ಬಹೋಧವಾದೀತೆ ಆನಂದ ಬಹು ಚಂದಾ
ಬಹೋಧವಾದೀತೆ ಆನಂದಾ
ಸಾದರಜ್ಞಾನ ಚತುಷ್ಟಿಯ ಕೊನೆಯೊಳು
ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ ||೧||
ವೀರಯೋಗಿವರ ಪಾರಪರಾತ್ಪರ ಮೀರಿದ
ದಾರಿಯ ತೋರಿಸುವುದು ಬಹು ಚಂದಾ
ಶಿಶುನಾಳದೀಶನ ಗೋವಿಂದಕುಮಾರಗೆ ಬಹು ಚಂದಾ ||೨||
****
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013