ್ಷರಗಳು ಚೂರಾಗಿ ಎಲ್ಲೆಲ್ಲೂ ಬಿದ್ದಿದ್ದವು.  ಪುಸ್ತಕದ ಅಟ್ಟಳಿಕೆಯಲ್ಲಿ ಅನಂತಮೂರ್ತಿ, ಲಂಕೇಶ ಒಟ್ಟಿಗೇ ಕುಳಿತ್ತಿದ್ದರು. ಮೇಜಿನ ಮೇಲಿದ್ದ ಮೈಸೂರಿಂದ ತಂದ ಆನೆಯ ಮೈಯೆಲ್ಲ ಹೆದ್ದಾರಿಯಿಂದೆದ್ದ...

ಈಗಿಲ್ಲದ

೧ (ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ ಅವನ ಮೈಮೇಲೆ ಒಂದೆರಡು...