Home / Hanneradumath

Browsing Tag: Hanneradumath

ಮಂಜು ಕೇವಲ ಮಂಜು ಅಲ್ಲಾ ಮಂಜುನಾಥನೆ ಬಂದನು ಮಂಜಿನೊಳಗೆ ಪಂಜು ಹಿಡಿಯುತ ನಂಜುಗೊರಳನೆ ನಿಂದನು ಗುಡ್ಡ ಮುಚ್ಚಿದೆ ಬೆಟ್ಟ ಮುಚ್ಚಿದೆ ಮಂಜು ಸೂರ್‍ಯನ ನುಂಗಿದೆ ಕೊಳ್ಳ ಕಂದರ ದರಿಯ ತಬ್ಬಿದೆ ಮಂಜು ಸೆರಗನು ಹೊಚ್ಚಿದೆ ಇರುಳ ಕನಸಿನ ನಂಜು ನಿದ್ರೆಯ ಮಂ...

ಸುಖಪಡುವ ಕಾಲದಲಿ ನಿದ್ರೆಯಾತಕೊ ಗೆಳೆಯ ನಿನ್ನ ಗೆಳತಿಯ ಮರೆತು ಯಾಕೆ ಹೋದೆ ಬೇಲಿ ಬನಗಳ ಆಚೆ ನೂರು ಕೆರೆಗಳ ಆಚೆ ಅಡಗಿರುವ ಸುಂದರಿಯ ಯಾಕೆ ಮರೆತೆ ಓ ಗೆಳೆಯ ಬಾ ಇಲ್ಲಿ ಈ ಮಳೆಯ ನಾಡಿನಲಿ ಆ ಹಳೆಯ ಜಂಗುಗಳ ನೀ ತೊಳೆದು ಬಾ ಈ ಹಸಿರ ಹೊಳೆಯಲ್ಲಿ ಈ ಹೂವ...

ಗಗನ ಹಕ್ಕಿಯು ಗಾನ ತುಂಬಿತು ಪ್ರೇಮ ಪರ್‍ವತ ನಗಿಸಿತು ಮುಗಿಲು ಹನಿಹನಿ ಗಂಧ ತೂರಿತು ಪ್ರೀತಿ ಗಮಗಮ ಹರಡಿತು ಬೀಜ ಒಡೆಯಿತು. ಚಿಗುರು ಚಿಮ್ಮಿತು ಮೊದಲ ಚುಂಬನ ನೀಡಿತು ರಸದ ಮಾವಿನ ಮಧುರ ಸೋನೆಯು ತುಟಿಯ ಮೇಲಕೆ ಇಳಿಯಿತು ಗುಡ್ಡ ಆಡಿತು ಬೆಟ್ಟ ಚಾಚಿ...

ಕಂಡೆ ಕಂಡೆನು ನಿನ್ನ ಕಂಡೆನು ಕಡೆಗೆ ಉಳಿದು ಕೊಂಡೆನು ನಿನ್ನ ಕಂಡಾ ಮೇಲೆ ಕಾಣಲು ಏನು ಇಲ್ಲಾ ಎಂದೆನು ನೀನು ಎಲ್ಲಾ ಎಂದೆನು ಮುಗಿಲ ಮೇಘಾ ಕರಗಿ ಜಾರಿತು ಪ್ರೇಮ ವರ್‍ಷಾ ಸುರಿಯಿತು ನಿನ್ನ ಸ್ಪರ್‍ಶಾ ಹರ್‍ಷ ಹರ್‍ಷಾ ಕೋಣ ಕಾಳಗ ಮುಗಿಯಿತು ಗೂಳಿ ಹಾ...

