ನಮ್ಮಂಕಲ್ ಜೀವನ
ಮಾಡ್ಕೊಂಡಾರೆ ಬಲು ಸರಳ
ಏನೇ ಅಂದ್ರೂ ಹರಿ ಓಂ
ಹರಿ ಓಂ!
ಅದು ಬಿಟ್ಟರೆ ಬರಿ ಓಂ!

ಹಸಿವಾಗುತ್ತಾ
ಎಂದರೆ ಹರಿ ಓಂ
ಶರಬತ್ತು ಬೇಕಾ
ಎಂದರೆ ಹರಿ ಓಂ
ಟೀವಿ ಹಾಕ್ಲಾ
ಎಂದರೆ ಹರಿ ಓಂ
ವಾಕಿಂಗ್ ಹೋಗ್ತೀರ
ಎಂದರೆ ಹರಿ ಓಂ
ಯಾವಾಗ ಬರ್ತೀರ
ಎಂದರೆ ಹರಿ ಓಂ

ಅಂತೂ ಇಂತೂ ಆಂಟಿಯ ಜೀವನ
ಆಗೋಯಿತು ಬಲು ಕಷ್ಟ
ಹರಿ ಓಂ ಹರಿ ಓಂ
ಹರಿಹರಿ ಓಂಓಂ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)