ಶ್ರೀರಮಣ ಸರ್ವೇಶ ವಾರಿಜಾದಳನಯನ
ಮಾರಹರಪಿತನ ಮಂದಹಾಸವದನ
ಸಾರಿದೆನು ನಾ ನಿನ್ನ ಸಾಕ್ಷತ ಹರಿಚಕ್ರದ ರಮಣ
ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು-
ರಾರಿ ಎಂದೊದರೆ ಆಭಿಮಾನವನು ಕಾಯ್ದಿ ||೧||

ಮೀರಿದ ಕಾಡ್ಗಿಚ್ಚು ಪರಿಹರಿಸಿ ಗೋವುಗಳ
ಬಾರಿ ಬಾರಿಗೆ ಬಂದು ಭಯವು ಕಳದಿ
ಬಕಾಸುರನನ್ನು ಸಂಹರಿಸಿ ಶಟಕನನ್ನು ಮುರಿದೊತ್ತಿ
ಮಕರಕರ ಕಳ್ಳರನ್ನು ಕೊಂದು ವಿಕಟಪೂತನಿಹಿರಿಯೇ
ಗೋಕುಲದ ನಗರಕ್ಕೆ ಸಕಲಸಂತೋಷವಿತ್ತು ದೇವಾ ||೨||

ಮುಕುಟಮರ್ದನ ಮಾವ ಕಂಸನು ಮಡದಿ
ದೇವಕಿದೇವಿ ವಸುದೇವರುಗಳ ಸೆರೆಯ
ಮುಕ್ತರನ ಮಾಡಿ ಮುತ್ತಿಗೆಯ ಪಟ್ಟಗಟ್ಟಿಸಿ
ಬಳಿ ಬಳಿರೆ ನಿನ್ನಾಟ ಗೋಪಿಯರ ಕೂಟ
ಗೊಲ್ಲರ ಕೂಡ್ಯಾಡಿ ಗೋವುಗಳನು ಕಾಯ್ದಿ
ಬಲುಕಳ್ಳರಕ್ಕಸರನು ಕಪಟದಲಿ ಕೊಂದು
ವಲ್ಲಭಿಯರು ಜಲಕ್ರೀಡಿಯನು ಆಡೆ ವಸ್ತ್ರವನು ಕಳ್ಳತನ-
ದಲ್ಲಿ ತಕ್ಕೊಂಡು ಗಿಡವನೇರಿದಿ ಬಲು
ಉಲ್ಲಾಸದಿಂದ ಸರ್ವ‌ಇಂಗಿತನೋಡಿ ಸರ್ವರಕೂಟ ಆಟವನ್ನಾಡಿದಿ
ಸಲ್ಲದು ನಿಮಗೆ ಲಕ್ಷ್ಮಿಕಾಂತಾ ಗೊಲ್ಲಕೀಗಳಾಟ ಮಾಡಿದಿ ಮಾಟ ||೩||

ದುರುಳ ದೈತ್ಯರನ ಕೊಂದು ನಾರಿಯರಿಗೆ ಒಲದಿ ನೀ
ನಿರಕಮಾಡಿದಿ ಜಾಂಬುವಂತನೊಂಡನೆ
ತರಕಿಸುವ ಅಯೋದ್ಯವು ತಪ್ಪದೆ
ಮುರಹರಾ ಕೌಸ್ತುಭಯ ಮಣಿಮುದ್ದುಕನ್ನಿಕೆಯರನ್ನು ಗ್ರಹಣಮಾಡಿದಿ
ದ್ವಾರಕಾವತಿಗಾಗಿ ಹರುಷದಿಂದಲಿ ಬಂದು ಹದನವನು ತಿಳಿದೆ
ಗಿರಿಧರ ಕ್ಷೀರಸಾಗರಾ ನಿನ್ನ ಮಹಿಮೆ ಅರಿಯದಲ್ಲಾ
ಅರಿಯದೇ ಅಜನ ಸುರಪತಿಗಳು ||೪||

