
ರುಚಿಯೊಳ್ ಮಾವನು ಫಲರಾಜನೆಂದೊಡೆನಬಹುದು ಯೋಚಿಸಲಾ ಪಟ್ಟ ಹಲಸಿಗಿರಬೇಕು ದಿಟದಿ ಉಚ್ಛತನವಿದಕೆ ಸಲ್ಲುವುದು ಗಾತ್ರದಲಿ ಅಡುಗೆ ಪಾತ್ರದಲಿ ಒಕ್ಕೊರಿಯೊಳಿದರಿಂದ ಮಾಡಲುಬಹುದನೇಕ ಮೇಲೋಗರವ ಅಚ್ಚರಿಯೊಳಿದುವೆ ಓಗರಕೆ ಬದಲಹುದನೇಕ ತರಹ – ವಿಜ್ಞಾನೇ...
ಹಾ ಎಂದೊಡದು ಆನಂದವಿರಬಹುದು ಹಾ ಎಂದೊಡದು ಆಕ್ರಂದವಿರಬಹುದು ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು – ವಿಜ್ಞಾನೇಶ್ವರಾ *****...
ನಿರ್‍ಜೀವ ಜಗದೊಳಗಿಂದೆಲ್ಲರಾ ಶಕ್ತಿ ಯುಕ್ತಿಯಾಸಕ್ತಿ ಗೌಜಿ ಗದ್ದಲವೆಲ್ಲ ವಸನ ವಸತಿ ವ್ಯಸನದೊಳತಿ ಉಜ್ಜೀವನದ ಹಣ್ಣು ಹಾಲನ್ನಕಪ್ಪ ದುಡಿಮೆಯೊಳಿಲ್ಲ ಮತಿ ಮೋಜಿನಾ ನಗರ ಬದುಕಿನೊಳೆಲ್ಲ ಜೀವಜಗಭಾವ ಹತಿ ತಾಜ ಸಾವಯವವೆನುತಚ್ಚೊತ್ತಿದರೊಪ್ಪಿ ಸವಿಯುವಾಸ...
ಹಸಿದು ಹಸಿಯುಣುವವರ ಕಂಡು ಮರುಗುತಲದಕೆ ಬಿಸಿ ಉಪ್ಪಡುಗೆ ರುಚಿಯನು ಕೊಟ್ಟುಪಚರಿಸಿದರೆ ಭಲೆ ಎನಬಹುದು ಹುಸಿ ಭರವಸೆಯ ಉಪ್ಪನೆಲ್ಲರಷ್ಟಷ್ಟಿಡುತಿರಲತಿಯಾಗಲದ ನು ಸರಿಪಡಿಸೆ ಸುರಿದ ನೀರತಿಯಾಗಿ ಮಿಕ್ಕಿದಡುಗೆಯ ಗಬ್ಬು ವಾಸನೆಗೆಲ್ಲರಾ ಹೊಟ್ಟೆ ತೊಳಸುತಿ...
ನಮ್ಮನೊಡಗೂಡಿ ನಾವುಣುವ, ಉಡುವ, ಮುಡಿವ ನಮ್ಮೆಲ್ಲ ಯೋಗ ಭೋಗ ಭಾಗ್ಯವೆಲ್ಲದಕು ಆಕೆ ಕಾರ ಣಮಾಗಿರಲು ಮಣ್ಣಮ್ಮನನೆಂತು ನೋಡಿದೊಡಂ ಹಮ್ಮಿನೊಳೆಮ್ಮ ಮಡದಿಯೆಂದೆಣಿಸಿದರದು ತರವಲ್ಲ ಅಮಮಾ ವಾರಂಗನೆಯೆಂದೆಣಿಸಿದರೆ ಏಡ್ಸ್ ನಿಚ್ಚಳವಲಾ – ವಿಜ್ಞಾನೇಶ...
ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು ಯೋಚಿಸುತೂಟದ ಜೊತೆಯೊಳೊಂದಷ್ಟು ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ – ವಿಜ್ಞಾನೇಶ್ವರಾ *****...
ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು – ವಿಜ್ಞಾನೇಶ್ವರಾ *****...
ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು ಎಂಮ ಜೊತೆಗಿರ್‍ಪಂತೆ ಎಂಮ ಜೊತೆ ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ ಎಂಮ ಜ್ಞಾನದೋದಿಗದೇನರ್‍ಥವೋ? ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ – ವಿಜ್ಞಾನೇಶ್ವರಾ *****...
ಸಂತಸವೆಂದೊಡದು ಕುಂತತಿ ತಿನ್ನುವುದಲ್ಲ ಅಂತೆ ತಿನದಿರ್‍ಪವರ ಕಂಡು ಸುಖಿಸಲಳವಿಲ್ಲ ಸ್ವಂತ ದುಡಿಮೆಯು ಸಾಯುತಿರಲೆಂತು ನೋಡಿದೊಡಂ ಕಂತುತಿದೆ ನಿಶ್ಚಿತದಿ ಅನ್ನ ಮೂಲದ ಬಲವು ಚಿಂತನದ ಕೃಷಿ ದಾರಾವೃತವನಿವಾರ್‍ಯವೀ ಜಗಕೆ – ವಿಜ್ಞಾನೇಶ್ವರಾ ***...
ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು – ವಿಜ್ಞಾನೇಶ್ವರಾ **...













