ಅಮ್ಮ ನಿನ್ನ ಕೈಯ ಹಿಡಿದು
ನಡೆಯ ಕಲಿತೆನು
ಅಮ್ಮ ನಿನ್ನ ಮಾತ ಕೇಳಿ
ನುಡಿಯ ಕಲಿತೆನು

ಅಮ್ಮ ನಿನ್ನ ಕಣ್ಣಿನಲ್ಲಿ
ನನ್ನ ಬಿಂಬ ಕಂಡೆನು
ನಿನ್ನೆದೆಯ ಹಾಲಿನಲ್ಲಿ
ಅಮೃತವುಂಡೆನು

ಪೂಜೆ ಬೇಡ ಧ್ಯಾನ ಬೇಡ
ನೀನೆ ನನ್ನ ದೇವರು
ನಿನಗಿಂತ ದೊಡ್ಡವರಿಲ್ಲ
ನನಗೆ ಇನ್ನು ಯಾವರು
*****

ತಿರುಮಲೇಶ್ ಕೆ ವಿ