ಕ್ವ್ರಾಕ್

ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು ಆಕ್ರಮಿಸಿದ ಶಬ್ದ: ಕ್ರ್‍ವಾಕ್. ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ. ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ. ಮನಸ್ಸಿನಲ್ಲೆ ಮೆಸ್ಸಿನ ಲೆಕ್ಕ ಕೂಡಿಸುತ್ತಿದ್ದೆ...

ಚೇಳೂ ಏಡಿಯೂ

ಚೇಳಿನ ಮೈ ತಾಮ್ರದ ಕಿಲುಬಿನ ಹಾಗೆ ಕಡುಪಚ್ಚೆ.  ಏಡಿಯ ಮೈ ಶ್ರೀಮಂತೆಯ ಉಗುರಿನ ಹಾಗೆ ನಸುಗೆಂಪು. ಚೇಳು ಒಂದೇ ಶಿಲೆಯಿಂದ ಕೆತ್ತಿ ಕಡೆದು ತೆಗೆದಂತಿದೆ.  ಏಡಿಯ ಕೈಕಾಲುಗಳು ಹೊಲಿದು ಸೇರಿಸಿದಂತಿವೆ. ಚೇಳು ಭಯೋತ್ಪಾದಕನಂತೆ ನಿಶ್ಚಿಂತೆಯಿಂದಿದೆ....

ಚಿಟ್ಟೆಗಳನ್ನು ಹಿಡಿಯುವುದು

ಚಿಟ್ಟೆಗಳನ್ನು ಹಿಡಿಯುವುದಕ್ಕೆ ಮೊದಲು ಒಂದು ಹೂದೋಟ ಬೇಕು, ಹೂದೋಟದಲ್ಲಿ ಹೂವುಗಳು ಬೇಕು, ಹೂವುಗಳಲ್ಲಿ ಚಿಟ್ಟೆಗಳು ಕೂತುಕೊಳ್ಳಬೇಕು. ಈಗ ಹೊರಡಿರಿ ಮೆಲ್ಲನೆ. ಎಷ್ಟು ಮೆಲ್ಲನೆ ಎಂದರೆ ಒಣಗಿದ ಸೊಪ್ಪುಗಳ ಮೇಲೆ ಬೆಕ್ಕು ನಡೆಯುವ ಹಾಗೆ.  ಮುಂದೆ...

ಆಮೆ

ಆಮೆ ಏಡಿಯಂತಲ್ಲ ಅದು ಸರೋವರದ ನಡುಗಡ್ಡೆಯಂತೆ ಪ್ರಶಾಂತವಾಗಿರುತ್ತದೆ. ಏಡಿಯೋ ಕೆಟ್ಟದಾಗಿ ಕಟ್ಟಿದ ಗಂಟಿನಂತೆ ಅಸ್ವಸ್ಥವಾಗಿರುತ್ತದೆ. ಆಮೆ ಆನೆಯಂತಲ್ಲ ಅದು ಬೇಕೆಂದಾಗ ಕೈಕಾಲುತಲೆಗಳನ್ನು ಒಳಗಿಟ್ಟುಕೊಳ್ಳುತ್ತದೆ. ಆನೆಯೋ ಭಾರವಾದ ಸೊಂಡಿಲನ್ನು ಕೂಡ ತೂಗಿಕೊಂಡೇ ನಡೆಯಬೇಕಾಗುತ್ತದೆ. ಆಮೆ ಮೊಲದಂತಲ್ಲ...

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ! ಮೊದಲು ಏರುತಗ್ಗುಗಳು ಗೋಚರಿಸುತ್ತವೆ.  ಮತ್ತೆ ದಿಗಂತಗಳು ಬಳುಕುತ್ತವೆ, ಆಯತಗಳು ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ.  ಯಾರೂ ಇದು ತನಕ ಕಲ್ಪಿಸದ ವಿನ್ಯಾಸಗಳು ಕಾಣಿಸುತ್ತವೆ....

