ಬೆಳಗಾಗೆದ್ದರೆ ಬೆಳಗ್ಗೇ ಫೂ ಫೂ
ಮಧ್ಯಾನ್ನಾದರೆ ಮಧ್ಯಾನ್ನ ಫೂ ಫೂ
ಮಧ್ಯಾನ್ನ ಮೇಲೆ ಸಂಜೆಗು ಘೂ ಘೂ
ಆಚೆಗೆ ಫೂ ಫೂ ಈಚೆಗೆ ಫೂ ಫೂ
ಎಲೆಯಡಿಕೆಯಜ್ಜನಿಗೆ ಪುರುಸೊತ್ತೆ ಇಲ್ಲ

ಮರವ ಕಂಡರೆ ಮರಕ್ಕೆ ಫೂ ಫೂ
ಗಿಡವ ಕಂಡರೆ ಗಿಡಕ್ಕೆ ಫೂ ಫೂ
ಮಡಿಕೆಗು ಫೂ ಫೂ ತಡಿಕೆಗು ಫೂ ಫೂ
ಆಚೆಗೆ ಫೂ ಫೂ ಈಚೆಗೆ ಫೂಫೂ
ಎಲೆಯಡಿಕೆಯಜ್ಜನಿಗೆ ಫರಕೇ ಇಲ್ಲ

ಬೆಕ್ಕಿಗೆ ಫೂ ಫೂ ನಾಯಿಗೆ ಫೂ ಫೂ
ಓತಿಗು ಫೂ ಫೂ ಕೋತಿಗು ಫೂ ಫೂ
ಹುಲಿಯ ಕಂಡರೆ ಹುಲಿಗೂ ಫೂ ಫೂ
ಆಚೆಗೆ ಫೂ ಫೂ ಈಚೆಗೆ ಫೂ ಫೂ
ಎಲೆಯಡಿಕೆಯಜ್ಜನಿಗೆ ಭಯವೇ ಇಲ್ಲ

ಕತೆ ಹೇಳಜ್ಜ ಎಂದರೆ ಫೂ ಫೂ
ಐದೈದ್ಲೆಷ್ಟಜ್ಜ ಎಂದರೆ ಫೂ ಫೂ
ಹಿಮಾಲಯ ಎಲ್ಲಜ್ಜ ಎಂದರೆ ಫೂ ಫೂ
ಸೋಮ್ವಾರ ನಂತರ ಯಾವಾರ ಫೂ ಫೂ
ಆಚೆಗೆ ಫೂ ಫೂ ಈಚೆಗೆ ಫೂ ಫೂ
ಎಲೆಯಡಿಕೆಯಜ್ಜಗೆ ಮಾತೇ ಫೂ ಫೂ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)