Poem

ಕಾವಲು

ಅರಮನೆಯಲ್ಲಿ ಅರಳುವ ಗುಲಾಬಿಯ ಸುತ್ತ ಮುತ್ತ ಆಳು-ಕಾಳು, ಮುಳ್ಳು ಸರ್‍ಪಗಾವಲು ಆದರೇನು ದುಂಬಿಗೆ ಸದಾ ತೆರೆದ ಬಾಗಿಲು *****

ಹೊಣೆ

ಬದುಕಿನ ಆಟದಲ್ಲಿ ಸೋಲು ಗೆಲುವುಗಳಿಗೆ ಯಾರು ಹೊಣೆ? ದೈವವೇ? ಅದೃಷ್ಟವೇ ಇಲ್ಲ, ನಮ್ಮೆಲ್ಲ ಸಾಧನೆಗೆ ಪರಿಶ್ರಮವೇ ಹೊಣೆ *****

ಅಂತರ

ಏರಿದರೆ ಮಂಚ, ಗದ್ದುಗೆ, ಸಿಂಹಾಸನ ಹೆಚ್ಚೆಂದರೆ ಎರಡು ಮೂರಡಿ ಮೇಲೆ ಜಾರಿದರೆ ಗೋರಿ, ಸಮಾಧಿ, ಬೃಂದಾವನ ಹೆಚ್ಚೆಂದರೆ ಎರಡು ಮೂರಡಿ ಕೆಳಗೆ *****

ಅಂತರಂಗ

ನಿನ್ನ ಅಂತರಂಗ ಅರಿಯದೆ ಹೃದಯ ಹಸಿರಾಗಿ ಪ್ರೀತಿ ಹೂವಾಗಿ ಅರಳಿತ್ತು ನಿನ್ನ ಅಂತರಂಗ ಅರಿವಾಗಿ ಹೃದಯ ಕಲ್ಲಾಗಿ ಪ್ರೀತಿ ಹಾವಾಗಿ ಕಡಿದಿತ್ತು *****

ಕಣ್ಮರೆ

ಹಲ್ಲಿ ಹೆಕ್ಕಿ ಹೆಕ್ಕಿ ನುಂಗುತ್ತಿತ್ತು ಇರುವೆಗಳ ಮತ್ತೆ ಸತ್ತ ಹಲ್ಲಿಯ ಹೊತ್ತು ಸಾಗಿತ್ತು ಇರುವೆಗಳ ಮೆರವಣಿಗೆ ದೇಹವೆಲ್ಲ ಬಗೆದು ಹುಡುಕುತ್ತಿದ್ದವು ಇರುವೆಗಳು ಕಾಣಲಿಲ್ಲ ಕೊನೆಗೂ ಒಳ ಹೊಕ್ಕ […]

ಸಿಹಿನೆನಪು

ಇನಿಯಾ ನೀ ಕೈ ಹಿಡಿದಾಗ ಕನಸುಗಳು ಅರಳಿ ಸಿಹಿನೆನಪಲಿ ಮಿಂದು ಬದುಕಿದ್ದೆ ಅಂದು ಇನಿಯಾ ನೀ ಕೈ ಕೊಟ್ಟಾಗ ಕನಸುಗಳು ಕಮರಿ ಕಹಿನೆನಪುಗಳ ಕೊಂದು ಬದುಕಿದ್ದೇನೆ ಇಂದು […]