ಕಷ್ಟವ ಮಾಡಿದೆಯಾ ಈ ಶರೀರದ
ಕಷ್ಟವ ಮಾಡಿದೆಯಾ                   || ಪ. ||

ಕಷ್ಟವ ಮಾಡಿದಿ ಶ್ರೇಷ್ಠ ಮಹಿಮ ಋಷಿ
ಪಟ್ಟದ ಬ್ರಹ್ಮನ ವಿಷ್ಣು ರುದ್ರರ           || ಅ .ಪ .||

ಶರೀರದ ಕಲಶದೊಳು ಜಲವ ಸುರಿಸಿ
ಹಿರದನೋ ರೋಮಗಳು ಸುರಚಿರದನ್ನವನೆರೆದು
ಪರಿಹರಿಸಲು ವರಕೆಲಸಕ್ಕೆ ತಾ ಕೆಲಶ್ಯಾನಾಗಿ  || ೧ ||

ಹೃದಯದ ಕಲಶದೊಳು ಮುದುಕನಾಗಿ
ಹದವಗೊಳಿಸಿದನು ಇರುವೆ ಶಿಶುನಾಳಧೀಶನ
ಕರುಣದಿ ಉಸುರುವೆ ಗುರುಗೋವಿಂದರಾಜನಾ || ೨ ||
****