Home / Poem

Browsing Tag: Poem

ಇರಲಿ ನಿನ್ನಲಿ ಮಾನವತೆಯ ರೀತಿ-ನೀತಿಯ ಸನ್ಮತಿ ಉರಿವ ಧಗೆ ಹಗೆ ಹೊತ್ತು ಸಾಗಿರೆ ನಿನ್ನುಳಿವಿಗೊದಗದೆ ದುರ್ಗತಿ ಧುಮ್ಮಿಕ್ಕಿ ದುಮುಕುತ ಏರಿಳಿವ ಬಳಸುವಾ ಜಲವು ಸಾಗರ ಸೇರದೆ ನಡೆವ ಹಾದಿಯತಿಲ್ಲ ಚಿಗುರಿಸಿ ಹಸಿರ ಬಳಿಯದೆ ತಾನಿರುವುದೆ ಬರುವುದೆಲ್ಲ ಬ...

ಜಯತು ಗಣಪತಿ ಜ್ಞಾನ ದಿನಮಣಿ ಜಯತು ಸರಸ್ವತಿ ವಾಗ್ವಿಲಾಸಿನಿ ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ ಜಯತು ಕವಿವರ ವ್ಯಾಸ ಶುಕಮುನಿ ಜಯತು ವಾಲ್ಮೀಕಿ ಋಷಿ ಕಲಾಗ್ರಣಿ ಜಯತು ಶಂಕರಭಾರ್ತಿ ಗುರುವಿನ ಪಾದಕೆರಗುವೆ ||೧|| ಶಂಕರನ ಅವತರಿಸಿ ಶಂ...

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ ಭಯವು ಭವ ಸಾಗರದಲಿ ಹೃದಯ ಲಹರಿ ಹುಡುಕುತಿದೆ ...

ಶ್ರೀರಮಣ ಸರ್ವೇಶ ವಾರಿಜಾದಳನಯನ ಮಾರಹರಪಿತನ ಮಂದಹಾಸವದನ ಸಾರಿದೆನು ನಾ ನಿನ್ನ ಸಾಕ್ಷತ ಹರಿಚಕ್ರದ ರಮಣ ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು- ರಾರಿ ಎಂದೊದರೆ ಆಭಿಮಾನವನು ಕಾಯ್ದಿ ||೧|| ಮೀರಿದ ಕಾಡ್ಗಿಚ್ಚು ಪರಿಹರಿಸಿ ಗೋವುಗಳ ...

ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ ಜಯ ಜಯತು ಜಗದಾಂಬೆ ಸಾಂಬೆ ತ್ರಯ ಜಗವನೆಡಬಿಡದೆ ತುಂಬೆ ನಯ ವಿನಯಗುಣ ಗಣಕದಂಬೆ ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ|| ಏನು ಇಲ್ಲದಲಂದು ಓಂಕಾರ ಪ್ರಣಮದಿ ನೀನು ಮೂಲದಿ ಬಂದು ಅ-ಉ-ಮಾಕಾರವೆ ಸಾನುರಾಗದಿ ನಿಂದು ಜ್ಞಾ...

ಹುಣ್ಣಿಮೆಯಿಂದ ಪಾಡ್ಯ ಪಾಡ್ಯದಿಂದ ಬಿದಿಗೆ ಅಂಶ-ಅಂಶ ಕರಗಿ ಅಮಾವಾಸ್ಯೆ ಇನ್ನಿಲ್ಲವಾಗಿಬಿಟ್ಟ ಚಂದ್ರ ಬರುವುದಿಲ್ಲ ಇನ್ನು ಇದೇ ಹದಿನೈದು ದಿನಗಳ ಹಿಂದೆ ಈ ಆಕಾಶ ತಾರೆಗಳ ಹೂಹಾರ ತೊಡಿಸಿ ಚಂದ್ರನ್ನ ಸನ್ಮಾನಿಸಿತ್ತು, ಪೂರ್ಣಚಂದ್ರನ ತುಂಬು ನಗೆ ತುಂ...

ಹನುಮಂತ ಭೂಪಾ ಸದ್ಗುಣಮಣಿ ಶಾಂತರೂಪಾ || ಪ || ಹನುಮಂತ ಮಹಾಮುನೀಶ ವಾಯು ತನಯ ವಾನರೇಂದ್ರ ವನಚರ ಶುಭಕಿರಣ ವಿಹಾರನು ಮಹಿಮಾಗಾರಾ ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ ಕ್ಷೋಣಿಪಾಲ ರಘುಚರಣ ಸೇವಕಾ ಕಪಿ...

ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು ನಂದಿ ಜಯ ಜಯ ಎನುತಲಿಪ್ಪರು ಗಂಗಾ ಪಾರ್ವತಾದೇವಿಯರ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...