Home / Shrinivasa KH

Browsing Tag: Shrinivasa KH

ಶಬ್ಧ, ಅರ್ಥ, ವ್ಯಾಕರಣ, ಛಂದಸ್ಸಿನ ಗೋಡೆಗಳ ಬೋನಿನಲ್ಲಿ ಹಿಡಿಯ ಹೊರಟಾಗ ಬೆದರಿ ಬಾಗಿಲಿಲ್ಲದ ಬಿಲಗಳಲ್ಲಿ ಬಾಲ ಮುದುರಿ ಅಡಗಿದ ಕವಿತೆಗಳು, ಶಾಂತವಾಗಿ ಶರಣಾದಾಗ ಮನದ ಆಗಸದಲ್ಲಿ ಹಕ್ಕಿಗಳಂತೆ ರೆಕ್ಕೆ ಬಡಿದು ಸ್ವಚ್ಚಂದವಾಗಿ ಹಾರಾಡುತ್ತಿವೆ. *****...

ಒಂದು ಪೈಸೆ ಫೀಸು ಇಲ್ಲದ ಪುಕ್ಕಟೆ ಸಲಹೆ ಕೊಡ್ತೀನಿ ಕೇಳಿ ಬಾಸು ಕೋಪ ಬಂದು ಜಗಳಾಡ್ತಿರೊ ಹೆಂಡ್ತಿ ಹತ್ತಿರ ಮಾತಿಗಿಂತ ಮೌನವೇ ಲೇಸು ತಲೆಬಿಸಿಯಾದರೆ ಆಸುಪಾಸ್ ನಲ್ಲಿರೋ ಹೋಟೆಲ್ಲಿಗೆ ಹೋಗಿ ಕುಡಿಯಿರಿ ಒಂದು ದೊಡ್ಡ ಗ್ಲಾಸು ತಣ್ಣನೆಯ ಐಸು ಹಾಕಿದ ಜ್...

ನೀನು ಸಾರಿ ಸಾರಿ ಎಂದಾಗಲೆಲ್ಲಾ ನಾನು ಸರಿ ಸರಿ ಎಂದು ಸುಮ್ನಾಗ್ತೇನೆ ನಾನು ಸಾರಿ ಸಾರಿ ಎಂದಾಗ ಮಾತ್ರ ನೀನು ದೂರ ಸರಿ ಎನ್ನುವುದು ಎಷ್ಟು ಸರಿ. ಹೀಗೆ ಕೇಳಿಬಿಟ್ಟೆನೆಂದು ಮತ್ತೆ ರೇಗಬೇಡ ವೆರಿ ಸಾರಿ, ವೆರಿ ವೆರಿ ಸಾರಿ. *****...

ಮೋಹದಿಂದ ಬೆಸೆದುಕೊಂಡು ತತ್ತಿಗಳನ್ನಿಟ್ಟು ಸರದಿಯಲ್ಲದಕೆ ಕಾವು ಕೊಟ್ಟು, ಹೊರಬಂದ ಬೆಂಕಿ ಕೆಂಡದ ಕೊಂಡೆಬಾಯಿಗೆ ಗುಟುಕನ್ನಿಟ್ಟು ಪುಟ್ಟ ಪುಟ್ಟ ರೆಕ್ಕೆಪುಕ್ಕ ಹುಟ್ಟಿದ ಪುಟ್ಟನಿಗೆ ಕುಪ್ಪಳಿಸುವುದ ಕಲಿಸಿ ಹಾರಿಬಿಟ್ಟೆವು ನೋಡು ಗಗನಕ್ಕೆ ಅದೀಗ ಸು...

ನನ್ನ ಮನೆಯ ಪಕ್ಕದಲ್ಲೊಂದು ದರಿದ್ರ ಕಾಲೇಜು ಆದ ಮೇಲೆ ಏನು ಹುಡುಗ ಹುಡುಗಿಯರ ದೊಡ್ಡ ಪೌಜು; ತಡೆಯಲಾರದ ಗೌಜೇ ಗೌಜು ಪಾಪಾ ಎನು ಮಾಡುತ್ತದೆ ಕಾಲೇಜು ಇದಕ್ಕೆ ಕಾರಣವೇನಿದ್ದರೂ ಕಾಲ + ಏಜು. *****...

ನೀವು ರೀ ರೀ ಎಂದಾಗಲೆಲ್ಲಾ ನಾನು ಎಸ್ ಎಂದರೂ, ನಾನು ಸ್ವಲ್ಪ ಕಾಫಿ ಕೊಡ್ರಿ ಅಂದಾಕ್ಷಣ ಕೆಸ್ ಎನ್ನುವುದು ಯಾಕೆ ನನ್ನ ಮಿಸೆಸ್? ಏನು ಮಾಡೋದು, ಮಾಡೋ ಹಾಗಿಲ್ವೇ ನಿನ್ನನ್ನ ಡಿಸ್ಮಿಸ್. *****...

ನೀವು ಗಂಡಸರೇ ಹೀಗೆ ಬಾಸು, ಬಾಸು ಅಂತ ಯಾಕಮ್ಮಾ ಸುಮ್ ಸುಮ್ನೆ ನನ್ನ ತಿವಿದು, ನಿರಪರಾಧಿ ಮೇಲೆ ಹಾಕ್ತೀಯ ಕೇಸು ಬಾಸು ಇಲ್ಲ, ಗೀಸು ಇಲ್ಲ, ನನ್ನ ಅಪ್ಪ ಅಮ್ಮ ಇಟ್ಟ ಹೆಸರು ಗೊತ್ತಿಲ್ವೇ ನಾನು ಬರೀ ಶ್ರೀನಿವಾಸು. *****...

ಮನೇಲಿ ಹೆಂಡ್ತಿ ಮೇಲೆ ಇಲ್ದೇ ಇದ್ದ ಬಾಸು ವೇದಿಕೆ ಮೇಲೆ ಭಾಷಣ ಮಾಡಿದ್ದು ನೋಡಿದರೆ ಏನು ಪೋಸು ಬಾಯಲ್ಲಿ ಬೆಟ್ಟಿಟ್ಟರೆ ಕಚ್ಚಲಿಕ್ಕೆ ಬರದ ಕೂಸು, ಹೊತ್ತಿಗ್ಹತ್ತು ಲೀಟರ್ ಹಾಲು ಹಿಂಡುವ ಹಾಲೆಂಡ ಹಸು. *****...

ನಾರ್ಮಲ್ ಡೆಲಿವರಿಗಳು ಈಗ ಔಟ್ ಆಫ್ ಡೇಟ್ ಆಗಿರುವುದರಿಂದ ಹೆರಿಗೆ ಆಸ್ಪತ್ರೆಗಳನ್ನು ಸೆಂಟರ್ಸ್ ಫಾರ್ ಸಿಸೇರಿಯನ್ ಎಂದು ಮರುನಾಮಕರಣ ಮಾಡಲು ರೆಸಲೂಶನ್ ಮಾಡಿದೆಯಂತೆ ಮೆಡಿಕಲ್ ಅಸೋಷಿಯೇಷನ್. *****...

1...7891011...24

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...