ಕೊಳಲೂದಿ ಗೋಪಿಯರ ಕಾಮಪಾಶಕಟ್ಟಿಸಿದೆ
ಪ್ರಮೆ ಬಗೆ ಬಗೆಗಳಿಂದ ಕೆಲವರ ಮುದ್ದಾಡಿ
ಕೆಲವರ ಕೂಡ ಭಯಗೊಳಿಸಿದೆ
ಬಲುಕಾಮಕಲೆಗಳಿಂದ ನಳಿನಮುಖಿ‌ಋಷಿಪತ್ನಿಯರ ತಂದು
ಮೃಷ್ಟಾನ್ನವನು ಗೆಳೆಯರ ಕೂಡ ಭೋಜನವ ಮಾಡಿ ಕಳದಿ
ಕೆಳದಿಯರ ಕಾಮತೃಪ್ತಿಪಡಿಸಿ ಕಳುಸಿದಿ ದೇವಾ
ಬಳಿ ಬಳಿರೆ ನಿನ್ನಾಟ ಮಾಡಿದಿ ಮಾಟ ||೫||

ಗಿರಿಯೆತ್ತಿ ಗೋಕುಲದ ಪುರ ಸುರಮಳೆಯಗರದಿ
ಇ೦ದ್ರನಗರವ ಮುರಿದಿ ಸುರಪಾಂಡವರ ಅರಗಿನಮನಿ
ಅರಣ್ಯದಿ ಅಜ್ಞಾತವಾಸ ಬೇಗ ಅರಸುಗಳನ್ನು ಮಾಡಿ
ಸುರಪತಿಗಳೊಡನೆ ಯುದ್ಧವನು ಧರಿಸಿದ್ಯೋ
ಅದಕ್ಕೆ ಅದೋಯ೯ನು ನೀ ಪರಮನಲ್ಲದೆ
ಅಜು೯ನನ ರಥಕೆ ತನುವನು ಅಂಗೀಕರಿಸಿದಿ ದೇವಾ
ಶರಣೋ ನಿನ್ನಿಂದ ಪಾಂಡವರಿಗೆ ದೊರೆತನವ ಕೊಟ್ಟು
ಮುತ್ತಿಗೆಯ ಪಟ್ಟಗಟ್ಟಿಸಿ ಅವರನ್ನಿರಿಸಿಗಾಗಿ ಈರೈದು
ಅವತಾರಧರಿಸಿದ್ಯೋ ಭಕ್ತವತ್ಸಲಾ ಮುರಹರ ಕರುಣಾಂಕರ
ನಿನ್ನ ಮರೆಹೊಕ್ಕವರನ್ನು ಪೊರದಿ ದುರಿತಕೋಟಿಗಳನ್ನು ತರಿದಿ || ೬ ||

ಅಂದಹಸ್ಯನ ಕೊಂದು ವೇದವನು ತಂದಿ ಸೇತ್ವೆ
ನಂದಿಹತ್ತಿ ಆನಂದದಿ ಮಂದಾರಗಿರಿ ಬೆನ್ನಿನಲಿಪೊತ್ತು ದರುಣಿಯನು ತಂದಿ
ಕಂದನ ಸಲುವಾಗಿ ಕನಕಶ್ಯಾಪನ ಶೀಳಿ ಇಂದ್ರಗಾಗಿ ಬಲೆ ಒಗೆದು ಸೀಳದಿ
ತಂದಿಯ ಮಾತು ಕೇಳಿ ತಾಯಿಯ ಶಿರವು ತರಿದಿ
ಬಂದ ಕಂಸನ ಭಯವು ಪರಿಹರಿಸಿದಿ ದೇವಾದಿದೇವಾ || ೭ ||

