Short Stories

#ಸಣ್ಣ ಕಥೆ

ಅಪರಾಧಿ ಯಾರು?

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

-೧- ಅಣ್ಣ, ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು. ನಮ್ಮ ಮನೆಗೆ ಪಕ್ಕದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳೆಲ್ಲಾ ಗೊತ್ತಿರಲಾರದು, ಈ ಮನಗೆ ನಾವು ಮೊದಲು […]

#ಸಣ್ಣ ಕಥೆ

ಲೋಕೋಪಕಾರ!

0
ವರದರಾಜ ಹುಯಿಲಗೋಳ
Latest posts by ವರದರಾಜ ಹುಯಿಲಗೋಳ (see all)

ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ ಬಂದು ಈಗ ಅವರ ಮನವೆಂಬ ಮನದಲ್ಲಿ ವಾಸಮಾಡಿತ್ತು!!! ಚಿಂತೆಯಿಂದ ಅವರಿಗೆ ಎರಡು-ಮೂರು ದಿನ ರಾತ್ರಿ ನಿದ್ರೆಯೆ ಆಗಿರಲಿಲ್ಲ. ಸಾಥಿ ಶಿವರಾವ, ಅವರ ತಂದೆ ಅಷ್ಟು ಹಣಗಳಿಸದೆ ಇದ್ದರೆ, […]

#ಸಣ್ಣ ಕಥೆ

ಅವಳ ಭಾಗ್ಯ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

ಮದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಿಣ್ಣ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪಿದ್ದೇ ತಡ- ಒಮ್ಮೆ ಕಿಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾಂ, ಹುಂ ಎನ್ನುವುದರೊಳಗೆ ಮದುವೆಯೂ ಆಗಿಹೋಯ್ತು. ನಾನೀಗ ಹೇಳಬೇಕೆಂದಿರುವುದು ಆ ಮದುವೆಯ ಸಮಯದ ಸಮಾಚಾರ. ಕಿಟ್ಟಣ್ಣನೂ ಅವನ ಹೆಂಡತಿಯ ಆರತಿ ಅಕ್ಷತೆಗೆ ಹಸೆಯ […]

#ಸಣ್ಣ ಕಥೆ

ಕೊಳಲು ಉಳಿದಿದೆ

0
ವರದರಾಜ ಹುಯಿಲಗೋಳ
Latest posts by ವರದರಾಜ ಹುಯಿಲಗೋಳ (see all)

ಮಾತಿನ ತೆರೆ ಒಂದು “ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ ಇದು ಇರದಿದ್ದರೆ ನನಗೆ ಸಮಾಧಾನವೇ ಇಲ್ಲ. ಪ್ರತಿಯೊಂದು ಕಾರ್ಯವನ್ನು ಆರಂಭಿಸುವಾಗ ಈ ಮೂರ್ತಿಯನ್ನು ನೋಡಿಯೆ ಪ್ರಾರಂಭಿಸುತ್ತೇನೆ. ಅದೇನೋ ನನಗೆ ಅದರಲ್ಲಿ ಅಚಲವಾದ ವಿಶ್ವಾಸವಿದೆ, ಶ್ರದ್ಧೆಯಿದೆ, ಭಕ್ತಿಯಿದೆ. ಇದನ್ನು […]

#ಸಣ್ಣ ಕಥೆ

ಒಂದು ಪುಟ್ಟ ಚಿತ್ರ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

-೧- ೮-೪-೧೯೨೪ ರಘು, ಇಲ್ಲಿಂದ ಹೊರಟು ಹೋದ ಮೇಲೆ ಕಾಗದಗಳನ್ನೇ ಬರೆಯುತ್ತಿಲ್ಲವೇಕೆ? ನೀನು ಹೋದಂದಿನಿಂದ ನಿನ್ನ ಕಾಗದಗಳಾದರು ನೋಡುತ್ತಿರುವುದೇ ನನಗೆ ಕೆಲಸವಾಗಿದೆ. ನೀನು ಇಲ್ಲಿದ್ದಾಗ ನನ್ನೊಡನೆ ಹೇಳಿದ ಮಾತುಗಳನ್ನೆಲ್ಲಾ ಮರೆತಂತಿದೆ. ರಘು, ಯಾವ ದಿನ ನಿನೊಡನೆ ಅಡ್ಡ ಹಾದಿಯಲ್ಲಿ ಕಾಲಿಟ್ಟ ಆ ದಿನದಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲ. ಭಗವಂತನಿದಿರಿನಲ್ಲಿ ನಾನು ನಿನ್ನವಳೆ ಆದರೂ ಜನರಿಗೆ ತಿಳಿದರೆ […]

