
ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ? ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ? ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ ಸತ್ತ ನೀ ಮರಳಿ ಬರಲಿಲ್ಲ! ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು ಬಾಲಕರು ಬಂದು ಹರಸಿ...
ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು? ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ ಮೌನ ಅಸಹ್ಯವಾದಾಗ ಮಾತಾಡುತ್ತೇವೆ ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರ...








