
ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ ||ಪ|| ಬಾಳ ದಿವಸಾಯ್ತು ನಿಮ್ಮನ್ನು ಕೇಳಿ ಕೇಳಿ ದಣಿದೆ ನೊಂದೆ ಗಾಳಿ ಮಂಟಪದೊಳಗೆ ಕೂಡಿ ಹೇಳಿದ ನುಡಿ ಆಳಾಪವಾಯ್ತು ||೧|| ಚಲುವೆ ಅನಿಮಿಷಾಗ್ರ ಕೊನಿಗೆ ಸುಳಿದರ...
ಮರುಳಾದೆ ಮಾನಿನಿ ಮರುಳಾದೆ ಮಾರನಾಟದಿ ಮನಸ್ಸುಗೊಂಡೆನೇ || ಪ || ತರುಳರನ್ನು ನೀನು ಕಾಣುತ ಸ್ಮರನ ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ ಸರಸಿಜಾಕ್ಷಿ ಕರುಣಿಸು || ೧ || ಸುಂದರಾಂಗಿ ಚಂದ್ರವದನೆ ಮಂದಗಮನೆ ಹೊಂದಿ ಸುಖಿಸೆ ಎಂದಿಗಾದರು ಅಗಲದಂಥ ...
ಏನಾಯ್ತೇ ಮಾನಿನಿ ಏನಾಯ್ತೇ ಮಾನಿನಿ || ಪ. || ಭಾನು ಕಿರಣ ಕಾಣಿಸುವ ಪ್ರಕಾಶವು ಜ್ಞಾನದೋಳಗೆ ಶುಭ ತಾನೇ ತಾನೆ ||ಅ. ಪ.|| ನಿನ್ನ ಮಾರಿ ನೋಡಿದರೆ ಘನ ಸರಿ ಕೂಡಿದೆ ಹೀನ ವಿಷಯ ಸಂಹರಿಸುವದಕೆ ಅನುಮಾನವ್ಯಾಕೆ ವನಜಾಕ್ಷಿಮಣಿಯೆ ||೧|| ಶಿಶುನಾಳಧೀಶನು...
ದಯಮಾಡಬೇಕೇ ಮಾನಿನಿಯೆ ಮೋಹದ ಮನಗೋನಿಯೇ ||ಪ.|| ವನಜಾನನೆ ಬಾಳ ದಿನ ಮನಸೋತೆನು ಕನಕರಿಸುತಲಿರುವೆನು ಕನಕದ ಗಿರಿಜಾನಿಯೆ ||೧|| ಚಂದ್ರವದನೇ ಬಾ ಇಂದ್ರಲೋಕದ ರಂಭೆ ಎಂದಿಗಾದರೂ ಇಂಥಾ ಗುಣವೇನಂದಪುರುಷನ ಖಣಿಯೇ ||೨|| ವಸುಧಿಯೋಳ್ ಶಿಶುನಾಳಧೀಶನ ಸೇವಕ...
ಎಲ್ಲರಂಥವನಲ್ಲ ನನ ಗಂಡ ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ || ಪ || ಸೊಲ್ಲು ಸೊಲ್ಲಿಗೆ ಬಯ್ದು ನನ್ನ ಎಲ್ಲಿಗೋಗದ್ಹಾಂಗ ಮಾಡಿಟ್ಟಾ ಕಾಲ್ಮುರಿದು ಬಿಟ್ಟಾ || ಅ.ಪ || ಮಾತಾಪಿತರು ಮನೆಯೊಳಿರುತಿರಲು ಮನಸೋತು ಮೂವರು ಪ್ರ...