#ಸಣ್ಣ ಕಥೆ

ಮಿಂಚು

0
ವರದರಾಜ ಹುಯಿಲಗೋಳ
Latest posts by ವರದರಾಜ ಹುಯಿಲಗೋಳ (see all)

“ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು…! ನಾಲ್ಕು ಜನ ನೋಡಿದರೆ ಏನು ಅಂದಾರು?” ಅನ್ನಲಿ ಏನೇ ಅನ್ನಲಿ ನಾನು ಯಾವ ಜನಕ್ಕೂ ಹೆದರುವದಿಲ್ಲ ನನ್ನ ತಲೆ ಈ ದಿನ ಒಡೆದು ಹೋಗಲಿ! ಯಾರಿಗೆ ಬೇಕಾಗಿದೆ??” “ನನಗೆ ಬೇಕಾದದ್ದು ಸಾವಿತ್ರಿ! ಹಬ್ಬದ ದಿನ ಹೀಗೆ ಅಶುಭ ನುಡಿಯಬೇಡ. ನನಗೆ ಎಷ್ಟು […]

#ಸಣ್ಣ ಕಥೆ

ಧನಿಯರ ಸತ್ಯನಾರಾಯಣ

0
ಕೊರಡ್ಕಲ್ ಶ್ರೀನಿವಾಸರಾವ್
Latest posts by ಕೊರಡ್ಕಲ್ ಶ್ರೀನಿವಾಸರಾವ್ (see all)

ಆರು ವರ್ಷದ ಹುಡುಗ, ಕಲ್ಲು ಮುಳ್ಳಿನ ಏರುತಗ್ಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮಲೇರಿಸುವನು. ಅನಂತರ ಎಡ ಹೆಗಲ ಮೇಲೆ. ಅಲ್ಲಿಯೂ ನೋವಾದಾಗ ಬಲ ಕಂಕುಳಲ್ಲಿಟ್ಟು ಕೈಗಳಿಂದ ಹಿಡಿದುಕೊಳ್ಳುವನು. ಬಳಿಕ ಅದು ಎಡ ಕಂಕುಳಿಗೆ ಹೋಗುವುದು. […]

#ಸಣ್ಣ ಕಥೆ

ವಾಣಿಯ ಸಮಸ್ಯೆ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

-೧- ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುವಿಗೆ ಬೇಸರವಾಯ್ತು. […]

#ಸಣ್ಣ ಕಥೆ

ಸ್ನೇಹಲತಾ

0
ವರದರಾಜ ಹುಯಿಲಗೋಳ
Latest posts by ವರದರಾಜ ಹುಯಿಲಗೋಳ (see all)

೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು. ಈ ಹದಿನೈದು ದಿನ ನನ್ನ ಮನಸ್ಸು ಬಿರುಗಾಳಿಯಲ್ಲಿ ಸಮುದ್ರವಾಗಿತ್ತು. ನನ್ನ ಆತ್ಮ ಸಂಯಮನದಿಂದ ಈಗ ಶಾಂತತೆ ಪಡೆದಿರುವೆ. ಈ ಶಾಂತ ಮನಸ್ಸು ಚಿರವಾಗಿರಲೆಂದು ಹಾರೈಸುವೆ. ನನಗೆ ಅತ್ಯಂತ […]

#ಸಣ್ಣ ಕಥೆ

ಕಲ್ಪನಾ

ವರದರಾಜ ಹುಯಿಲಗೋಳ
Latest posts by ವರದರಾಜ ಹುಯಿಲಗೋಳ (see all)

ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಕಾಲವದು! ಸ್ವರ್ಗಲೋಕದಲ್ಲಿಯ ಸ್ತ್ರೀ ಪುರುಷರೆಂದೇ ಎಲ್ಲರೂ ಅವರನ್ನು ಭಾವಿಸುತ್ತಿದರು! ಒಂದು ದಿನ ಬೆಳಗಿನಲ್ಲಿ ನಮ್ಮ ಓಣಿಯಲ್ಲಿಯ ಆ ದೊಡ್ಡ ಮನೆಯಲ್ಲಿ ಒಮ್ಮೆಲೆ ಜನಜಂಗುಳಿಯು ಕಂಡಿತು. ನಾಲ್ಕೈದು ಮೋಟಾರುಗಳು ನಿಂತಿದ್ದವು. […]