ಮರುಳಾದೆ ಮಾನಿನಿ ಮರುಳಾದೆ
ಮಾರನಾಟದಿ ಮನಸ್ಸುಗೊಂಡೆನೇ || ಪ ||

ತರುಳರನ್ನು ನೀನು ಕಾಣುತ ಸ್ಮರನ
ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ
ಸರಸಿಜಾಕ್ಷಿ ಕರುಣಿಸು || ೧ ||

ಸುಂದರಾಂಗಿ ಚಂದ್ರವದನೆ
ಮಂದಗಮನೆ ಹೊಂದಿ ಸುಖಿಸೆ
ಎಂದಿಗಾದರು ಅಗಲದಂಥ ಒಂದು ವಚನ ಲಾಲಿಸೈ || ೨ ||

ಇಳೆಯೊಳಧಿಕ ಶಿಶುನಾಳ ಭಲರೆ ಗುರುಗೋವಿಂದನೊಡನೆ
ಕಲಶ ಕುಚವು ಕೈಯೊಳು ಪಿಡಿದು
ತಿಳಿಸಿ ಬೋಧಿಸೇ ಲಲನೆ || ೩ ||

****