ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ ಮೊದಲು ಕಂಡಷ್ಟೆ ಸವಿಯಾಗಿರುವೆ ಇಂದಿಗೂ. ಮೂರು ಚಳಿಗಾಲಗಳು ಮೂರು ಮಧುಮಾಸಗಳ ಹೆಮ್ಮೆ ಮುಂದಿವೆ ಸುರಿದು ಮರದೆಲ್ಲ ಎಲೆಗಳೂ; ಹಾಗೇ ಮೂರು ವಸಂತ ಹಳದಿ ಬಣ್ಣಕೆ ಬೆಳೆದು ಚೈತ್ರ ಪರಿಮಳವೆಲ್ಲ...
ಎಲೆ ಕಳ್ಳಿ, ವಾಣಿ, ಮೊದಲಿಲ್ಲಿ ಇಡು ಪರಿಹಾರ ಸತ್ಯ ಸೌಂದರ್ಯಗಳ ಉಪೇಕ್ಷೆ ಮಾಡಿದ್ದಕ್ಕೆ; ಸೌಂದರ್ಯ ಸತ್ಯಕ್ಕೆ ನನ್ನೊಲವೆ ಆಧಾರ, ನಿನಗು ಸಹ, ಅಷ್ಟೊಂದು ಘನತೆ ನಿನಗೆ ಅದಕ್ಕೇ. ಉತ್ತರಿಸು ದೇವಿ, ಈ ಮಾತು ಒಪ್ಪುವೆ...
ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ ನಿನ್ನ ಬಲಸತ್ವಗಳ ಉದ್ದೀಪಿಸುವ ಮೂಲ? ಬೀಳುಕವಿತೆಗೆ ನೀಡಿ ರಸೋದ್ದೀಪನವನ್ನ, ಸಣ್ಣದಕೆ ಬಣ್ಣಗಳ ತೀಡಿ ಬಾರಿಸಿ ತಾಳ? ಮರಳಿ ಬಾ ಮರುಳೆ, ಮೈಗಳ್ಳತನದಲಿ ಕಳೆದ ಕಾಲಕ್ಕೆ ಸಮನಾಗಿ...
ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ ಕರಗಿ ಓಡುತ್ತಿರುವ ಸಂವತ್ಸರದ ಸುಖದ ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ, ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ ಚೈತ್ರ-ಕಾರ್ತಿಕ ಅವಧಿ...
ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ - ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ. ದ್ವೇಷ ನಿನ್ನೀ ಕಣ್ಣಿನಲಿ ಎಂದೂ...
ನನ್ನಿಂದ ದೂರವಾಗಲು ಮಾಡು ಏನೆಲ್ಲ, ಈ ಉಸಿರಿರುವ ತನಕ ನೀನು ನನ್ನವನೇ; ನಿನ್ನೊಲವು ತೀರಿತೋ ನನಗೆ ಬಾಳೇ ಇಲ್ಲ, ಬಾಳಿಗವಲಂಬನೆ ನಿನ್ನೊಂದು ಸ್ನೇಹವೇ. ನನಗಿಲ್ಲ ಬಹು ದೊಡ್ಡ ಕೇಡು ಘಟಿಸುವ ಭಯವೆ, ಅತಿ ಸಣ್ಣ...