ಕಿಟಿಕಿಯ ಬಳಿ ನಾವು ಬಂದಿವಿ
ಚಂದಮಾಮ
ಕಿಟಕಿಯ ಬಳಿ ನೀನು ಬಾರೋ
ಚಂದಮಾಮ

ಸರಳಿಗೆ ಮುಖವಿಟ್ಬು ಮಾತಾಡೋಣ
ಚಂದಮಾಮ
ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ
ಚಂದಮಾಮ

ಹೊಟ್ಟೆ ತುಂಬ ನಗೋಣ
ತಟ್ಟೆ ತುಂಬ ತಿನೋಣ
ಇರುಳ ಮಲ್ಲಿಗೆ ಅರಳಿದೆ ನೋಡು
ನಿನಗಿಷ್ಟವಾದ ಹಾಡೊಂದ ಹಾಡು

ಆಮೇಲೆ ನೀನು
ಅಂಬರಗಾಮಿ
ನಾವು ಸೇರುವೆವು ನಮ್ಮ
ಹಾಸಿಗೆ, ನಿದ್ದೆ ಮಾಡೋಕೆ, ಸ್ವಾಮಿ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)