ಕೌರವನೆದೆಯಲಿ ಕಮಲವು ಅರಳಲಿ ರಾವಣನಾಗಲಿ ಗಿಳಿಹಕ್ಕಿ ಭುವನದ ಮನುಜರು ಜೇಂಗೊಡವಾಗಲಿ ಮೂಡಲಿ ಮಿನುಗಿನ ಹೊಸ ಚುಕ್ಕಿ ಮಂದರ ಗಿರಿಯಲ್ಲಿ ಮಧುಮಯ ಸಿರಿಯಲಿ ವಧುವಾಗಿರುವಳು ಋಷಿಕನ್ಯೆ ನವೋದ್ಯಾನದ ತೂಗುಯ್ಯಾಲೆಗೆ ಬಾಗುತ ಬಂದಳು ರಸಕನ್ಯೆ ಪಡೆಯುವದೇನಿದೆ...

ಯಾಕೆ ಗುಂಡು ಗಜಗದಾಟ ನಮ್ಮ ನಾವು ಮರೆತೆವೆ ಯಾಕೆ ರಕ್ತ ರುಂಡ ಮುಂಡ ನಮ್ಮ ಮನೆಯ ಸುಟ್ಟೆವೆ ನೋಡು ಒಂದೆ ನೀಲ ಗಗನ ಒಂದೆ ತಾಯಿ ಧರಣಿಯು ಒಂದೆ ಕುಲವು ಮನುಜ ನೆಲವು ಯಾಕೆ ಗಡಿಗಿ ಭರಣಿಯು ನಾವು ಹೂವು ಹಸಿರು ಹಕ್ಕಿ ನಾವು ನಗುವ ಮಕ್ಕಳು ನಾವು ಚುಕ್ಕಿ...

ನರಸತ್ತ ಶಿವಧರ್‍ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ ಇರುಳೊಂದು ಪರಿನಿದ...

ಮಳೆಯ ನಾಡಿಗೆ ಚಳಿಯ ನಾಡಿಗೆ ಹಸಿರ ಕಾಡಿಗೆ ಬಂದೆನೆ ಹೂವು ಹೂವಿಗೆ ದುಂಬಿ ದುಂಬಿಗೆ ಮುತ್ತು ಕೊಡುವುದ ಕಂಡೆನೆ ಚಿತ್ರ ಚಲುವಿಯ ಕಂಡೆನೆ || ನೀಲ ಗಗನದಿ ಮೇಘ ಮಯೂರಿ ಕುಣಿವ ರಾಸವ ಸವಿದೆನೆ ಒಣಗಿ ಹೋದಾ ಕಣ್ಣ ಹೊಂಡದಿ ಬಣ್ಣ ತುಂಬಿಸಿ ನಲಿದೆನೆ ಕಣ್ಣ...

ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ ಬುದ್ಧರಾಗಲಿ ಶಿವಶಿವಾ ಸದ್ದುಗದ್ದಲ ಸುದ್ದಿ ಹೋಗಲಿ ಶಾಂತಿ ತುಂಬಲಿ ಪ್ರಿಯಶಿವಾ ಗಂಡ ಹೆಂಡಿರ ಪ್ರೇಮ ಮಿಲನಕೆ ನಡುವೆ ಅರ್‍ಚಕ ಯಾತಕೆ ನಾವು ಆತ್ಮರು ದೇವ ತಂದೆಯು ನಡುವೆ ಧರ್‍ಮಾ ಯಾತಕೆ ನಿಲ್ಲು ಧರ್‍ಮವೆ ನಿಲ್ಲ...

ನಾನೆ ಗೋಪಿಕೆ ಬಾರೊ ಗೋಪನೆ ನೋಡು ಚಂದನ ಜಾರಿವೆ ಗುಡ್ಡ ಬೆಟ್ಟದ ಗಾನ ಹಕ್ಕಿಯ ಕಂಠ ಕೊರಗಿ ಸೊರಗಿದೆ ಮಳೆಯ ನೀರಿಗೆ ಹಸಿರು ಹಸಿದಿದೆ ಹನಿಯ ರೂಪದಿ ಚುಂಬಿಸು ಮಂದ ಗಾಳಿಯು ಸೋತು ನಿಂದಿದೆ ಗಂಧ ರೂಪದಿ ನಂಬಿಸು ನೋಡು ಕಡಲಿನ ಕನ್ಯೆ ಬಂದಳು ಗೆಜ್ಜೆ ಜಾ...

1...56789...18

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...