
ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು; “ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು; ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು ನೊರೆಯ ಬಿಳುಪು ಕುರಿಯ ಮರಿಯ ತಲೆಯ ತಡವುತಿದ್ದಳು. ಕುರಿಗಳಿಲ್ಲ...
ನರಮುಪ್ಪು ಯೌವನಕೆ ಒಲ್ಲದೊಡನಾಟ ; ಯೌವನವು ಸುಮ್ಮಾನ, ಮುಪ್ಪು ಮಿಡುಕಾಟ; ಯೌವನವು ಸಿರಿ ಸುಗ್ಗಿ ಮುಪ್ಪು ಬರಿ ಮಾಗಿ; ಯೌವನವು ಶೃಂಗಾರಿ, ಮುಪ್ಪು ತಲೆದೂಗಿ. ಯೌವನಕೆ ಚೆಲ್ಲಾಟ, ಮುಪ್ಪಿಗುಸಿರೆಳೆದಾಟ, ಹುಲ್ಲೆನಗೆ ಯೌನವು. ಹೆಳವು ಮುಪ್ಪು; ಯೌನದ ...
ಅಡವಿಮರದಡಿಯಲ್ಲಿ ನನ್ನೊಡನೆ ಕೆಡೆದಲ್ಲಿ ಇನಿಯ ಹಕ್ಕಿಯ ಕೊರಲ ತನ್ನ ಕೊರಲಲಿ ತಂದು ನಲಿವನಾರೈ- ಇತ್ತ ಬಾ, ಇತ್ತ ಬಾ, ಇತ್ತ ಬಾರೈ, ಎತ್ತ ನೋಡಿಲ್ಲೆಲ್ಲ, ಮತ್ತು ಹಗೆಯೊಂದಿಲ್ಲ, ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ. ಆಸೆಬಲೆಯನು ತೊಲಗಿ, ಬಿಸಿಲ ಕಾಯ...
ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ”...








