ಸಾವಿರ ವರ್ಷದ ಕನ್ನಡ ಸಾಹಿತ್ಯ
ಕನ್ನಡ ಅತ್ಯಂತ ಪ್ರಾಚೀನವೂ, ಸಮೃದ್ಧವೂ ಆದ ಸಾಹಿತ್ಯ ಇರುವ ಭಾಷೆ. ಇಪ್ಪತ್ತು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಲಭ್ಯವಾಗಿರುವ ಕರ್ನಾಟಕದ ಶಾಸನ ಪದ್ಯಗಳು ಕನ್ನಡದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತನ್ನು ಸೂಚಿಸುತ್ತವೆ. ಶಾಸನದ ಅನೇಕ ಪದ್ಯಗಳಲ್ಲಿ...