ಹುಟ್ಟುಗುರುಡ
‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! […]
‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! […]
ಸುಗ್ಗಿ ಬರುತಿರೆ ನಲಿದು ಶುಕಪಿಕಗಳುಲಿಯುವವು ತಮ್ಮರಸುವಾತಿನೊಳು – ತಂಗಾಳಿಯೂದುವವು. ಇಳೆಯನೆಲ್ಲವ ತುಂಬ ಕೊನೆಗೊಮ್ಮೆ ಮೋದವದು ಧ್ವನಿತವಾಗಿರೆ ಜೀವಕೋಟಿಗಳು ನಲಿಯುವವು ಎಳೆವಾತಿನಲಿ ನುಡಿದು ಹಸುಮಗಗಳೊಲಿಯುವವು ಅವರ ತೊದಲ್ನುಡಿಗಳಲಿ ವಳೆವಾತ […]
ಇದು ನನ್ನ ಕಮ್ಮಟವು. ರಾಜಮುದ್ರೆಯನೊತ್ತಿ ಹಣವನೋಡಾಡಿಸುವುದಲ್ಲ. ಆಡಳಿತಗಳ ವ್ಯವಹಾರವನ್ನು ನಿಯಂತ್ರಿಸುತ ದಿಗ್ದೇಶಗಳ- ನೊಲಿಸ ಬಯಸುವುದಿಲ್ಲ ಕಲ್ಲು ಬಂಡೆಯ ಕೆತ್ತಿ ಬೋಳಗುಮ್ಮಟಗಳನು ಬಾಳ ಬಯಲಿನಲೆತ್ತಿ ನಿಲ್ಲಿಸುವ ಸಾಮರ್‍ಥ್ಯವಿದಕಿಲ್ಲ ತಾರೆಗಳ […]
ಅಲ್ಲೊಮ್ಮೆ ಇಲ್ಲೊಮ್ಮೆ ತಾನೆ ಹರಿವುದು ಮನಸಿ- ನಿರುವಿಕೆಯು, ದಿವ್ಯಹರ್‍ಮ್ಯವನೊಮ್ಮೆ ಬೇಡುವುದು ಅರಸರೈಸಿರಿಯೆಲ್ಲ ಬೇಕೆಂದು ಕಾಡುವುದು. ಅನುದಿನವು ಕೊರಗುವುದು ತನ್ನ ಸ್ಥಿತಿ ಕೆಡುಕೆನಿಸಿ. ಒಮ್ಮೆ ಚೆಲುವೆಯರಾದ ಲಲನೆಯರನತಿ ನೆನಸಿ,- […]
ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, […]
ನನ್ನ ಕಾದಲಳಿವಳು ನಿತ್ಯವಿಹಳೆನ್ನ ಸೂರ್‍ಯ ಅವಳನ್ನು ಸುತ್ತುತಿಹ, ನುತಿಸುತಿಹ ಪೃಥ್ವಿ ನಾನು! ನನ್ನ ಮನದನ್ನೆ ಕಲ್ಪದ್ರುಮದ ದಿವ್ಯ ಕುಸುಮ, ದೇವನಿಂದವಳನ್ನು ವಡದ ನೇಹಿಗ ನಾನು! ನಲ್ಲೆಯಿವಳೆನ್ನ ಕಣ್ಮನವ […]
ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು ‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು, ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ ಮಾನವಗೆ; […]
ಭೂಗರ್‍ಭಶಾಸ್ತ್ರಜ್ಞನೆತ್ತಿ ಹಿಡಿದನು ಕೊಳದ ತಳಕಿರುವ ಶಿಲೆಯೊಂದ ಬಂಡೆಗಲ್ಲದು ಸವೆದು ಹರಳಾದುದೆನ್ನುವನು, ಮತ್ತದರ ಮೇಲುಳಿದ ಮರದ ಕಿರಿಯಾಕೃತಿಯದಿಂತು ಮುದಿಮರ ತವಿದು ಕೊಳದ ನೀರಿನ ಕೆಳಗೆ ಬಿದ್ದಿರಲರೆಯ ಕೂಡಿ ಕಾಲೋದಧಿಯ […]
ಬೋಳಗುಮ್ಮಟವಿದುವೆ ಮುಗಿಲು, ಬುದ್ಧಿಗೆ ದಿಗಿಲು. ಕೆಳಗೆ ಬಿದ್ದರೆ ಮಣ್ಣಿನಲಿ ಮಣ್ಣು, ಬೇರಿಲ್ಲ. ಧ್ವನಿಗಳಲೆಗಳು ದಿಗಂತಕೆ ಹಬ್ಬಿದಾ ಮಿಗಿಲು ಇಲ್ಲಿದೆ ಅಸಂಖ್ಯಾತ ನಕ್ಷತ್ರವಿಲ್ಲಿಲ್ಲ- ವೇನು? ನಾದದನಂತ ಗಡಚಿಕ್ಕಿಸದೆ ನಿಂತು […]
ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ ಕಾಲಕ್ಕೆ ಕೂಗಿತ್ತು. […]