ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ...
ಅಂತರಂಗದ ಹೂವು ಅರಳಿತು ಶಿವನ ಸುಂದರ ಮಿಲನದಿ ಜಡವು ಜಾರಿತು ಜ್ಯೋತಿ ಚಿಮ್ಮಿತು ಜ್ಞಾನ ಸೂರ್ಯನ ಉದಯದಿ ನಶೆಯು ಏರಿತು ಖುಶಿಯು ತುಂಬಿತು ಮೌನದಾರತಿ ಬೆಳಗಿತು ಬಿಂದು ರೂಪದ ಜ್ಯೋತಿ ಅರಳಿತು ಸಿಂಧು ರೂಪವ...
ಚಿನ್ನದ ಚೆಲುವಿನ ಚಂದದ ಜೀವನ ಹೊನ್ನಿನ ತಂದೆಯು ನೀಡಿದನು ಮುತ್ತಿನ ನಿರ್ಮಲ ಉತ್ತಮ ಜೀವನ ಸತ್ಯದ ತಂದೆಯು ಮಾಡಿದನು ಮಮತೆಯ ಮುರಳಿಯ ಮೋಡಿಯ ಮಂತ್ರಕೆ ಸಕಲವ ಮರೆಯುತ ನಾ ಬಂದೆ ಹೃದಯದ ಕತ್ತಲೆ ಕಾಲ್ತೆಗೆದೋಡಿತು...
ಕಡೆಯ ಗಂಟೆಯು ಹೊಡೆವ ಮುನ್ನವೆ ಶಿವನ ಗಂಟೆಯು ಮೊಳಗಲಿ ಅಂತರಂಗದಿ ದೀಪ ಬೆಳಗಲಿ ಜೀವ ಸುಂದರವಾಗಲಿ ಒಳಗು ಮಧುರಾ ಹೊರಗು ಮಧುರಾ ಬದುಕು ಸುಮಧುರವಾಗಲಿ ಮಾತು ಪರಿಮಳ ತುಂಬಿ ತುಳುಕಲಿ ಮನವು ಮಲ್ಲಿಗೆಯಾಗಲಿ ದಿವ್ಯ...