ಕತ್ತಲೆ ಎಷ್ಟಿದ್ದರೆ ಏನು? ಹಚ್ಚುವೆನು ದೀಪ ಕಿಟಕಿ ಬಾಗಿಲು ಮುಚ್ಚಿದರೇನು ಹರಡದೇನು ಧೂಪ //ಪ// ಮುಳ್ಳುಗಳೆಷ್ಟಿದ್ದರೆ ಏನು ಅರಳದೇನು ಹೂವು? ನೋವುಗಳೆಷ್ಟಿದ್ದರೆ ಏನು ಅರಸಬೇಕೆ ಸಾವು? ಗದ್ದಲ ಎಷ್ಟಿದ್ದರೆ ಏನು ಸಂತೆ ಸಾಗದೇನು? ತಂದ ಭಾರವ ಕಳೆಯ...

ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ! ನಾನು ಸುಖ ಮಾರುವವಳಾಗಿರೋದರಿಂದ ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ! ನನ್ನ ಬದುಕಿಗೆ ಅರ್ಥವಿಲ್ಲ ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ ಸ್ಪಂದನ ಕಳೆದ ಜೈವಿಕ ಯಂತ್ರವಾಗ...

ಕಲ್ಲಿನಂತೆ ಪೆಡಸು ಹುಲ್ಲಿನಂತೆ ಬೆಳಸು ಕಪ್ಪುಗುರುಳು ಗಂಡುಗೊರಳು ಉರಿವ ಸೀಗೆ ಕಾವ ಸೋಗೆ ಪುಣ್ಯಕೋಟಿ ಹೃದಯ ಚಂಡವ್ಯಾಘ್ರ ಅಭಯ ರೊಚ್ಚು ಕೆಚ್ಚು ಅಚ್ಚುಮೆಚ್ಚು ನಾನವಳ ಪಡಿಯಚ್ಚು ‘ತಾಯಿ ದುರ್ಗೆಯ ನಿಜವನರಿಯುವ ಧೀರರಾರೊ ಜಗದೊಳು! ಆರು ದರುಶನ ವೇದ ...

ಹೈದರಾಬಾದು ಮತ್ತು ಸಿಕಂದರಬಾದುಗಳ ನಡುವೆ ಸೀತಾಪಲಮಂಡಿ ಎಂಬ ಒಂದು ಸಣ್ಣ ಪೇಟೆಯಿದೆ. ಹಣ್ಣು ಬಿಡುವ ಕಾಲದಲ್ಲಿ ಸುತ್ತಮುತ್ತಲ ಪೇಟೆಗಳಲ್ಲಿ ಕೂಡ ಸೀತಾಫಲ ಧಾರಾಳ ದೊರೆಯುತ್ತಿದ್ದು ಈ ಪೇಟೆಗೆ ಮಾತ್ರ ಸೀತಾಪಲಮಂಡಿ ಎಂತ ಯಾಕೆ ಹೆಸರು ಬಂತೋ ತಿಳಿಯದು....

ನೂರೆಂಟು ಕನಸುಗಳ ಚಿತ್ತಾರ ರಾತ್ರಿಯೆಲ್ಲಾ ನನ್ನ ಪಕ್ಕದಲಿ ನೀನು ಕುಳಿತಂತೆ ಹೇಗೆ ಮೋಹಗೊಂಡೆನೋ ಏನೋ, ರಾತ್ರಿ ಬಾಗಿಲು ತಟ್ಟಿದ ಸಪ್ಪಳಕೆ ಬಿಚ್ಚಿದೆ ತೆರೆದೆ ಬಾಗಿಲನು, ಸುಳಿಗಾಳಿ ಮೈ ಸೋಕಿದಾಗ ಮನದಲ್ಲಿ ಹಾವು ಹರಿದಾಡಿದಂತಾಗಿ ಹಾಸಿಗೆಯಲಿ ಪುನಃ ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...