ಕತ್ತಲೆ ಎನುವುದು ಎಲ್ಲಿ ಇದೆ?

ಕತ್ತಲೆ ಎನುವುದು ಇಲ್ಲವೆ ಇಲ್ಲ ಇರುವುದು ಬೆಳಕೊಂದೇ, ಅರಿಯದೆ ಜನರೋ ಕೂಗಿ ಹೇಳುವರು ಕತ್ತಲೆ ಇದೆಯೆಂದೇ! ಕತ್ತಲೆ ಎನುವುದು ನಮ್ಮದೆ ಸೃಷ್ಟಿ ಕೇವಲ ನಮ್ಮದೆ ಕಲ್ಪನೆ, ಬೆಳಕಿಗೆ ಬೆನ್ನನು ತಿರುಗಿಸಿದಾಗ ಹುಟ್ಟುವ ಭ್ರಮೆಯನ್ನೇ ಕತ್ತಲೆ...

ಬೆಳಕಿನಲೆ ದೀಪಾವಳಿ

ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ. ಸಣ್ಣ ಹಣತೆಯ...

ಬಂದ ವಸಂತ ಬಂದ ಇದೋ

ಬಂದ ವಸಂತ ಬಂದ ಇದೋ ಸೃಷ್ಟಿಗೆ ಪುಳಕವ ತಂದ ಇದೋ ಮರಮರದಲು ಚಿಗುರಿನ ಗಣಿಯ ಹಕ್ಕಿಯ ಉಲ್ಲಾಸದ ದನಿಯ ತೆರೆಸಿದ, ಮಂದಾನಿಲನನು ಕರೆಸಿದ ಹರಸಿದ ಹೊಲಗದ್ದೆಗೆ ತೆನೆಯ. ತೆಳುಮುಗಿಲನು ನೀಲಿಯ ನಭಕೆ ತಿಳಿಭಾವವ ಜನಮಾನಸಕೆ,...

ಬಾಗಿಲ ಬಡಿದಿದೆ ಭಾವೀ ವರ್ಷ

ಬಾಗಿಲ ಬಡಿದಿದೆ ಭಾವೀ ವರ್ಷ ಬಗೆ ಬಗೆ ಭರವಸೆ ನೀಡಿ, ಭ್ರಮೆ ನಮಗಿಲ್ಲ ನೋವೋ ನಲಿವೋ ಬರುವುದ ಕರೆವೆವು ಹಾಡಿ. ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ ಕೂರದೆ ವಿಧಿಯೇ ಇಲ್ಲ, ಕೂತದ್ದೆಲ್ಲ ಪಾಸಾದೀತೆ? ಜೊತೆ...

ಬಾನು ರೆಪ್ಪೆ ಮುಚ್ಚುತಿದೆ

ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ, ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ, ಮಾತಾಡದೆ ಸಂಭ್ರಮದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿಗೂಡುತ್ತಿದೆ ಬೆಳುದಿಂಗಳ ಕೊರಳು! ದಡವ ಕೊಚ್ಚಿ ಹರಿಯುತಿದೆ ನದಿಗೆ ಮಹಾಪೂರ,...

ಬಂದೇ ಬರುವುವು

ಬಂದೇ ಬರುವುವು ಬಂಗಾರದ ಹೊಂಗಿರಣದ ನಾಳೆಗಳು, ಬಣ್ಣ ಬಣ್ಣದಾ ಬದುಕನು ಬರೆಯಲು ತೆರೆದಿದೆ ಹಾಳೆಗಳು. ಎಲ್ಲೆಲ್ಲೂ ಹೊಗೆಯಾಡಿದೆ ನೋವೇ ಅಳುಕದಿರಲಿ ಮನವು, ಕಲಕದೆ ಬಾಳು ತಿಳಿವುದೆ ಹೇಳು ಜಗದ ದುಃಖ ನೋವು? ನಾಳೆಯ ಬಾಳಿನ...

ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ

ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ, ಹಳೆ ದಿನಗಳ ತರಗೆಲೆಗಳ ಸರಿಸಿ ನಡೆದು ಬಾ, ನಿನಗಾಗೇ ಕಾದಿವೆ ಜನರ ಮನಗಳು, ಹೊಸ ತೋರಣ ಕಟ್ಟಿವೆ ಮಣ್ಣ ಮನೆಗಳೂ. ಮರಮರವೂ ಚಾಮರ ನಿನಗೆ...

ಬಾ ಬಾ ಹೊಸ ಗಾಳಿಯೆ

ಬಾ ಬಾ ಹೊಸಗಾಳಿಯೆ, ಹಳೆ ಬಾಳಿಗೆ ಬಾ ಒಣಗಿದೆಲೆಯ ಕಳಚಿ ನಿಂತ ಮೈಯ ತೂರಿ ಬಾ ಮಳೆಗಾಲದ ನವನೀರದ ಹರಸುವ೦ತೆ ಬಾ ಬತ್ತಿ ಹೊಲದ ಚಿತ್ತದಲ್ಲಿ ಜಲ ಚಿಮ್ಮಿಸು ಬಾ ಉದಾಸೀನ ಜೀವಹೀನವಾದುದೆಲ್ಲವೂ ಕೊನೆಯಿರುಳಿನ...

ಹಾಡುವ ಹಕ್ಕಿಗೆ ಹೂವಿನ ರೆಂಬೆ

ಹಾಡುವ ಹಕ್ಕಿಗೆ ಹೂವಿನ ರೆಂಬೆ ಕಂದನ ಕೈಗೆ ಬಣ್ಣದ ಗೊಂಬೆ ಆಶೀರ್ವದಿಸಲಿ ಈ ಹೊಸ ವರ್ಷ ಪ್ರಾಯದ ಗಂಡಿಗೆ ಪ್ರೀತಿಯ ರಂಭೆ ಖಾಲಿ ಆಗಸಕೆ ಕಪ್ಪನೆ ಮೋಡ ಬೆಂದ ಜೀವಕೆ ಬೆಚ್ಚನೆ ಗೂಡ ಬಾಗಿನ...

ಬೇಗನೆ ಬಾ ಚೈತ್ರನೇ

ಬೇಗನೆ ಬಾ ಚೈತ್ರನೇ ಕಾದಿರುವೆವು ನಿನಗೆ ತೋರೋ ಶ್ರೀಮುಖವ ಮಾಗಿ ಕೊರೆದ ಇಳೆಗೆ ಮರಮರವೂ ಬರೆಸಿದೆ ಸನ್ಮಾನದ ಪತ್ರ, ಹೂ ತುಂಬಿದ ಕೊಂಬೆಗಳೋ ಹಕ್ಕಿಗಳಿಗೆ ಛತ್ರ; ಕೂಗುತ್ತಿವೆ ಕೋಗಿಲೆ ಓಲಗದನಿಯಾಗಿ, ಕಾಯುತ್ತಿದೆ ಬರವನು ಜಗವೇ...
cheap jordans|wholesale air max|wholesale jordans|wholesale jewelry|wholesale jerseys