ಇಬ್ಬರು

ಮೊದಲು ಒಬ್ಬನೇ ಇದ್ದ.  ತನ್ನ ಅಡುಗೆಯನ್ನೂ ನಿದ್ದೆಯನ್ನೂ ತಾನೇ ಮಾಡುತ್ತಿದ್ದ.  ತನ್ನ ಶರ್ಟುಗಳನ್ನೂ ವಿಚಾರಗಳನ್ನು ತಾನೇ ಒಗೆಯುತ್ತಿದ್ದ. ಒಂದು ದಿನ ಬೇಜಾರಲ್ಲಿ ಊಟಕ್ಕೆಂದು ಸಮೀಪದ ರೆಸ್ಟುರಾಗೆ ಹೋದ.  ಅಲ್ಲಿ ಆಕೆಯ ಭೇಟಿಯಾಯಿತು. ಅಂದಿನಿಂದ ಆಕೆ...

ಗದ್ದೆಯಲ್ಲಿರುವ ಒಂದು ಕಪ್ಪೆ

ಗದ್ದೆಯಲ್ಲಿರುವ ಒಂದು ಕಪ್ಪೆ ಎಲ್ಲಾ ಕಪ್ಪೆಗಳಂತೆ ಕುಪ್ಪಳಿಸುವುದು ಧೂಳಿನಲ್ಲಿ ತೆವಳುವುದು ಮೇಲೆ ಕಾಗೆಗಳಿಂದಲೂ ಕೆಳಗೆ ಹಾವುಗಳಿಂದಲೂ ತಪ್ಪಿಸಲು ಹುಲ್ಲುಗಿಡಗಳ ಮರೆಗೆ ಅಡಗುವುದು, ಕೆಸರನ್ನು ಹೊಗುವುದು ಮುಂಗಾರಿಗೆ ಸಂಗಾತಿಯನ್ನು ಹುಡುಕುವುದು ಮೋಡದ ನೆರಳಲ್ಲಿ ವಟಗುಟ್ಟುವುದು ಪೇಟೆಯಲ್ಲಿ...

ಏಡಿಗಳು (ಸಮುದ್ರತೀರದ)

ಸಮುದ್ರ ಕಿನಾರೆಯಲ್ಲಿ ಎಲ್ಲಿ ದೊಡ್ಡ ದೊಡ್ಡ ಅಲೆಗಳು ಗೋಧಿಬಣ್ಣದ ಮರಳುಗಳನ್ನು ತಂದುಹಾಕಿವೆಯೋ ಅಲ್ಲಿ ಅದೇ ಬಣ್ಣದ ಏಡಿಗಳು ಯಥೇಷ್ಟ ಓಡಾಡುತ್ತವೆ. ಎಷ್ಟು ಚಿಕ್ಕವಿವೆ ಇವು ಎಂದರೆ ಒಂದು ಅಂಗಿಜೇಬಿನಲ್ಲಿ ಸುಮಾರು ಒಂದು ನೂರನ್ನು ಸುಲಭವಾಗಿ...

ಗೊಬ್ಬರದ ಹುಳಗಳು

ದುಂಡಗೆ ಬಿಳಿಯಾಗಿ ಮುದ್ದುಮುದ್ದಾದ ಗೊಬ್ಬರದ ಹುಳಗಳನ್ನು ನೋಡದವರು ಯಾರು! ಇವು ಹಟ್ಟಿಗೊಬ್ಬರದಲ್ಲಿ ಹುಟ್ಟಿ ಅಲ್ಲೆ ಬೆಳೆಯುತ್ತವೆ. ಕೆಲವೊಮ್ಮೆ ಹಳೆಹುಲ್ಲು ಛಾವಣಿಯಲ್ಲೂ ಕಾಣಿಸುವುದುಂಟು. ಟಪ್ಪನೆ ಕೆಳಕ್ಕೆ ಬಿದ್ದು ವದ್ದಾಡುತ್ತವೆ. ಹೊರಕ್ಕೆ ಬಿಸಾಡಿದರೆ ಕಾಗೆಗಳು ಆತುರದಿಂದ ಎತ್ತಿಕೊಂಡು...

ನೀರ ಕಪ್ಪೆ, ಮರದ ಕಪ್ಪೆ

ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು.  ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು.  ಹಲವು ನದಿಗಳ ನೀರು ಕುಡಿಯುವೆನು.  ಏಳು ಸಮುದ್ರಗಳನ್ನು ಹೊಗುವೆನು.  ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವುದಿದೆ.  ಮುಳುಗಿದ ಹಡಗುಗಳಿಂದ ನಾನೊಂದು...