ಆತ್ಮಾರ್ಥಿ-ಸ್ವಾರ್ಥಿ

`ಅಹಂಕಾರರಹಿತ ನಾನು ಮುಕ್ತ ಆತ್ಮನಂದನು- ಸುಡಲಿ ಊಟ ಬರದು ಏಕೆ ಕೂಡಲೆ ತಾನೆ'೦ದನು. ಅವನಿಗೆಂದೆ `ಏಕೊ ರೋಷ?' `ಎಂಥ ರೋಷ ಎದರದು? ಉದರದೇವ ಹಸಿದುಕೊಂಡ ಆ ಗರ್ಜನೆ ಆದರದು!' `ಹೀಗೊ' ಎಂದೆ- 'ಹೌದು' ಎಂದ...

ಮಿಹಿರದ್ವೀಪ

ಸ್ವರ್ಣಸಮುದ್ರದಿ ಪಯಣಿಸಿಹೆ ರಜತತೀರವನು ನೂಕಿರುವೆ ಜ್ಞಾನಭಾಸ್ಕರನ ತಲುಪಿರುವೆ ಇಳೆಯಿರುಳಭಿಜಿತ್ ಸೋಕಿರುವೆ. ದೃಷ್ಟಿದೀಪಿಸುವ ಕ್ಷೇತ್ರಗಳು ಕೆಚ್ಚಿನ ಕಸುವಿನ ಬೆಟ್ಟಗಳು ಹರ್ಷಜ್ವಾಲೆಯ ಶಿಖರಗಳು ಕೇವಲ ಬೆಳಕಿನ ಗಾಳಿಯೊಳು. ಆತ್ಮವಿಸ್ಕೃತಿಯ ಕಡಲುಗಳು ರುದ್ರನಿದ್ರೆಗಳ ಗಿರಿದರಿಯು ನನ್ನ ಜೀವದಾ ರಾಜ್ಯದೊಳು...

ಬೆಳಕು

ಬೆಳಕು ಬೆಳಕು ಕೊನೆಯಿರದ ಬೆಳಕು ಕತ್ತಲೆಗೆ ಖಣವೆ ಇಲ್ಲ. ಪ್ರಾಣದಲ್ಲಿ ಅಜ್ಞಾತ-ಖಾತ ತೆರೆವುದು ರಹಸ್ಯವೆಲ್ಲ. ಜಡದಗಾಧ ಆಖಾತ ಮುಂಚೆ ಮುಚ್ಚಿತ್ತು ತನ್ನ ನೆಲೆಯ. ಲವಲವಿಕೆಯಲ್ಲಿ ಎಚ್ಚೆತ್ತು ಈಗ ಎತ್ತಿಹುದು ತನ್ನ ತಲೆಯ. ಬೆಳಕು, ಹೊತ್ತಿರದ...

ಮುಕ್ತಿ

ನನ್ನ ಜೀವ ಮನ ಹಿಗ್ಗಿ ಹಿಗ್ಗಿ ಆಕಾಶಕಿಂತ ಅಗಲ ಆವರಣರಹಿತದಾಕಾಲ ಮುಳುಗಿ ಉಂಡಿತ್ತು ಹರ್ಷ ಮಿಗಿಲ ಮೈಯ ಪಿಂಡ ಉಡುಗಿತ್ತು ಉಳಿದು ಜಲಲಿಪಿಯ ರೇಷೆಯಾಗಿ ಆತ್ಮದೇಕಾಂತ ಚಿಂತೆಯಲ್ಲಿ ಸ್ಮೃತಿ ಮಾತ್ರ ಶೇಷವಾಗಿ. ಬಣ್ಣ ಹಾರಿ...

ಮೈ

ಈ ಮೈಯೆ ಒಮ್ಮೆ ಇಡಿ ವಿಶ್ವವೆಂದು ನನಗೇಕೊ ತೋರುತಿತ್ತು. ಈಗ ಜೀವದೀ ಹೊಟ್ಟೆ ಪೂರ್ತಿ ಎನಿಸುವದು ಎರಡೆ ತುತ್ತು. ಜಗದ್ವ್ಯಾಡ ಸಂಚಲನಕೀಗ ಇದು ಸಣ್ಣದೊಂದು ಸಂಚಿ ಬೃಹದ್ಭೂಮಿಯಲಿ ಬೃಹತ್ತರದ ಆದರ್ಶಕೆಂದು ಹಂಚಿ ಒಪ್ಪಿಡಿಯ ಕವಳ...

ಅತಿಥಿ

ಕಂಡೆ ನನ್ನ ಆಂತರ್ಯದಮರಪುರುಷನನು ತೆರೆಯಲಿಹನ ಮನದ ಮುಖವಾಡ ತೊಟ್ಟುಕೊಂಡ, ಭಧ್ರಾಃಕಾರ, ಘನನ ಮೃತ್ಯುಲೋಕವನು ಅಮೃತನಂತೆ ಯಾಹೊತ್ತು ಕಾಣುವವನ ಮರ್ತ್ಯಲೀಲೆಯನು ದಿವ್ಯಪ್ರೇಕ್ಷಕನ ಹಾಗೆ ನೋಡುತಿಹನ ! ಹೃದಯಕಿರುವ ಮೈಗಿರುವ ಹರ್ಷ-ಖೇದಗಳ ಸ್ಪರ್ಶಗಿರ್ಶ ತಟ್ಟಲರಿಯನಾಗರ್ಭಗುಡಿಯ ನಿಃಶಬ್ದ ಶುಚಿ...

ಕಲ್ಲುಮೂರ್ತಿ

ದೇವದೇವತಾ ಪಟ್ಟಣದಲ್ಲಿ ! ದೇಗುಲದೊಲು ಕಿರಿಕಟ್ಟಡದಲ್ಲಿ || ಕಟ್ಟೆರಕದ ಕೈ ಕಾಲೂ ಕಣ್ಣು | ದೇವತೆ ನೋಡಿದಳದೊ ನನ್ನನ್ನು || ಸಜೀವ ಜಾಗೃತ ಅಮೃತವು ದಿವ್ಯ | ಏಕಮೂರ್ತಿಯೇ ಅನಂತಭವ್ಯ || ಮದಾದೇವಿ ಮಾತಾಯಿಯು...

ವಿಶ್ವಾವತಾರ

ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳಲ್ಲಿ ದೈವಶಿಶುವ ನೆಲದ ದುಗುಡ...

ಅನಂತ ಸಾಹಸ

ಆನಂತ್ಯದೊಂದು ನವ ಜಲಧಿಯಲ್ಲಿ ಹೊರಟಿಹುದು ನನ್ನ ನಾವೆ. ಎಲ್ಲಿ ಹೊರಟಿತೋ; ತನ್ನ ಮಾನವ್ಯ ಬಿಟ್ಟು ಬೇರೆ ಠಾವೆ? ಮಸಕು ಮಸಕು ಹಿಂದೆಲ್ಲ, ಮುಂದೆ ಪಾತಾಳಖಾತ ಸಿಂಧು ಗೊತ್ತುಗುರಿಯಿಲ್ಲ, ದೂರ ಧ್ರುವದಾಚೆ ಬೆಳಕು ಸ್ಫಟಿಕ ಬಿಂದು!...

ಸುವರ್‍ಣದೀಪ

ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿರಲು ಆಹ! ಆ...