ಗನ್ನು ನಿಮ್ಮದು ಪೆನ್ನು ನಮ್ಮದು ನಡೆದಿದೆ ಹೋರಾಟ ಮುಖವಿರುವವರ ಮುಖವಿರದವರ ನಡುವಿನ ಹೋರಾಟ //ಪ// ಬುಲೆಟ್ಟು ನಿಮ್ಮದು ಬ್ಯಾಲೆಟ್ಟು ನಮ್ಮದು ನಡೆದಿದೆ ಹೋರಾಟ ಕತ್ತಲೆ ಮುಖಗಳ ಬೆಳಕಿನ ಕುಡಿಗಳ ನಡುವಿನ ಹೋರಾಟ ಭ್ರಾಂತಿ ನಿಮ್ಮದು...
ಪ್ರೀತಿ ಮತ್ತು ಕ್ರಾಂತಿ ಬಂಡಿಯ ಎರಡು ಚಕ್ರ ಅಗಲಿ ಮುಂದೆ ಸಾಗಲಿ ಸೇರಲಿ ನಿಜದ ತೀರ || ಬುದ್ಧ ಕಂಡ ಕನಸನು ಹೊತ್ತು ಬಸವನು ಬಳಸಿದ ಸರಕನು ಹೊತ್ತು ಅಂಬೇಡ್ಕರರ ಹೆದ್ದಾರಿಯಲಿ ಸಾಗಲಿ ಬಂಡಿ...
ಭಾರತ ದೇಶದ ತೊಂಡು ದನಗಳಿಗೆ ಕರ್ನಾಟಕವೇ ಪ್ರೀತಿಯು ಇಲ್ಲಿಯ ಹುಲ್ಲು ನೀರು ಕಂಡರೆ ಎಲ್ಲಿಲ್ಲದ ಸಂಪ್ರೀತಿಯು ಆದರೆ ಏಕೊ ಕನ್ನಡ ಎಂದರೆ ಅವುಗಳಿಗಿನ್ನು ಅಪಥ್ಯವು ಇಂತಹ ರೋಗಕೆ ಮದ್ದು ಯಾವುದು? ತಿಳಿಯಬೇಕು ಇಂದು ನಾವು...
ಮಾಡದಿದ್ದರೆ ಮುನೇಶ್ವರ ಹೆಗಲೇರುವನು ಶನೇಶ್ವರ ಇದು ನಂಬಿಕೆ ಜನರದ್ದು ವರುಷದ ಒಂದು ಹರುಷದ್ದು /ಪ// ಜನಗಳು ಸೇರುವರು ಇಲ್ಲಿ ಬಾಡೂಟದ ಸಂಭ್ರಮದಲ್ಲಿ ಗಟ್ಟಿಯಾಯಿತು ಸಂಬಂಧ ಜಾತ್ರೆ ಪಡೆಯಿತು ಈ ಅಂದ ಮುನೇಶ್ವರನ ಹೆಸರಲ್ಲಿ ಶನೇಶ್ವರನ...
ಶತ್ರುವು ಕಾಣುತ್ತಿಲ್ಲ ನಮಗೆ ಶತ್ರುವು ಕಾಣುತ್ತಿಲ್ಲ ಅಡಗಿರಬಹುದು ಒಳಗೆ; ಅವನು ಕಾಣುತ್ತಿಲ್ಲ ಹೊರಗೆ ||ಪ|| ಸುಳಿವು ಸಿಕ್ಕರೂ ಅವನ ಹಿಡಿವುದು ಬೇಕಿಲ್ಲ ಹಿಡಿಯದೆ ಯುದ್ಧವು ಎಲ್ಲಿ? ನಮ್ಮ ದಾರಿಗೆ ಭವಿಷ್ಯ ಎಲ್ಲಿ? //ಅ.ಪ.// ಅಕ್ಕಪಕ್ಕದವರು...
ಸವೆದರೂ ಚಪ್ಪಲಿ ಎರಡು ಜೊತೆ ಆಗಲಿಲ್ಲ ಕೆಲಸ ಆದರೂ ಇಲ್ಲಿಯ ಅಧಿಕಾರಿಗಳಿಗೆ ಪ್ರಮೋಷನ್ ವಿಲಾಸ ಇದು ತಬರನ ಪ್ರಲಾಪ ಜನಗಳ ಕಲಾಪ //ಪ// ಬಂದರೆ ಯಾವುದೆ ಅರ್ಜಿ ಹುಳ ಹಿಡಿಯುವುದಿಲ್ಲ ಟಿಪ್ಪಣಿ, ಚರ್ಚಿಸಿಗಳಲಿ ಕಡತ...
ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ ವಿಜಯವು ಹೇಗೆ.... ಇನ್ನು ವಿಜಯವು ಹೇಗೆ? ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ ಮಾತುಗಳೇಕೆ.... ಇನ್ನು ಭವಿಷ್ಯ ಹೇಗೆ? //ಪ// ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು ನದಿಗಳಿಗಿಲ್ಲ ಬರ;...
ಮುಟ್ಟಲಾರದವರು ಅಲ್ಲಿ ತಟ್ಟಲಾರದವರು ಇಲ್ಲಿ ಮುಟ್ಟದ ತಟ್ಟದ ಜಂಜಡದಲ್ಲಿ ಕಟ್ಟಿತು ಉಸಿರು ಎಲ್ಲರಿಗಿಲ್ಲಿ ||ಪ|| ಬುದ್ಧಿ ಬಲದ ಶೂರರು ಅವರು ಬೆವರು ಬಸಿವ ಧೀರರು ಇವರು ಬುದ್ಧಿ ಬೆವರಿನ ಆಟೋಟದಲಿ ಟಾಂಗು ಕೊಟ್ಟವರಾರು ಇಲ್ಲಿ?...