ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ
ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ ||ಪ||
ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ
ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ
ಮಾಯಾ ನೂಕಿ ಬ್ರಹ್ಮಗುರುಪಾದಾಂಬುಜ ಸೋಂಕಿ ಸೌಖ್ಯವ ಪಡೆದೆ ||೧||
ಓದು ಅಕ್ಷರ ವೇದ ಶಾಸ್ತ್ರದ ಸೊಲ್ಲಾ
ಸಾಧನವಿದ್ಯ ಸಕಲೈಶ್ವರ್ಯ ಸಂಪದ ಗಾದಿಮಾತುಗಳೆಲ್ಲಾ
ಪಾದದಲಿ ಮೆಟ್ಟೆಂದು ಹೇಳಿದೆನಲ್ಲಾ
ಬೋಧಿಸಿ ನಾದಬಿಂದು ಕಲಹ ತತ್ವದ ಹಾದಿ ತೋರಿಸಬಲ್ಲಾ ||೨||
ಹೆಣ್ಣು ಹೊಲ ಮನಿ ಕೆಲಸಗಳೆಂಬಾ
ಹೊನ್ನುಗಳಿಸಿ ಬಂಗಾರ ಬೆಳ್ಳಿ ಹಣಗಳನು ಎಣಿಸಿ ಮೆರೆಯುವ ಜಂಬಾ
ತನ್ನೊಳರಿಯದೆ ಅನ್ಯ ಕರ್ಮದ ಡಂಬವ ಬಿಟ್ಟು
ಚನ್ನ ಶಿಶುನಾಳಧೀಶನೋಳ್ ಪಡಿಯೆಂದಾ ಭಾಗ್ಯದ ಕುಂಭಾ ||೩||
****
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013