ಸ್ವಪ್ನರಾಜ್ಯದ ಭಾವದೋಜೆಯ ನಡುವೆ ನಡೆದೆನು ತೆಪ್ಪಗೆ, ಮನೋಭೂಮಿಯನುತ್ತು ಅಗಿಯಿತು ತೇಜಪೂರಿತ ಘಟನೆಯು! ಮೆತ್ತಗಾಸಿದ ತಲ್ಪತಳವೇ ನನ್ನ ಯಾತ್ರೆಯ ಭೂಮಿಯು!! ಮೇಲೆ ಭಾನುವು ಬಿಳಿಯ ಮುಗಿಲು ಕೆಳಗೆ ಕೊರಕಲು ದಾರಿಯು; ಹಾದು ನಡೆದೆನು ಏಳುಬೀಳುತ ಏರಿದೆನು...
ಯಾರ ಕಂಡು ಹೆದರಿ ಓಡುವೆ? ಯಾರ ಹಿಡಿಯಲು ಸರ್‍ರ ಸಾಗುವೆ? ಒಂದೆ ದಾರಿಯೊಳೆಂದು ನಡೆಯುವೆ- ಎಲ್ಲಿ ನಿಲ್ಲುವಿ ಹೇಳೆಲೊ? ಬೆಟ್ಟು ಅಗಲದ ದಾರಿ ಮಧ್ಯದಿ ಕಡಿದ ಬಯಲಿನ ಹೊಂಡ ನಡುವಲಿ ಕಂಡ ಕಂಡ ತಗ್ಗು...
ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!! ಈ ಲೋಕ ಈ ರಾಜ್ಯ ಈ ಊರು ಈ ಮನೆ ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ, ಬಲ್ಲಿದ ಬಡವನ ಶತಕೋಟಿ ಸಂಸಾರ- ||ಕಂ|| ಸಾಗರ-ಭೂಮಿಯ ನಡೆ ಕಂಡು ಮೊರೆವುದೊ,...