ಹುಟ್ಟಿಬರಲಾರಿರಾ ಇನ್ನೊಮ್ಮೆ?

ಹುಟ್ಟಿ ಬರಲಾರಿರಾ ಇನ್ನೊಮ್ಮೆ ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ ಹೊಸಬೆಳಕಾಗಿ ಹೊಸದಾರಿ ತೋರಲು ಹುಟ್ಟಿಬರಲಾರಿರಾ ಇನ್ನೊಮ್ಮೆ? ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ 'ಕೈಗಾರೀಕರಣ ಇಲ್ಲವೆ ನಾಶ'...

ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ

ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ ಗಣಿಸಿದರು ಚೆಲುವೆಂಬ ಹೆಸರು ಎಲ್ಲಿತ್ತದಕೆ ? ಏರುತಿದೆ ಈಗ ಅದು ಸೌಂದರ್ಯಪಟ್ಟಕ್ಕೆ ಸಿಕ್ಕಿಸಿದೆ ಹುಸಿ ಹೊಳೆವ ಚೆಲುವನಪವಾದಕ್ಕೆ. ಕಲೆಯ ಎರವಲು ಮುಖವ ತೊಡಿಸಿ ಕಳಪೆಗಳನ್ನು ಕಮನೀಯ ಎನ್ನಿಸುವ ಕೈವಾಡ...
ಕಳ್ಳರ ಕೂಟ – ೩

ಕಳ್ಳರ ಕೂಟ – ೩

ಹವಣಿಕೆ ಪ್ರಥಮ ಪರಿಚ್ಛೇದ ಇಂದು ಛತ್ರದ ಪಾರುಪತ್ತೇಗಾರ್ರಿಗೆ ಸ್ವಲ್ಪವೂ ಬಿಡಿತಿಯಿಲ್ಲ ಅವರಿಗೆ ಬಲುಕೆಲಸ. ಯಾರೋ ದೊಡ್ಡ ಅಧಿಕಾರಿಗಳು ಬಂದಿ ದ್ದಾರೆ. ಅವರಿಗೆ ಬೇಕಾದ " ಸರಬರಾಯಿ” ಮಾಡಿಸಿ ಒಳ್ಳೆಯ ವನೆನ್ನಿಸಿಕೊಳ್ಳಬೇಕೆಂದು ಆಶೆ; ಸಾಲದುದಕ್ಕೆ ತನಗೆ...

ಅಪ್ಸರೆಯ ಅಳಲು

ಚಿತ್ತ ಚಿತ್ತಾರದ ಭಾವಭಂಗಿಯಲಿ ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ ಮೇಲೇರಿ ಇಳಿಜಾರಕೆ ತೇಲಿಬಿದ್ದು ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು ಕಣ್ಮನ ಸೆಳೆವ ಅಪ್ಸರೆ ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ ಶುದ್ಧನೀರು ಗಾಳಿ ಉದುರಿಸಿದ ಪುಡಿಯೂಟ...
Aeschylus ನ ತ್ರಿವಳಿ ನಾಟಕ ಮಾಲೆ Oresteia

Aeschylus ನ ತ್ರಿವಳಿ ನಾಟಕ ಮಾಲೆ Oresteia

ಅಂದಿನ ಗ್ರೀಕ ಪ್ರಮುಖ ಪಟ್ಟಣಗಳಲ್ಲಿ Agros ಕೂಡ ಒಂದು. Tantalus ನ ಉತ್ತರಾಧಿಕಾರಿಗಳಾದ Atreus ಮತ್ತು Thyestes ಸಹೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಾರೆ. Thyestes ತನ್ನ ಸಹೋದರ Atreus ಪತ್ನಿಯನ್ನು ಅಪಹರಿಸಿ ಭ್ರಷ್ಟಗೊಳಿಸಲು ಕ್ರೋಧಗೊಂಡ Atreus...

ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ) ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ| ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ| ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ| ಕಡುಗಲ್ತೀವಿದರಣ್ಯಮಂ ಪುಗಿಸಿದಂ - ಕೈಗೂಡಿಸಲ್ ಪಂತವಂ ||೧||...

ಆಧುನಿಕ ಕೃಷಿಯನಂತೆ ವೈಜ್ಞಾನಿಕವೆಂದೊಡೆಂತು?

ಆಧುನಿಕ ಕೃಷಿ ಮೂಲವಲ್ಲಿಹುದು ಹಣದಲ್ಲಿ ಅಧಿಕವಾ ಧನವಂತನೆಂದೆಣಿಪ ಮನದಲ್ಲಿ ಬದುಕಿನೊಳನ್ನ ಮೊದಲೆಂದರಿಯೆ ಪೇಳದೋದಿನಲ್ಲಿ ಉದ್ಯೋಗವೆಂದನ್ನ ಕೊಂಡುಂಬ ಸುಲಭ ಸೋಗಿನಲ್ಲಿ ವಿದ್ಯುತ್ ವಾಹನದನುಕೂಲದಪವ್ಯಯದಲ್ಲಿ - ವಿಜ್ಞಾನೇಶ್ವರಾ *****