ಕಪ್ಪು ಕೆಂಪು ಕಳಗಳಲ್ಲಿ ಒಳ್ಳೇ ಕುಳ ಸಿಕ್ಕಿದರೆ ರಂಗಿಯ ಹೊಡೆತ ನೋಡಬೇಕು ಅವಳ ಹಿಡಿತ ನೋಡಬೇಕು ಅವಳ ಆಟ ನೋಡಬೇಕು ಅವಳ ಬೇಟ ನೋಡಬೇಕು ಅವಳ ಕುದುರೆ ಲಗೀ ಲಗೀ ಮಡಿಲು ನಿಗೀ ನಿಗೀ ಮೊದಲ ಸುತ್ತಿನಲೆ ಹಾಕ್ತಾಳೆ ಚೆಕ್ ಹುಡುಗಿ ಚಿಕ್ ಚಿಕ್ ಇವಳ ಕುದುರ...

ಹದಿನಾರಕೆ ಈಗತಾನೆ ಐನೀರು ಮುಳುಗಿ ಬಂದವಳು ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ ಶಕುಂತಳೆ ಇದು ವಿಶ್ವಾಮಿತ್ರ ಸೃಷ್ಟಿ ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ. ಈ ಪ್ರಮೀಳೆ ಯಾರಾರ ಹೃದಯಕ್ಕೆ ಹಚ್ಚುವಳೊ ಬೆಂಕಿ! ಆರಿಸುವ ಲಾಲಿಸುವ ತೋಳ ತೆರೆಮಾಲೆ ಕು...

ಮುಂಬೆಳಗ ಮಂಜಿಗೆ ತೆರೆದ ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ ಕರಗಲಿಲ್ಲವೆ? ಮಾನವನ ಕಣ್ಣುಗಳಿಗೆ ಹೆಚ್ಚು ಬೆಳಕು ತಾಳುವ ಶಕ್ತಿಯಿಲ್ಲ ಎಂದೆ? ಕತ್ತಲೆಯಿಂದ ಬಂದೆ ವಾಸ್ತವತೆಗೆ ಅದ್ಭುತದಿಂದ ಸಾಮಾನ್ಯಕ್ಕೆ ಸೌಂದರ್ಯದಿಂದ ಆಕಾರಕ್ಕೆ ತುಟಿಗೆ ತ...

ಮತ್ತೊಮ್ಮೆ ಹುಟ್ಟಿ ಬರಲೆ? ಮತ್ತೊಮ್ಮೆ ಹುಟ್ಟಿ ಬರಲೆ? – ಎಂದು ಕತ್ತಲಿನಿಂದ ಕೇಳಿ ಬರುತಿದೆ ನಿನ್ನ ಧ್ವನಿ. ಮತ್ತೊಮ್ಮೆ ನೀ ಬಂದರೆ ಥರ್ಮೋಮೀಟರು ಇಟ್ಟು ನಿನ್ನ ಉಷ್ಣ ಅಳೆದೇವು ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದೇವು ಹುಚ್ಚನೆಂದು...

ನಿನ್ನ ದಮ್ಮಯ್ಯ ತಪ್ಪು ತಿಳಿಕೋಬೇಡ ನನ್ನ ತಿಂದದ್ದೆ ತಿಂದು ಜಗಿದದ್ದೆ ಜಗಿದು ಬರುತಿದೆ ನನಗೆ ವಾಕರಿಕೆ ಅಷ್ಟೆ ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು ಅನ್ನ ಮೊಸರು – ನಾ ಹುಟ್ಟಿದಂದಿನಿಂದ ಮುಕ್ಕಿದ್ದು. ಬದುಕಬೇಕಲ್ಲ ಎಂದು ನುಂಗುತಿದ...

ಅಷ್ಟಗಲ ಬಾಯಿ ತೆರೆದು ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ ನಗಬೇಡ ನನೆದುರು ಕುಳಿತು ಮರೆತು ಹೋದ್ದಲ್ಲ ಜನಕ್ಕೆ ಅಗೌರವ ತೋರಿಸುತೇನೆ ಎಂದಲ್ಲ ಮುಖ್ಯ ಇದಕ್ಕೆ ಬಟನ್ಸೆ ಇಲ್ಲ. ನೀ ನಗುತೀಯ! ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ ಪ್ಯಾಂಟ್ಸು ಹಾಕು...

ಹೆಂಡದಂಗಡಿಯಂತೆ ಕತ್ತಲು ಕೋಣೆ ನಮ್ಮ ಮನೆ ದೇವರ ಕೋಣೆ ದಿನಕೆರಡು ಬಾರಿ ಅವನ ಸ್ನಾನ ಊಟ ಉಪಚಾರ ಧೂಮಪಾನ ಈಸಾಯಿ ಧಪನದಂತೆ ಧೂಪಾನದ ಹೊಗೆ ಹಿತ್ತಾಳೆ ತಟ್ಟೆಯಲಿ ಕೆಂಪು ದಾಸವಾಳದ ಹೂವು ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ! ಮೌನ! ತಲೆ ಕೆಳಗೆ ಕಾಲು ಮೇಲ...

ಹ್ಯಾಮ್ಲೆಟ್ಟು ನಾನಾಗಿ ಕ್ವಿಕ್ಸೋಟನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು ಮೂರು ಬೀದಿಗಳ ಮಧ್ಯೆ ನಿಂತು ಸಾಕ್ರೆಟಿಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು ಈ ಮನೀಷೆ ಈ ಒಳತೋಟಿ ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ ಯಶೋಧರೆಯ ...

ಕೆಲವು ಸ್ಥಳಗಳ ಹೆಸರುಗಳಿಗೆ ಹಸಿಹುಲ್ಲಿನ ವಾಸನೆ ಮತ್ತು ಈಗ ತಾನೆ ಮಳೆನಿಂತ ಮಣ್ಣಿನ ತೇವಗಳಿರುತ್ತವೆ. ಅಪರಾಹ್ನದ ಇಳಿಬಿಸಿಲಲ್ಲಿ ಮನೆಮುಂದಿನ ಪಾರದರ್ಶಕ ತೋಡಿನಲ್ಲಿ ಕಲ್ಲಿನ ಪಲ್ಲೆಗಳು ಏಡಿಗಳಂತೆ ಮಲಗಿರುವುದನ್ನು ನೆನಪಿಗೆ ತರುತ್ತದೆ. ಪಶ್ಚಿಮದ...

ಯಾರೂ ಹೇಳಬಲ್ಲರು ಕತೆಗಳನ್ನು. ಆದರೆ ಫಕೀರಪ್ಪನ ಶೈಲಿಯೇ ಬೇರೆ. ಹೇಗೆ ಕೇಳುಗರ ಅಸಕ್ತಿಯನ್ನು ಕೆರಳಿಸಬೇಕು. ಎಲ್ಲಿ ತಡೆಹಿಡಿಯಬೇಕು, ಯಾವಾಗ ವೀಳಯದೆಲೆಗೆ ಎಷ್ಟು ಮೆಲ್ಲಗೆ ಸುಣ್ಣ ಸವರಬೇಕು -ಇದೆಲ್ಲ ಅವನೊಬ್ಬನಿಗೇ ಗೊತ್ತು. ರಾತ್ರಿ ಸರಿಯುತ್ತಿದ್...

1...5152535455...66