ಬ್ಯಾಸೀಗಿ ಬಲುಕೆಟ್ಟ

ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ...

ಕಂಡೇನೆ ಹೊಸತು ಕಂಡೇನೆ

ಕಂಡೇನ ಹೊಸತು ಕಂಡೇನೆ ನಾ ಆಂಜೇನೆ ಬೆವತು ಓಡೇನೆ ||ಪಲ್ಲ|| ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ ದೀಪಾವು ಆರಿಲ್ಲ ಬೆಳಗೇತೆ ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ ಬಲ್ಬೀನ ದೀಪಾವು ಉಳದೇತೆ ||೧|| ಚಿಮಣೀಯ ಹಚ್ಚೇನೆ...

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ವಡಪೇಳ ಈರಣ್ಣ ವಡಪೇಳ ||ಪಲ್ಲ|| ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ ಗರತೇರ ಮನಿಮನಿಗೆ ಕರಿತೇನ ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ ನಿನಗುಡಿಗೆ ಬಜಂತ್ರಿ ತರತೇನ ||೧|| ಜರತಾರಿ...

ತಾಳದಾಗ ತಾಳವ್ವ ಹರತಾಳ ಚೋಳವ್ವ

ತಾಳದಾಗ. ತಾಳವ್ವ ಹರತಾಳ ಚೋಳವ್ವ ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ|| ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ ಕಾಲೇಜಿ ಜನರಾ ಸ್ಕೂಲೀನ ಜನರಾ ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧|| ಡಾಕ್ಟರ...

ಪುಗಸೆಟ್ಟಿ ಕೊಡತೇನಿ ನನಮೈಕು

ಪುಗಸೆಟ್ಟಿ ಕೊಡತೇನಿ ನನಮೈಕು ಪುರಸೆಟ್ಟಿ, ಭಾಸಣಕ ನೀ ಲೈಕು ||ಪಲ್ಲ|| ಹೊಡಿಹೊಡಿ ಭಾಸಣ ಹುಡೆಹಾರಿ ಬೀಳಂಗ ಹುಡಿಗೇರ ಕೊಡಪಾನ ವಡೆವಂಗ. ತುಡಿಗೇರ ಹಿಡಿವಂಗ ತುರುಬಾನ ಎಳೆವಂಗ. ಕಿವಿಯಾನ ಹಾಲಿಯು ಹರಿವಂಗ ಖಾರಾನ ಕುಟ್ಟಂಗ ಕುಟ್ಟಯ್ಯ...

ಸಾಕಾತ ಸಾಕಾತ ಇವ್ನಸಂಗ ಸಾಕಾತ

ಸಾಕಾತ ಸಾಕಾತ ಇವ್ನ ಸಂಗ ಸಾಕಾತ ಸಾಕಾದ್ರು ತುಸು ತುಸು ಬೇಕಾತ ||ಪಲ್ಲ|| ನನಪೂರ್ತಿ ನಾನಿದ್ರ ಬುಸರ್ಬುಳ್ಳಿ ಅಂತಾನ ಹೆಸರ್‍ಹೇಳಿ ಕಿಡಿಕ್ಯಾಗ ಹಾಡ್ತಾನ ಬಾರಾಕ ನಿನಗ್ಯಾಕ ಪಡಿಪಾಕ ಧೀಮಾಕ ಬಾರಂದ್ರ ಜೋರ್‍ಮಾಡಿ ಓಡ್ತಾನ ||೧||...

ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ

ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ|| ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ ದಾರ್‍ಯಾಗ ಸುಳಿಸುತ್ತಿ ಕುಂತೈತೆ ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ ಮೋಸಕ್ಕ ಥಟಥಾಟು ಥೇಟೈತೆ ||೧|| ಗೆಜ್ಜಿ ಕಾಲಿನ...

ಸೀರೀಯ ಬಿಚ್ಚವ್ವಾ ಸಣಬಾಲಿ

ಸೀರೀಯ ಬಿಚ್ಚವ್ವಾ ಸಣಬಾಲಿ ಎದರಾಗ ಏನೈತಿ ನೀ ಖಾಲಿ ||ಪಲ್ಲ|| ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ ಮುತ್ತೀನ ಮುತ್ತೂ ಒತ್ತೈತೆ ಹತ್ತರ ಹದಚಂದ ಬಿತ್ತರ ಏನ್ಚೆಂದ ಹತ್ತೂರು ಸತ್ತೂರು ಸತ್ತೈತೆ || ೧|| ಸೀರೀಯ...

ಶಬುದಾ ಕೇಳಿದಿಯೇನೊ

ಶಬುದಾ ಕೇಳಿದಿಯೇನೊ ನೀ ಅಬುದಾ ನೋಡಿದಿಯೇನೊ ||ಪಲ್ಲ|| ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ ಜೋರ್ಜೋರೋ ಜೋರೊ ಭಜನೀಯ ಸೂರೋ ||೧|| ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨||...

ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ

ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ತುರುಬೀನ ಗಿಣಿಯಾಗಿ ಹಾಡ್ಯಾನೆ ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ ಹುಳುಹುಳು ಹುಡಿಗೀಯ ನೋಡ್ಯಾನೆ ||೧|| ಆ ಗಂಡ ಈ ಗಂಡ ಯಾಗಂಡ ಯಾತಕ್ಕ ಈ ಮಿಂಡ ಹುಚಮುಂಡ ಬಂದಾನೆ...