
ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ ̵...
ಶಾಲೆಯೊಳೋದಿ ತೆಗೆವುನ್ನತದಂಕಗಳೇ? ನಲಿದುಲಿವಂತೆ ರಸಿಕರನೆಳೆವ ಕಲೆಯೇ? ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ? ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ? ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು – ವಿಜ್ಞಾನೇಶ್ವರಾ *****...
ತಮ್ಮದೇ ರುಚಿಯೆಂದವರಿವರ ರುಚಿಗಳನ್ನು ನೆರೆಗಳೆದು ಹಮ್ಮಿನೊಳಿರ್‍ಪುದೆಲ್ಲರ ಗುಣ ಸಹಜವಿರುತಿರಲಿದನು ತಮ್ಮ ರುಚಿಗೆಳೆದಾ ಬ್ರಿಟಿಷರ ತಾಕತ್ತದದ್ಭುತವಲಾ ನಮ್ಮನೆರಡು ಶತಮಾನವಾಳಿದ ಶಕ್ತಿಗಿಂತಧಿಕವಿದು ಜ್ಯಾಮ್ ಬ್ರೆಡ್ ಬಿಸ್ಕೆಟು ಮಂಚೂರಿಗಳೆಮ್ಮನಾಳ...
ಬಿಗುವನೆಲ್ಲವ ಹಗುರ ಮಾಡುವ ನಗುವೆ ನೆಲದ ನೆಕ್ಕರೆಯಾಗಿ ಚಿಗುರಿಹುದಿಲ್ಲಿ ನೋಡಾ ತಂಬುಳಿ ಗಾಗಿ ಹೊಟ್ಟೆಯುರಿ ಕಳೆವನು ರಾಗಿ ನಗಲೆಂದೆಲ್ಲರೊಂದಾಗಿ – ವಿಜ್ಞಾನೇಶ್ವರಾ *****...
ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ – ವಿಜ್ಞಾನೇಶ್ವರಾ *****...
ಸತ್ಯವನು ಎತ್ತಿ ತೋರುವ ಬೆಳಕನೊಡೆದಲ್ಲಿ ಸ್ತುತ್ಯದ ಹಸುರಿಹುದದರ ಮಧ್ಯದಲಿ ಎತ್ತಿ ಹೇಳುವುದೆಮ್ಮ ಬದುಕಿನ ಸತ್ಯವಿಹುದಿಲ್ಲಿ ಅತ್ತ ಕೆಂಪೇರಿ ಗರ ಬರ ಬಾರದಿರಲಿ ಇತ್ತ ನೀಲಿಮದ ನೆರೆಯೇರದಿರಲಿ – ವಿಜ್ಞಾನೇಶ್ವರಾ *****...
ಮನೆ ಮನೆಯೊಳೆಮಗೆಷ್ಟೊಂದು ಅಡುಗೆ ಯನುಕೂಲವಿರುತ್ತಿರಲೇನು ಮಲವೆದ್ದು ಘಂ ಮೈನುವ ಬೀದಿ ಬದಿಯನ್ನದಾತುರವೋ? ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ ತನು ಮನವಾಗೆ ಮನೆಯೆ ಮಂದಿರವಕ್ಕು – ವಿಜ್ಞಾನೇಶ್ವರಾ *****...
ಸುರಿದಳೆದು ಕೊಡಬಹುದು ದೊಡ್ಡವರೊಂದಷ್ಟು ತೆರಿಗೆಯದು ಸರಕಾರಕಲ್ಲದೆ ಪ್ರಕೃತಿಗ ದರೊಳಗೆ ಪಾಲಿಲ್ಲವದರಿಂದ ದಿನದಿನವು ಸೊರಗುತಿಹುದದಕಷ್ಟಿಷ್ಟು ಕೊಡುವ ವರು ಏನಿಲ್ಲದವರೆಲ್ಲರಿಗನ್ನದಾತರಾದವರು – ವಿಜ್ಞಾನೇಶ್ವರಾ *****...
ಹಸಿವಿನೊಳಂದು ಗತಿಗೆಟ್ಟು ಮರಗೆಣಸು ಬೇ ಯಿಸುತುಣುತಿದ್ದೆವೆಂದು ವಿಷಾದದೊಳೆನುವರುಂಟು ವಿಷಾದವಿಂದಧಿಕ ಜನ ಮತಿಗೆಟ್ಟು ತಿನ್ವರಲಾ ಮರಗೆ ಣಸನೇಕತರ ಕಲಬೆರಕೆಗೊಳ್ಳುತಿರಲೆಮ್ಮನ್ನದೊಳು ಶಿಶು ಡಬ್ಬದೊಳದುವೆ ಇರುತಿರಲೆಲ್ಲರಾ ಬುದ್ದಿ ಕಲಬೆರಕೆ –...
ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ – ವಿಜ್ಞಾನೇಶ್ವರಾ *****...













