ಸದಾನಂದ ಪರಮಾತ್ಮ ಬೋಧಮಯ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||ಪ|| ನಿಧಾನದಲಿ ನಿಜ ಹೃದಯ ಕಮಲದಲಿ ಸುಧಾಕಿರಣ ಗುರುಪದಾಬ್ಜ ಕಂಡರೆ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೧|| ಯೋಗಿಯಾಗಿ ಸಂಭೋಗ ಮಾಡಿ...
ಬಹೋಧವಾದೀತೆ ಆನಂದ ಬಹು ಚಂದಾ ಬಹೋಧವಾದೀತೆ ಆನಂದಾ ಸಾದರಜ್ಞಾನ ಚತುಷ್ಟಿಯ ಕೊನೆಯೊಳು ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ ||೧|| ವೀರಯೋಗಿವರ ಪಾರಪರಾತ್ಪರ ಮೀರಿದ ದಾರಿಯ ತೋರಿಸುವುದು ಬಹು ಚಂದಾ ಶಿಶುನಾಳದೀಶನ ಗೋವಿಂದಕುಮಾರಗೆ ಬಹು ಚಂದಾ...
ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ ||ಪ|| ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ ಮಾಯಾ ನೂಕಿ...