ಈ ವೈಯಕ್ತಿಕತೆಯೊಳಗಿಂದ ಜಾರಿ ನಿರಾತ್ಮಕನಾಗಿ ಜಾಗತಿಕ ಸಂವೇದನೆಯಲ್ಲಿ ಸೇರಿ ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ ಯಾರದೋ ಕೊರಳಿಗೆ ಜೋತು ಓ! ನಾನೆ ನೀನಾಗಬೇಕು ನಾನಿಲ್ಲದಿರಬೇಕು ಎಂದು ತಡಬಡಿಸಿದ್ದೇನೆ ಯಾರದೋ ಎದೆ ನಡುವೆ ತಲೆಯಿರಿಸಿ ನಿನ್ನಲ್ಲಿ...

ಜಾಗತಿಕ ಸರ್ಕಸ್ಸು ಆಕಾಶದ ಮೇಲೆ ಅಂತರ್ಲಾಗ ಅಕ್ರೊಬಾಟಿಕ್ಸ್ ನಕ್ಷತ್ರದಂತೆ ಹಾಕಿ ವಿದ್ಯು- ದ್ದೀಪಗಳ ಜಗ್ ಜಗ್ ಪ್ರಭೆಯಲ್ಲಿ ಕತ್ತಲನು ತೋಳ ಸೆರೆಯೊಳಗೆ ಸೆರೆಗುಡಿಸಿ ಹಿಡಿದ ಹುಡುಗಿಯರ ಮಸಲತ್ತು ಸಾವಿರದೆಂಟು ಆಟಗಳ ಜಾದೂ ಜಗತ್ತು. ಅನಿಶ್ಚಿತತೆಯ ಮ...

ನನಗೇನೊ ಆಗಿದೆ ಮಾಡಿನ ಮೂಲೆ ಮೂಲೆಯಲಿ ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ ಪಿಂಡಮಾಡಿ ನುಂಗಬೇಕೆನಿಸುತ್ತದೆ ತಲೆಗೂದಲು ಕಿತ್ತು ಮುಖ ಪರಚಿ ಲಂಗೋಟಿ ಹರಿದು – ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತಿದೆ ಬುಸುಗುಟ್ಟಿ ಬರ...

ನನ್ನ ಹೊರಗಿನ ಜೀವಿತದಲ್ಲಿ ಹೆರರ ಮುಖವಾಡಗಳ ನೆರಳು ನನ್ನೊಳಗಿನ ಜೀವಿತದಲ್ಲಿ ನನ್ನದೇ ಮುಖವಾಡಗಳ ನೆರಳು. ಸೋಮವಾರಕ್ಕೆ ಬೂದು ಮುಖವಾಡ ಶನಿವಾರಕ್ಕೆ ಕಪ್ಪು ಮುಖವಾಡ ಆದಿತ್ಯವಾರವೋ ರಂಗು ರಂಗಿನ ಮುಖವಾಡ ಬನ್ನಿ ನಿಮ್ಮ ಮುಖಕ್ಕೂ ಬೇಕು ಒಂದು ಆವರಣ ಕ...

ಮಂಗ ನಗರ ನೋಡಲೆಂದು ಮರದಿಂದಿಳಿದು ಬಂದ ಪಾಪ! ಆಕಾಶ ಚುಂಬಿ ಆಹ ಏನೆಂಬಿ ಸೌಧಗಳ ಕಂಡ ಸೌಧಗಳ ನಡುವೆ ನಾಗರದಂತೆ ಅಲ್ಲ ಅಜಗರದಂತೆ ಬಿದ್ದ ಟಾರ್ ರೋಡುಗಳ ಕಂಡ ಟಾರ್ ರೋಡುಗಳ ಮೇಲೆ ಏನು ಭಗವಂತನ ಲೀಲೆ ಓಡಾಡುವ ಮೋಟಾರು ಆಮೆಗಳ ಕಂಡ ಆಮೆಗಳ ಗರ್ಭದೊಳಗಿಂದ...

ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : “ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?” ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ ಕಪ್ಪಿಗೆ ಬಸಿದುಕೋಳ್ಳುತ್ತಿದ್ದರು....

ಹೊಗೆಯ ಮೇಲೆ ಇಬ್ಬನಿ ಇಳಿದು ಇರುಳ ಮಬ್ಬು ಬೆಳಕಿಗೆ ಟ್ರಾನ್ಸ್ ಪೆರೆನ್ಸ್ ಹಿಡಿದಂತೆ ಛಾವಣಿ ಬಿದ್ದ ಹಳೆ ಮನೆಯ ಒಳಗೆ ಮುರಿದ ತೊಲೆಗಳಲಿ ತಲೆಕೆಳಗಾಗಿ ತೊನೆವ ಬಾವಲಿಗಳ ಹಾಗೆ ಜೇಡನ ಬಲೆಯ ಗಂಭೀರತೆಯ ಮೇಲೆ ಬಿಸಿಲು ಮಳೆ ಸುರಿದು ಗುಂಯ್ ಗುಟ್ಟುವಂತೆ ...

ಹಾಸಿಗೆಯಿರುವುದು ನಿದ್ದೆಗೆಂದು ಯಾರು ಹೇಳಿದರು? ಅದು ಆನಂದಿಸುವುದಕ್ಕೆ ತಬ್ಬಿ ಹೊರಳಾಡುವುದಕ್ಕೆ ಎಲ್ಲ ಮರೆಯುವುದಕ್ಕೆ, ತೆರೆಯುವುದಕ್ಕೆ ಉದ್ದಕ್ಕು ಮೈಚಾಚಿ ಹಾವಸೆಯಾಗಿ ನಿನ್ನ ಪರೆಯಾಗಿ ನಾ ನೆನೆಯುತ್ತೇನೆ: ನಾನು ಇಲ್ಲೆ ಹುಟ್ಟಿದ್ದು ಸತ್ತದ್ದ...

ಎಷ್ಟೊ ಹೇಮಂತಗಳಿಂದ ಕಾಯುತ್ತಿದ್ದೇನೆ ಇಲ್ಲಿ ಈ ಹೊಸ್ತಿಲಲ್ಲಿ ನಾನೊಳಗೆ ಬರಬೇಕು ನಿನ್ನೊಳಗೆ ಸೆಳೆ ಎಳೆ ಎಳೆಯಾಗಿ ಸೆಳೆ ಬೆಂಕಿಯ ಸೆಳೆಯಾಗಿ ಸುಳಿಯಾಗಿ ಸೊನ್ನೆಯ ಮಾಡಿ ನುಂಗು ನನ್ನನು ನಿನ್ನ ಹೊಕ್ಕುಳಿನೊಳಕ್ಕೆ ಆ ಹರಹಿನಲ್ಲಿ ಬಯಲಾಗಲೆ? ಬಯಲಾಚೆಯ...

ಬೆಳಕಿನ ಮುಖಗಳಿವೆ ಮಣ್ಣಿನ ಮುಖಗಳಿವೆ ಇವೆರಡರ ನಡುವೆಯೊಂದು ದಾರಿ ಹುಡುಕುತ್ತೇನೆ: ಮನುಷ್ಯರ ಮುಖಗಳತ್ತ ಕೊಂಡೊಯ್ಯುವ ದಾರಿ ಮುಖವಿಲ್ಲದವನು ನಾನು. ನಿನ್ನ ಮುಖ ನನ್ನದು ಅವನದೂ ನನ್ನದೇ ಅವಳದೂ ಹೌದು. ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ ನನ್ನ ಸ್ವರ...

1...5051525354...66