ಅಲೆ ಸಾಗರಕ್ಕೆ ಹೇಳಿತು- “ನನಗೆ ನಿನ್ನ ಭೋರ್ಗರೆತ ಶಬ್ದ ಬೇಡವೆನಿಸಿದೆ. ನಾನು ನಿನ್ನಿಂದ ದೂರ ಓಡಿ ಹೋಗಲೆ?” ಎಂದಿತು. “ಎಲೆ! ಹುಚ್ಚು ಅಲೆಯೆ, ಭೋರ್‍ಗರೆತ, ಶಬ್ದ ನಿನ್ನಿಂದಲೇ ಅಲ್ಲವೇ? ಸುಮ್ಮನೆ ನನ್ನ ಮಡಿಲಲ್ಲಿ ಒಂದಾಗು. ನಿನಗೆ ಶಾಂತಿ ಸಿಗುತ್ತದೆ” ಎಂದಿತು. ಸಾಗರ ಗರ್ಭದಲ್ಲಿ, ಶಬ್ದ ರಹಿತ ಮೌನಕ್ಕೆ ಹೊರಗೆ ಹುಡಕದೆ, ಒಳಗೆ ಹುಡುಕುವುದರಲ್ಲಿ ಅರ್ಥವಿದೆ ಎಂದು ಅರ್ಥವಾಯಿತು. ನಮ್ಮ ಒಳಗಿನ ಶಾಂತಿಗಾಗಿ ನಾವು ಹೊರಗೆ ಹುಡಕದೆ ಅಂತರಂಗದಲ್ಲಿ ಹುಡುಕಬೇಕು. ಇದೇ ದಿಟವೆಂದು ಅಲೆ ಅರೆತು ಕೊಂಡಿತು.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)