ಕಲ್ಲು ಕಾಲಿಲೆತುಳಿದು ಕೋಮಲಾಂಗಿಯ ಮಾಡಿ
ಬಿಲ್ಲುಮುರಿದು ಸೀತೆಯನು ಬಿಂಕದಲಿ ಗೆದ್ದಿ
ಪಥದಲ್ಲಿ ಬರುವ ಪರಶುರಾಮನ ದೂರದಲಿ ಕಾಯ್ದಿ
ಉಲ್ಲಾಸವು ಪುರುಷ ಘ್ರುತನವೆಂದು ತಿಳಿ
ಸಲ್ಲಸಿದ್ಯೋ ಪಿತನಾಜ್ಞೆಯನು ಸಹೋದರರಿಗೆ ರಾಜ್ಯವನು ಕೊಟ್ಟು
ವಲ್ಲಭಿ ಸೀತೆಯನು ವನವ ಚರಿಸಿ
ಆಲ್ಲಿಂದ ರಾವಣನು ಆಪಹರಿಸಿ ಸೀತೆಯನು
ಕಲ್ಲಿನೊಳು ಸೇತ್ವೆಕಟ್ಟಿ ಕಪಿಗಳನು ನೆರಹಿ ಹತ್ತು
ತೆಲಿ ರಾವಣನನ ಹತಮಾಡಿ ಲಂಕಿಯನು ಪಟ್ಟಗಟ್ಟಿಸಿ ವಿಭೀಷಣನಿಗೆ
ನಿಲ್ಲಿಸಿ ಮತ್ತು ಸೀತೆಯನುಸಹಿತ ಅಯೋಧ್ಯವನಾಳಿದಿ
ಭಕ್ತವಶ ಬಿರದಂಗೆ ದೇವಕಿಯಲಿ ವೇದವನು ಸ್ಥುತಿಸಿ
ಸತ್ಕಭಾಮಿ ರುಕ್ಮಿಣಿಯರ ಪ್ರಪಂಚದೊಳು ಮತ್ಸರವ ಬೆಳಸಿ ಮದನಕಲಹವ ಮಾಡಿದ್ಯೋ ದೇವಾದಿ ದೇವಾ ||೮||

ಬೌದ್ಧಾವತಾರದೊಳು ನಾರಿಮರ ವೃತಕೆಡಸಿ ಅಷ್ಟವನು ಕಡಿದೆ ರಕ್ಕಸರ
ಆದಿಮೂರ್ತಿಯೆನಿಸಿದಿ ಅನೇಕ ಕಲಿಯಲಿ
ಭೇದಿಸಿ ಅಸುರರನು ಸೀಳಿ ಭೂಭಾರವನಿಳುವಿದಿ
ವೇದವನು ಸ್ತುತಿಸಲು ಕಡಿಗಾಣದೆ ನಿನ್ನ ಲಕ್ಷ್ಮಿ ತಿಳಿ-
ಯದಂತಾಯಿತು ಅಪರಮಿತ ನಿನ್ನ ಮಹಿಮೆ ಅನಂತಲೀಲೆಯು
ಆಧರಿಸಿ ಎನ್ನ ಕಾಯ್ದಿರುವಿಯೋ ಗೋಪಾಲಾ || ೯ ||

ಹೆತ್ತ ತಂದಿಯು ಮಗನನ್ನು ಹಿಡಿದು
ತೈಲದೊಳು ಬಿಸುಟಲು ಮತ್ತೆ ಕಾಯ್ದೆ ಹರಿಯೇ
ನಿತ್ಕವಾದ ಹಿರಣ್ಯಕಶಪನು ಮಗನ ಬಾಧಿಸಲು
ಕರ್ತು ನೀನಾಗಿ ಕಾಯ್ದೆ ಹರಿಯೇ
ಭರ್ತಿಸಭೆಯೊಳಗೆ ಬಾಯಿ ಬಿಟ್ಟಿರಲು ಜಗ-
ದುರಿತ ದುಶ್ಶಾಸನನು ದ್ರೌಪದಿಯ ಅಭಿಮಾನಮಂ ಕಳೆಯುತ್ತಿರಲು
ಕರ್ತು ನೀನಾಗಿ ಕಾಯ್ದೆ ಹರಿಯೇ ||೧೦||

ತ್ರಯ ನಿನ್ನಾಧೀನ ತ್ರಯ ಪರಿಹಾರ
ತ್ರಯ ಕರುಣಾರ್ಜಿತನಾಗಿ ತ್ರಯ ವಿಕ್ರಮನಾಗಿ
ತ್ರಯ ಗುರುಗೋವಿಂದನಣುಗನಿಗೆ ಸುಖ=
ಸಾಯುಜ್ಯ ಪದವಿಯನು ಕೊಡಿಸಿದಿ
ತ್ರಯನಾದ ಗೋಪಾಲ ಎನ್ನ ಕಾಯ್ದಿರುವಿಯೇನೋ ಹರಿಯೇ || ೧೧ ||
*****