ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ ನೀಲಿ ನೀರಲಿ ತೇಲಿ ಚಂದ್ರಾಮ ಬಂದ ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ ಕಣ್ಣು ಹಾರಿಸಿ ಸೊಕ್ಕಿ ನಕ್ಕವೋ ಚುಕ್ಕಿ ನಭದಲ್ಲಿ ತೇಲಿದವು...

ಮತ್ತೆ ಮೂಡುತಿದೆ

ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ, ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ ಮನೆಯ ಕವಿದಿದ್ದ ಇರುಳನು ಕೊಳೆದು ಹಗಲ ಹಚ್ಚಿದುದೆ ಸಾಲದೆ? ನೆರೆಜನ ಮೊರಯಿಡೆ ಕಾದಿ ಗೆಲಿಸಿದೆವು ಉರುಗೋಲಾಗಿ ಬಳ್ಳಿಗೆ ಎಂದಿನಿಂದಲೋ...

ನಂಬೋ ನೀ ಮೊದಲು

ನಂಬೋ ನೀ ಮೊದಲು - ನಂಬಲು ನೀನಾಗುವೆ ಬದಲು; ನಂಬದ ಬಾಳೇ ಕಂಬನಿ ಕಡಲು ತನಗೆ ತಾನೆ ಉರುಳು. ನಂಬದೆ ಹೋದರೆ ಚಿಂತಿಲ್ಲ ಕಾಣದ ದೈವವನು; ನಂಬದಿದ್ದರೂ ಏನಂತೆ ಜಾಣರ ಧರ್ಮವನು; ನಂಬದೆ ಹೇಗೆ...

ಎಲ್ಲಿ ಮಾನವ ಮತಿಗೆ

ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ...

ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ?

ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ ಬರಿದೆ ಮೂಡುತಿದೆ ಕನಸು ತೆನೆಯೊಡೆವ ಚಿತ್ರ ಬೆಳಕು ನೆರಳಿನ ಹವಳ ಕರಿಮಣಿಯ ಪಾತ್ರದಲಿ ಹಾಯುತಿದೆ ಈ ನೆಲದ ಭಾಗ್ಯಸೂತ್ರ ಯಾರ ಹಮ್ಮಿಗೊ ನಮ್ಮ ಅಭಿಮಾನ ಮಣಿಸಿ ಕೈಗಳೂ...

ಸಾವಿರ ನೇತ್ರದ ಸಾವಿರ ಪಾತ್ರದ

ಸಾವಿರ ನೇತ್ರದ ಸಾವಿರ ಪಾತ್ರದ ಸಹಸ್ರಶೀರ್ಷ ಪುರುಷನೆ ನೀ ಸಾವಿರ ದನಿಗಳ ಗಾನದ ಮೇಳಕೆ ಆಧಾರದ ಶ್ರುತಿಯಾಗಿಹೆ ನೀ ಸಾಗುತ್ತಿರೆ ದೊರೆ ನೀ ರಥದಲ್ಲಿ ಬೆಳುದಿಂಗಳ ಹೊಳೆ ಹರಿಯುವುದು, ನಿನ್ನ ಮೈಯ ಆಭರಣಗಳಾಗಿ ಚಿಕ್ಕೆ...

ಜಯ ಜಯ ಜಯ ಕನ್ನಡ ರಾಜೇಶ್ವರಿ

ಜಯ ಜಯ ಜಯ ಕನ್ನಡ ರಾಜೇಶ್ವರಿ ಶರಣು ಬಂದೆ ಪಾದಕೆ ಭುವನೇಶ್ವರಿ ಪಂಪನ ನುಡಿಮಿಂಚಿನ ಮಣಿಮಾಲೆಗೆ ನಾರಣಪ್ಪ ಕಡೆದ ಭಾವಜ್ವಾಲೆಗೆ ಶಿಲೆಯೆ ಅರಳಿ ನಗುವ ಕಲೆಯ ಲೀಲೆಗೆ ಯಾರು ಸಮವೆ ತಾಯಿ ನಿನ್ನ ಚೆಲುವಿಗೆ?...

ಅಮ್ಮ ನಿನ್ನ ಕರುಣೆಯ

ಅಮ್ಮ ನಿನ್ನ ಕರುಣೆಯ ನಾ ಸದಾ ಮನದಿ ನೆನೆವೆ ನೂರು ರೂಪಗಳಲಿ ನಮ್ಮ ಭಾಗ್ಯವ ನೀ ಬೆಳೆವೆ ಮಲೆನಾಡಿನ ಕಾಡುಗಳಲಿ ಮೈಪಡೆದ ಬಲವೆ, ಅಡಿಕೆ ತೆಂಗು ಸಾಲು ಸಾಲು ಸೇನೆ ನಿಂತ ನಿಲವೆ, ಶಾಲಿವನದ...

ಕಟ್ಟಿದ್ದೇನು ಕುಣಿದಿದ್ದೇನು!

ಕಟ್ಟಿದ್ದೇನು ಕುಣಿದಿದ್ದೇನು ಸಿಂಗರಿಸಿದ್ದು ಅದೇನು! ಒಂದೇ ದಿನದ ಮಂಗಕುಣಿತಕ್ಕೆ ಹಡೆ ವೈಯಾರ ಅದೇನು! ಆರತಿ ಬಂತು, ಅಕ್ಷತೆ ಬಿತ್ತು ಉಘೇ ಉಘೇ ಜನ ಘೋಷ, ನಂದೀಕೋಲು ನೂರು ಹಿಲಾಲು ಕುಣಿತ ಕೇಕೆ ಆವೇಶ. ಭಜನೆ...

ರಾಜ್ಯ ಹಲವು ಆದರೇನು?

ರಾಜ್ಯ ಹಲವು ಆದರೇನು ರಾಷ್ಟ್ರ ನಮಗೆ ಒಂದೇ; ಜಾತಿ ಭಾಷೆ ಎಷ್ಟೆ ಇರಲಿ ಭಾವಮೂಲ ಒಂದೇ. ಬೇರು ಚಿಗುರು ಹೂವು ಕಾಯಿ ಕೊಂಬೆ ಕಾಂಡಗಳಲಿ ಹರಿವುದೊಂದೆ ಜೀವರಸ ಇಡೀ ತರುವಿನಲ್ಲಿ ಥಳ ಥಳ ಥಳ...
cheap jordans|wholesale air max|wholesale jordans|wholesale jewelry|wholesale jerseys