Home / ಕನ್ನಡ ಕವನಗಳು

Browsing Tag: ಕನ್ನಡ ಕವನಗಳು

‘ಭವತಿ ಭಿಕ್ಷಾಂದೇಹಿ’ ಭಿಕ್ಷಾಪಾತ್ರೆ ಹಿಡಿದು ಮನೆ ಮನೆಯಿಂದಲೂ ಬೇಡಿ ತಂದಿದ್ದು ಕರಗದ ದಾರುಣ ಸಂಕಟವನ್ನೇ ಅಗಿದು ಜಗಿದರೂ ತೀರದ ನೋವು ಸುಮ್ಮನೇ ಪಚನವಾದೀತೇ? ಬೊಗಸೆಯಲಿ ಆಪೋಷಿಸಿ ನೀಗಿಕೊಂಡ ಬೋಧಿಸತ್ವನೇನೋ ಬುದ್ಧನಾಗಿಹೋದ! ಆದರೆ ...

ಬುದ್ಧ ಪಾದದ ಮೇಲೆ ಕಣ್ಣೀರ ಹನಿಯುದುರಿದ್ದಕ್ಕೇ ಅದು ಮಳೆಯಾಗಿಹೋಯ್ತು. ಮಿಂದ ತೇವಕ್ಕೇ ಪಾದವೆಲ್ಲಾ ಮಿಡುಕಿ ಹಸಿ ಮಣ್ಣಾಗಿಹೋಯ್ತು. ಆ ಹಸಿಮಣ್ಣ ಬುಡಕ್ಕೆ ಕಣ್ಣುಗಳೂರಿದ್ದೇ ತಡ ಮೊಳಕೆಯೊಡೆದುಬಿಡುವುದೇ!? ಬುದ್ಧ ಪಾದದ ಮೇಲೆ ಗಿಡವರಳಿ ಟೊಂಗೆ ಟೊಂಗ...

ಈ ಗೋಡೆಯಿಂದ ಆ ಗೋಡೆಗೆ ಕಪಾಟಿನಿಂದ ಷೋಕೇಸಿಗೆ ಮುಚ್ಚಿದ ಈ ಬಾಗಿಲಿನಿಂದ ತೆರೆಯದ ಆ ಕಿಟಕಿಯವರೆಗೆ ಹಾರಾಟ ವಿಹ್ವಲ ತುಡಿತ ಮನೆ ಹೊಕ್ಕ ಜೋಗಿಣಿ ಹಕ್ಕಿಯ ತಬ್ಬಲಿ ಅಲೆದಾಟ. ಸುತ್ತ ಸುತ್ತಿ ಸುಳಿದು ಒತ್ತಿ ಬಂದ ಕಂಪನ. ಜನ್ಮಾಂತರದ ಮೂಲ ಜಾಡು ತಡಕುತ್...

‘ಕವಿತೆ ಹುಟ್ಟಿತೇ?’ ಜೀವ ಬಾಯಾಗಿ ಕಾತರದ ಕಣ್ಣಾಗಿ ಸುಕೋಮಲ ರೇಷಿಮೆಯ ಹುಳು ಒದ್ದಾಡುತ್ತಿದೆ ಮುಲುಗುಟ್ಟುತ್ತಾ ನಿರ್ವಾತದ ಗೂಡಿನೊಳಗೇ ಸುಡು ನೀರ ಕಾವಿಗೆ. ದಾರದೆಳೆ ಎಳೆ ಮೂಡಲು, ಬೇರ್ಪಡಬೇಕು ತನುವಿಗಂಟಿದ ತೊಗಲು, ಇನ್ನೆಷ್ಟು ಕು...

ಮುಚ್ಚಿದ ಗೂಡಿನ ಬಾಗಿಲು, ಬಾಗಿಲಿಲ್ಲದ ಬೀದಿ ನಡುವೆ ಲೋಕವ್ಯಾಪಾರಕ್ಕೆ ಸಾಕ್ಷಿ ಒಂದು ಅಬ್ಬೇಪಾರಿ ಹೊಸಿಲು. * ಅತ್ತ ಬಾಯ್ದೆರೆದು ಬಿದ್ದುಕೊಂಡಿರುವ ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ ಕ್ಷಣ ಕ್ಷಣವೂ ಮರುಳಾಗಿ ಬೀಳುವ ಅಸಂಖ್ಯ ಬಡಪಾಯಿ ಜೀವಗಳು ಚ...

ಈ ನೋವು ಸಪಾಟು ಬಯಲಿನಲಿ ತಣ್ಣಗೆ ಹರಿವ ನದಿಯಲ್ಲ ಸೂಜಿ ಕಣ್ಣಿನಲಿ ಬಳುಕುತ್ತಾ ಮೈಕೈ ನೆಗ್ಗಿಸಿ ಹಾದು ತೊಟ್ಟು ತೊಟ್ಟಾಗಿ ಆವರಿಸುತ್ತದೆ ಮಳೆ ನೀರು ಹನಿಹನಿಯಾಗಿ ಭೂಮಿಯಾಳಕ್ಕೆ ಇಳಿಯುತ್ತಾ ಒಳಗನ್ನೇ ಆವರಿಸಿದಂತೆ ಈ ತೇವ ಕೊನೆಗೀಗ ನೋವೆಂದರೆ&#823...

ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇದೆ ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಅದಕ್ಕೆ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆರ್ದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ ಕರಗಿ ...

ಅಯ್ಯೋ…ನೋಡಲ್ಲಿ ಕಂದನನ್ನು ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ? ಮರಕ್ಕಾತು ಜಡವಾಗಿ ಕೂತಿದ್ದಕ್ಕೇ ಅವನನ್ನೇನು ಕೊರಡೆಂದುಕೊಂಡಿದೆಯೋ? ಕಾಲುಚಕ್ರ ಸೋತ ಹೊತ್ತಲ್ಲಿ ಮರಕ್ಕೊರಗುತ್ತಾನೆ ಕುಸಿದು ಅವನೊಂದಿಗೇ ಮರಕ್ಕೂ ಅದರ ಮೇಲಿನ ಸಕಲೆಂಟ...

ಅವ್ವಾ ಅವರು ಕತ್ತಿ ಮೊನೆ ಕೊರಳಿಗೆ ಚುಚ್ಚಿ ತಮಗೆ ಬೇಕೆನಿಸಿದ ನುಡಿ ಅರುಹಲು ಆಗ್ರಹಿಸುತ್ತಿದ್ದಾರೆ ಇವರು ನಾಲಿಗೆಗೇ ಭರ್ಜಿ ನೆಟ್ಟು ತಮಗೊಲ್ಲದ ನುಡಿ ಅರಳದಂತೆ ಕಡಿವಾಣ ಹಾಕಿದ್ದಾರೆ ಅವ್ವಾ…. ಎಂದಿಗೂ ನನ್ನ ನುಡಿಗಳಲ್ಲಿ ನನ್ನೊಳಗಿನ ನಾನ...

ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...