ನಿನ್ನವನು ನಾ ನಿನಗೇನಾತ ಸಖಿ ||ಪ|| ಅನುಮಾನವಿಲ್ಲದೆ ಆತ್ಮನ ಸವಿಸುಖ ಚಿನುಮಯನಾಶ್ರಯಕೆ ಅನುಮೋದಿಸು ವಿಭಾ ನಿನಗೇನಾತ ಸಖಿ ||೧|| ಮೃಡಿಯಡರುತ ಪೊಡವಿಗೆ ಬಿದ್ದು ಮಿಡಕುವಿ ಕಡುಚಿಂತೆಯನು ಕಂಡು ನಿನಗೇನಾತ ಸಖಿ ||೨|| ಕಾಮಿನಿ ಕಲಹದ ನಲೆ ತಿಳಿದ ಹಮ...
ನಮ್ಮನಿಮ್ಮಗಾಗದು ಸುಮ್ಮನೆ ಹೊತ್ತು ಹೋಗದು ||ಪ.|| ಕ್ರಮವಗೆಡಿಸಿ ಮಮತೆವಿಡಿಸಿ ರಮಿಸಿ ರಮಿಸಿದಲ್ಲೆ ಸಖೀ ||ಅ.ಪ.|| ಕರುಣವಿಲ್ಲದೇ ಹಿರಿಯರ ದಣಿಸಿ ಕಿರಿಯರ ಕುಣಿಸಿದಿ ಸೇರಲಾರದೆ ಕಿರಿಯ ತಮ್ಮಗೆ ಮಾರಿದೋರದೆ ಹರಿದು ಹೋದಿಯಲ್ಲೇ ಸಖಿ ||೧|| ಬಲ್ಲಿ...
ಎಂಥಾ ನಗಿ ಬಂತೋ ಎನಗೆ ಗಡ ಮುದುಕಿಯ ಕಂಡು ||ಪ|| ನಿಂತು ನೋಡಲಾಗವಲ್ಲದು ಕಣ್ಣಿಲೆ ಸಂತ್ಯಾಗ ಮಂದಿ ಕಾಣದವಳೋ ||ಅ.ಪ.|| ಆರು ಮೂರು ಗೆಳತೇರ ಸ್ನೇಹವನು ದೂರ ಮಾಡದೆ ಸುಮ್ಮಾನದಿ ತಾನು ದಾರಿಹಿಡಿದು ಸಾರುವಳಿದು ಏನು ದಾರಿ ನಡೆದ ಮುದುಕಿಯ ಕಂಡು ||೧|...
ನಡಿ ನಡಿಯುತ ಗಂಡ ನಡಮುರಿದೊದೆದೆನ್ನ ಹುಡುಗಾಟ ಬಿಡಿಸಿ ಹೌದೆನಿಸಿದನೇ ||ಪ|| ಮದನಗಿತ್ತ್ಯಾಗಿ ಬಂದು ಮನೆಯೊಳಗಿರುತಿರೆ ಬೆದಗಡಿಕಿಯೆಂದು ಹೆಸರಿಡಿಸಿದನೇ ನದರಿನಮ್ಯಾಲ ತಾ ನದರಿಟ್ಟು ಎನಗೆ ಮುದದಿ ಚುಂಬನಕೊಟ್ಟು ರಮಿಸಿದನೇ ||೧|| ಹೊಸದಾದ ಸೊಸಿಯಾದ...
ಮುದಿಕ್ಯಾಗಿ ಮುರುಕ ಇನ್ನ್ಯಾಕ ಎದುರಿಗೆ ನೀರಗಿಗಳ್ ಒದೆಯುವದು ಸಾಕೆ ||ಪ|| ಮೊದಲಿಗೆ ಮೂವರು ಕೂಡಿ ಮಾಯ ಮದನ ಮಂದಿರದೊಳು ಮುದದಿ ಮಾತಾಡಿ ಹದಗೆಟ್ಟು ಹಾದರ ಮಾಡಿ ಮುಂದೆ ಬದುಕಿನ ಎಚ್ಚರ ನಿನಗಿಲ್ಲ ಖೋಡಿ ||೧|| ಏಳೆಂಟು ಗೆಳತೇರು ಜತ್ತು ಹಳ್ಳಿ ಹಳ...













