
ಹಸಿ ಬಿಸಿಯ ಸ್ಥಿತ್ಯಂತರಕೆಂಥ ಕಲ್ಲಾದೊಡಂ ತುಸು ತುಸು ಒಡೆದಂತಿಮದಿ ಮಣ್ಣಕ್ಕು ಹುಸಿ ದುಡಿಮೆಯನುದಿನವು ನೂರ್ ಬಾರಿ ಬಿಸಿ ದುಡ್ಡಪ್ಪಾವರ್ತನೆಯ ವೇಗಕೆಮ್ಮ ಕೃಷಿ ಬದುಕಿನಾರೋಗ್ಯ ನುಚ್ಚು ನೂರಾಗುತಿದೆ – ವಿಜ್ಞಾನೇಶ್ವರಾ *****...
ಅಮ್ಮಮ್ಮ ಲಾಭದಾಯಕವೆಂಬೊಂದು ವಿಶೇಷಣಕೆಂಥ ಸಮ್ಮೋಹನ ಶಕ್ತಿಯೋ? ಸುಮ್ಮನೀ ಪದವನೆಸೆದೊ ಡೆಮ್ಮ ರೈತರು ಹೊಸ ಬೆಳೆಯ ನೆಚ್ಚುವರು ತಮ್ಮನೆ ಅಡವಿಟ್ಟು ನೆಲವ ಕಚ್ಚುವರು ಅಮ್ಮನಭಿಮಾನದಡಿ ಮುಗ್ಗರಿಸಿ ನೋಯುವರು – ವಿಜ್ಞಾನೇಶ್ವರಾ *****...
ನೋವನೊರೆಸುವ ಬದಲೊಳಗೊಂದು ನೋವನಿನ್ನೊಂದು ನೋವಿಂದ ಮರೆಯಿ ಸುವ ತಂತ್ರಗಾರಿಕೆ ಯಾಕೋ? ರೈತ ಬಲ ಮೂ ಲವನಳಿಸಿ ಸಾಲ ಸಬ್ಸಿಡಿ ಮತ್ಯಾಕೋ? ಬೀದಿ ಜೀವನವೆಲ್ಲರದನುದಿನವು ಹೊಸ ಗುಂಡಿಗಳು – ವಿಜ್ಞಾನೇಶ್ವರಾ *****...
ಸುಲಭವೆಂದೊಂದು ಬೆಳೆಯನಿರುವೆಲ್ಲ ಜಾಗ ದೊಳು ರೈತ ತಾ ಬೆಳೆದನಿವಾರ್‍ಯದೊಳು ಮಾರುವ ನೆಲ್ಲವನು ನೀಚ ಬೆಲೆಗೆ, ಉಳಿದೆಲ್ಲ ಬೇಕು ಗಳಾನಂತರದೊಳ್ ಕೊಳ್ಳುವನುಚ್ಛ ಬೆಲೆಗೆ ಬೆಲೆಯಿಲ್ಲದಾಗಿಹುದಿದರಿಂದ ರೈತಂಗಾತನುತ್ಪನ್ನಂಗೆ – ವಿಜ್ಞಾನೇಶ್ವರಾ *...
ಅನ್ನ, ಹಾಲು, ತರಕಾರಿಗಳಲಿ, ಅಮಿತ ಬಗೆಯ ದನೆಮ್ಮ ತಾಯ್ನೆಲದೊಳುತ್ಪಾದಿಸಲದೊಂದು ಸಾವಯ ವನಡೆಯದನಿನ್ನಷ್ಟು ವಿಸ್ತರಿಸಿ ಬಡಗಿ, ಕಮ್ಮಾರ, ಕ್ಷೌರ ವೆನುತೆಷ್ಟೊಂದು ಕೆಲಸಗಳನರಿತೆಮ್ಮ ಸೇವೆಯನಲ್ಲಲ್ಲೇ ತಾನೆ ಮಾಡಿದೊಡುಳಿವ ಸಾಗಾಟದೊಳಿನ್ನಷ್ಟು ಸವಿಯುಂ...
ನಡೆಯುವೊಡೆ ಎಡವಿದೊಡದು ಸಹಜ ನೋವಿನೊಡೆ ಕಲಿವ ನಲಿವುಂಟಲ್ಲಿ ನಡೆಯದವನೆಡವಿದೊಡೆ ನಡೆವವನು ನೋಯುವಾಧುನಿಕ ಸ್ಥಿತಿಯೊಳಗೆ ಕೃಷಿ ತಜ್ಞ ನೆಡವಿನಲಿ ಕೃಷಿಕ ತಾ ನೋಯುತಿಹ – ವಿಜ್ಞಾನೇಶ್ವರಾ *****...
ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ –...
ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ – ವಿಜ್ಞಾನೇಶ್ವರಾ *****...
ಸಾವಯವ ಜೀವ ಕೋಟಿಗದೇ ಸಾವ ಯವದೊಳನ್ನ ಗೊಬ್ಬರವಿಕ್ಕದಲೆ ನಿರವ ಯವವನಿಟ್ಟರದು ತುರ್ತು ಸ್ಥಿತಿಯೆಂದಾಸ್ಪತ್ರೆ ಯೊಳು ಕೃತಕ ರಕುತವ ಕೊಟ್ಟಂತದುವೆ ಜೀವನವೆಂದೊಡದಕಿಂತ ಮೂರ್ಖತೆಯೇನು? – ವಿಜ್ಞಾನೇಶ್ವರಾ *****...
ತರತರದ ಮಲ ಮೂತ್ರ ತರಗೆಲೆಯನುಂಬೆಮ್ಮ ಧರೆಗಿಲ್ಲವಾ ನೈಲಾನು ಪ್ಲಾಸ್ಟಿಕ್‌ಗಳನರಗಿಸುವ ಶಕುತಿ ಜ್ವರ ಬೆಂಕಿಯೇ ಬೇಕದಕೆ, ಮೊದಲೊಳದರ ತ ಯಾರಿಗಾ ಮೇಲೆ ವಿಲೆವಾರಿಗೇರಿಹುದು ಧರೆಯುರಿಯು ಯೂರಿಯಾ ಎಂದರದೆ ಪ್ಲಾಸ್ಟಿಕ್ಕಿನಿನ್ನೊಂದವತಾರ – ವಿಜ್ಞಾ...













