ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ
ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ ||ಪ||

ಬಾಳ ದಿವಸಾಯ್ತು ನಿಮ್ಮನ್ನು ಕೇಳಿ ಕೇಳಿ ದಣಿದೆ ನೊಂದೆ
ಗಾಳಿ ಮಂಟಪದೊಳಗೆ ಕೂಡಿ ಹೇಳಿದ ನುಡಿ ಆಳಾಪವಾಯ್ತು ||೧||

ಚಲುವೆ ಅನಿಮಿಷಾಗ್ರ ಕೊನಿಗೆ ಸುಳಿದರೊಂದು ಘಳಿಗೆಯೊಳಗೆ
ತಿಳಿದು ನೋಡಿದೆ ಲಲನಾಮಣಿಯೇ
ಹೋಳಿದು ಹೋದರೋಳಿತೇ ನೀರೆ ||೨||

ಶಿಶುವಿನಾಳಧೀಶನಣುನೊಸಗೆಯೊಳಿರುವ ಕುಶಲವಂತೆ
ಹೊಸತು ಮಾಯಾ ಹರಿಸಿ ನಿಂದು ನಿಶಿತಾತ್ಮಕಿರಣಬಿಂದು ||೩||

****