ಇರಬಹುದು ಭೂಲೋಕದಲ್ಲಿ ನಂದನವನವು; ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು; ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು! ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ; ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ ಘನ್ನಮಹಿಮರ ನೋಡಿ ಸಾ...
ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯ ಸಮುದ್ರದ ನಡುವೆ ಸಿಸಲಿಯೊಡನೆ ಕದನವೆಸಗಿ ಪಾದಧೂಲಿಯನದಣಕೆರಚುವಂತೆ: ಇಟಲಿಯ ಹೆಬ್ಬೊಟ್ಟಿನುಗುರಿನ ಹೊಗರ ನೋಡು! ಶೋಭಿಸುತಿಹವು ಪುರಗಳಲ್ಲಿ ನಿಡಿದಾದ ಪರ್ವತಾವಳಿಯನೇರಲು ಹವಣಿಸುವ ಸಾಹಸಿಗಳಂತೆ ಮತ್ತೆ ನಿದ್ರಿಸ...
ಮುಗಿಲ ನೀಲಿಯ, ಮುನ್ನೀರ ಹಸಿರ, ಮರುನೆಲದ ಸುವರ್ಣ ವರ್ಣವನು,- ಒಂದೆಡೆಗೆ ನೋಡುವಾಸೆಯಿರಲು,- ನಡೆ ಸುಯೇಜಿಗೆ! ಉಸುಬಿನುದಧಿಯ ದಾಂಟಲು ನಿರ್ಮಿಸಿದ ನೀರ ಸೇತುವಿಗೆ! ಮುನ್ನೀರ ಕಾಲುವೆಯ ದಾಂಟಿಲ್ಲಿ ನಡೆಯುವಾಗ ಈ ಹಡಗವಹುದು–ಅರಣ್ಯದ ಹಡಗ! ಕಚ...
ಓ! ಓ! ಓ! ಸಮುದ್ರ! ಮಹಾಕಾಳ! ಮಹಾರುದ್ರ! ನನ್ನ ನಿನ್ನ ಜೀವವಿಂದದೊಂದೆಯಾಗಿ ನಿಂದವೈ. ಆದಿಯಂತ್ಯವಿಲ್ಲಯಿಲ್ಲ! ಚಿರಂತನವಿದೆಂದವೈ! *****...
ಒಂದು ದಂಡೆಗೆ ಸಿಸಿಲಿಯ ದೀಪಮಾಲೆ, ಇನ್ನೊಂದು ದಂಡೆಗೆ ಇಟಲಿಯ ದೀಪಾವಳಿ; ಒ೦ದು ದಂಡೆಗೆ ಹರಿತಶಿಲಾಪ್ರಕಾಶಸ್ತ೦ಭ, ಇನ್ನೊಂದು ದಂಡೆಗೆ ಮಿಂಚಿನ ಮಂಗಳಾರತಿ; ಬೆಳಕು ಬಂದು ಕಡಲ-ಹಕ್ಕಿಗೆ ತೋರಣ ಕಟ್ಟಿತಿಲ್ಲಿ, ಅನಂತರೂಪಗಳ ಧರಿಸಿತಿಲ್ಲಿ! ದಿನ್ನೆಯಿಂದ...
(ಕ್ಯಾಂಡಿಯಾ ನಡುಗಡ್ಡೆಯ ಹತ್ತಿರ) ಕತ್ತಲೆಯ ಬರವನ್ನು ಸಾರುವಂತಹ ಕೊಂಬು ಅಂಬುಧಿಯೊಳಾಗಿಹುದು ಬೂದಿಬೆಳಕಿನ ಕಂಬ,- ಕಂಬ ಮರೆಯಾಗುತ್ತ, ಕೊಂಬು ಕಡೆಗಾಗುತ್ತ ನಿಶೆ ಬಂತು ದಶ ದಿಶೆಯಲಿ; ಚಂದ್ರಾಮಗಿಹುದೊಂದು ಕೋಡೆಂದು ಹಾಡಿನಲಿ ನುಡಿದಿದ್ದರಾಂಗ್ಲ ಕವ...