Home / ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ

Browsing Tag: ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ

ಇದು ನಮ್ಮ ಸಮೀಪದೂರಿನ ಒಂದು ಘಟನೆ. ಅದೊಂದು ಸಣ್ಣ ಕೆರೆ. ತಾಯಿ ತನ್ನ ಮೂರುವರ್ಷದ ಕಂದನೊಂದಿಗೆ ಬಟ್ಟೆ ಒಗೆಯಲು ಬಂದವಳು ತನ್ನ ಕೆಲಸದಲ್ಲಿ ತಲ್ಲೀನಳಾಗಿದ್ದಳು. ಮಗು ತನ್ನಷ್ಟಕ್ಕೆ ಪಕ್ಕದಲ್ಲಿ ಆಡುತ್ತ ಆಡುತ್ತ ಸ್ವಲ್ಪ ದೂರ ಸರಿದಿತ್ತಷ್ಟೇ! ಆಗಲೇ...

“Mind is man, not body” ಎಂಬುದು ಪ್ರಾಜ್ಞರ ಮಾತು. ಬಹುಶಃ ಪ್ರತಿಯೊಬ್ಬನೂ ಮನನ ಮಾಡಿಕೊಳ್ಳಬೇಕಾದ ಸಂಗತಿ. ಮಾನವ ಜಗತ್ತನ್ನು ಅವಲೋಕಿಸಿದರೆ ಭೌತಿಕತೆಗಿಂತ ಭೌದ್ಧಿಕತೆಗೆ ಹೆಚ್ಚಿನ ಪ್ರಾಶಸ್ತ್ಯ. ಆದರೆ ನಿಜಕ್ಕೂ ಇದು ಪುರುಷನಿಗೆ...

ಇಂದಿನ ಆಧುನಿಕ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಜಗತ್ತಿನ ಒಂದು ಗುಂಪು ವೈಚಾರಿಕತೆಯನ್ನು ವಿರೋಧಿಸುತ್ತಲೇ ಇದೆ. ಅದರಲ್ಲೂ ಭಾರತ ಈ ವಿಚಾರಗಳಲ್ಲಿ ಉಳಿದೆಲ್ಲ ದೇಶಗಳಿಗಿಂತ ಕೊಂಚ ಮುಂದಿದೆ. ವೈಜ್ಞಾನಿಕ ಸತ್ಯಾಸತ್ಯತೆಯ ನಿರೂಪಿಸಲು ಪ್ರಾಯೋಗಿಕತೆ ಎ...

“ಗಂಡಂದಿರ ಮುಂದೆ ಹೆಂಡೂತಿ ಸತ್ತರೆ ಗಂಧಕಸ್ತೂರಿ ಪರಿಮಳ! ಸ್ವರ್ಗದ ರಂಬೇರಾರತಿ ಬೆಳಗೂರ!” “ಯಾವ್ಯಾವ ಸಿರಿಗಿಂತ ಮೂಗುತಿ ಸಿರಿಮ್ಯಾಲೆ ಬಾಲಾರ ಹಡೆದ ಸಿರಿಗಿಂತ! ದ್ಯಾವರೇ ಮುತೈದಿತನವೇ ಬೋ ಮ್ಯಾಲೆ” ಇದು ಉತ್ತರ ಕನ್ನ...

ಇಂದು ಮಾರ್ಚ ೮. ಅಂತರಾಷ್ಸ್ರೀಯ ಮಹಿಳಾ ದಿನ. ಅಂತರಾಷ್ಟೀಯ ಮಟ್ಟದಲ್ಲಿ, ರಾಷ್ಟ್ರ ರಾಜ್ಯಮಟ್ಟದಲ್ಲಿ ಕೊನೆಗೆ ಎಲ್ಲ ಜಿಲ್ಲೆ ತಾಲೂಕು ಹೋಬಳಿಗಳಲ್ಲೂ ಇಡೀ ತಿಂಗಳುದ್ದಕ್ಕೂ ಮಹಿಳಾ ಸಮಾವೇಶಗಳು, ಸಮಾರಂಭಗಳು, ಘೋಷಣೆಗಳು ಹೋರಾಟಗಳು ಹೀಗೆ ನಡೆಯುತ್ತಲೇ...

“ಹೆಣ್ಣಾಗಿ ಹುಟ್ಟೊಕ್ಕಿಂತ ಮಣ್ಣಾಗಿ ಹುಟ್ಟಿದರೆ ಮಣ್ಣಿನ್ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯವಂತರಿಗೆ ನೆರಳಾಗಿ.” ಇದು ನಮ್ಮ ಜಾನಪದ ಗೀತೆಗಳಲ್ಲಿ ಬರುವ ಗರತಿಯ ಹಾಡಿನ ಒಂದು ತುಣುಕು. ಆಕೆ ಹೆಣ್ಣು. ಆಕೆಗೆ ಅದ್ಯಾಕೋ ಬದುಕು ಸಾಕಾ...

ಜಗತ್ತು ಬದಲಾಗುತ್ತಿದೆ. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಕಾಲಚಕ್ರದ ಒಂದು ಸುತ್ತು ಈಗಾಗಲೇ ಸುತ್ತಿಬಂದಂತಾಗಿದೆ. ಆಧುನಿಕ ಮೂರನೇ ಜಗತ್ತಿನ ಸ್ತ್ರೀಯರು ಪುರಾಣ ಪಾತ್ರಗಳ ಆದರ್ಶ ಪ್ರತಿರೂಪಗಳ ಧರಿಸಬಯಸುವುದಿಲ್ಲ. ಹಾಗಿದ್ದು ಇಂದಿನ ಪುರುಷ ವಿರಚಿ...

ಮೊನ್ನೆ ಮೊನ್ನೆ ಸರ್‍ವಧರ್‍ಮ ಸಮನ್ವಯ ಸೌಹಾರ್‍ದ ಕಾರ್‍ಯಕ್ರಮವೊಂದರಲ್ಲಿ “ಯತ್ರ ನಾರ್‍ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂದು ಹೆಣ್ಣಿಗೆ ದೇವರ ಸ್ಥಾನವನ್ನು ಕೊಟ್ಟ ದೇಶ ನಮ್ಮದು ಎಂದು ಘಂಟಾಘೋಷವಾಗಿ ಭಾಷಣ ಬಿಗಿದ ಯುವ ನೇತಾ...

ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/ ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ ಗೋಲದ ಮೇಲೆ/ ಬಾತ್ ರೂಮು ಕ್ಲೀನಾಗಿ...

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...