Home / Kannada

Browsing Tag: Kannada

ಯೋಗಮುದ್ರಿ ಬಲಿದವನೆಂಬೋ ಆಗ ಮೂಲದಿ ನಿನಗೆ ಭೋಗ ವಿಷಯ ಲಂಪಟಂಗಳನರಿಯದೆ ಲಾಗವನರಿಯದೆ ಹೀಗಾಗುವರೆ ||೧|| ವಿಷಯದೊಳಗೆ ಮನಸನಿಟ್ಟು ಹುಸಿಯ ಬೀಳುವರೇನೋ ಮರುಳೆ ಅಸಮ ತೇಜವನು ತನ್ನೊಳು ಕಾಣುತ ಶಶಿಕಿರಣದ ರಸವನರಿಯದೆ ||೨|| ಬಗಿದುನೋಡಿ ಬ್ರಹ್ಮಜ್ಞಾನ ...

ಸಂಸಾರದಿಂದ ಸದ್ಗತಿಹೊಂದಿ ಹವಣವರಿತು ಮಾಯೆಯ ಜಯಸಿ ಮರಣ ಗೆಲಿದವನೇ ಶಿವಯೋಗಿ ||ಪ|| ಭವಭಾರ ಜಾಯ ಕರ್ಮಗಳನು ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು ಬ್ರಹ್ಮಜ್ಞಾನ ದೊರೆವುತನಕ ತ್ರಿನಯನ ಆಶ್ರಯ ಹಿಡಿದು ಆವುದನರಿಯದೆ ಮುನ್ನಾ ಅನುವರಿತು ಸವಿಗರಿದು ...

ಪರಮಾನುಬೋಧೆಯೋ ಈ ಪರಮಾನುಬೋಧೆಯೋ ||ಪ|| ಸರಸಿಜ ಭವಗಿದು ಅರಕಿಲ್ಲದ ಪರಮಾನುಬೋಧೆಯೊ ||೧|| ಕಲಶಜಾಕೃತವನೆ ಈ ಬಲಯುತ ಛಲದಿ ನಿಲಯರೂಪ ||೨|| ಶಿಶುನಾಳಧೀಶನ ತಾ ಈ ಅಸಮ ಸ್ವರೂಪದ ಶಶಿಕಿರಣವೋ ||೩|| ****...

ಬೋಧವಾದ ಮೇಲೆ ಜನರಪವಾದಕಂಜುವರೆ? ಆದಿ ಅಂತ್ಯ ಆತ್ಮ ಆತ್ಮರುಭಯ ಬೇಧವಳಿದು ಸಾಧುಯೆನಿಸಿ ||ಪ|| ಕಾಲ ಕರ್ಮ ತುಳಿದು ತೂರ್ಯ ಜೋಲಿಯೊಳಗೆ ನುಡಿಯುತಿರಲು ಖೂಳಜನರು ಕೇಳಿ ಸಪ್ಪ ಕೀಳೋಣಾಗದೆನುತಿರಲು ||೧|| ಪರಮಗುರು ನಿರಾಲಹಸ್ತಾ ಶಿರದಮ್ಯಾಲ ಹರಿಯುತಿರ...

ಸಾಧುಗಳ ಸಹಜ ಪಥವಿದು ಆನಂದದಿಂದಿರುವುದು || ಪ || ಬೇಕು ಬ್ಯಾಡಾಯೆಂಬುದೆಲ್ಲಾ ಸಾಕುಮಾಡಿ ವಿಷಯ ನೂಕಿ ಲೋಕದೊಳು ಏಕವಾಗೆ ಮೂಕರಂತೆ ಚರಿಸುತಿಹರೋ || ೧ || ಎಲ್ಲಿ ಕುಳಿತರಲ್ಲೆ ದೃಷ್ಟಿ ಎಲ್ಲಿ ನಿಂತರಲ್ಲಿ ಲಕ್ಷ ಅಲ್ಲೆ ಇಲ್ಲೆಯೆಂಬೋದಳಿದು ಎಲ್ಲ ತಾ...

ಆರೂಢಾ ಈರೂಢಾ ಆರೂಢಾ ಯಾ ಆಲಿ ಪ್ರೌಢತನದಿ ಗುಂಡಾಡು ಹುಡುಗರೊಳು ಮೃಡ ನೀ ಪ್ರಭು ಆಡೋ ನಿರಂಜನ ||೧|| ಹಣುಮಂತಾ ಯೋಗಸಾ ಗುಣವಂತಾ ರಾಮಸಾ ಕಡಿದು ಕತ್ತಲದಿ ನಾ ಬಹಳ ವಿಚಾರದಿ ದಣಿದು ದಣಿದು ನಾ ನೋಡಬಂದೆ ||೨|| ಲಂಗೋಟಿ ಹಾಕಿದಿ ಕಂಗೆಟ್ಟು ಶೋಕದಿ ತು...

ಜಯ ಹೇ ಕರ್ನಾಟಕ ಮಾತೆ ಜಯ ಸುಂದರ ನದಿವನಗಳ ನಾಡೆ | ಜಯ ಹೇ ರಸ‌ಋಷಿಗಳ ಬೀಡೆ | ಭೂದೇವಿಯ ಮುಕುಟದ ನವ ಮಣಿಯೆ | ಗಂಧದ ಚಂದದ ಹೊನ್ನಿನ ಗಣಿಯೆ | ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ಜನನಿಯ ಜೋಗುಳ ವೇದದ ಘೋಷ |...

ನೋವು ನನ್ನೆದೆಯೊಳಗೆ… (ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ) ಓ! ಬುದ್ಧ ಮಸಣಕ್ಕೆ ಹೋಗುವ ಮೊದಲು ನಿನ್ನ ತತ್ತ್ವಗಳು ನಮಗೆ ಹಿಡಿಸಿದವು ಇರುವೆಗಳೇ ನೀವೇಕೆ ಹೋದಿರಿ ಅಲ್ಲಿ ! ಅದು ಮೇಣವೆಂದು ಗೊತ್ತಿಲ್ಲವೆ ? ನಿಟ್ಟಿಸುರು ಬಿಟ್ಟರೆ ಮುಗಿಯಲಿ...

ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ ||ಪ|| ನೆನ್ನೆ ಮೊನ್ನೆಯೆಂದು ತನ್ನೊಳಗೆ ತಾ ತಿಳಿದು ತನ್ನೇಸ್ಹುಣ್ಣಿವಿ ದಿನಾ ಕನ್ನೆಯಮಾಸಿ ಕೂಡಿ ಬಂದು ||ಅ.ಪ.|| ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ ಜೀವ ಹೋದಿತು ಸತ್ತಾ ಮೋಹ ಮದಗ...

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ|| ಪದುಮ ದಳದ ಮದವು ಬೆಳೆದು ಸದಮಲಾತ್ಮಯೋಗ ತುದಿಯ- ಲದನುಯೇರಿ ಮೆರೀದು ಬೆರಿದು ಕದಲದಂತೆ ಕರುಣ ರಸದ                           ||೧|| ಚಂದ್ರ ಸೂರ್ಯರೊಂದುಗೂಡಿದಾ ಅಲ್ಲೆ ಮೂಡಿದಾ ರಂಧ್ರದೂಳಗ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...